ರಾಜ್ಯದಲ್ಲಿ 7 ತಿಂಗಳಲ್ಲಿ 305 ರೇಪ್, ಸಿಡಿದೆದ್ದ ಚಿಣ್ಣರಿಂದ ಅಣಕು ಪ್ರದರ್ಶನ

 

 

ಸುದ್ದಿ ಕಣಜ.ಕಾಂ | TALUK | PROTEST
ಶಿವಮೊಗ್ಗ: ರಾಜ್ಯದಲ್ಲಿ ಕೇವಲ ಏಳು ತಿಂಗಳಲ್ಲಿ 305 ಅತ್ಯಾಚಾರ ಪ್ರಕರಣಗಳು ದಾಖಲಾಗಿವೆ. ಅಂದರೆ, ಪ್ರತಿ ತಿಂಗಳು 44 ಪ್ರಕರಣಗಳು ದಾಖಲಾಗಿವೆ. ಆದರೆ, ರಾಜ್ಯ ಸರ್ಕಾರ ಕಣ್ಮುಚ್ಚಿ ಕುಳಿತಿದೆ ಎಂದು ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾದಿಂದ ಸೋಮವಾರ ಪ್ರತಿಭಟನೆ ಮಾಡಲಾಯಿತು.
ನಗರದ ಜಿಲ್ಲಾಧಿಕಾರಿ ಕಚೇರಿಯ ಎದುರು ಚಿಣ್ಣರು ಪೊಲೀಸರ, ನ್ಯಾಯದೇವತೆ, ಸೈನಿಕ ಹೀಗೆ ಹಲವರ ಪೋಷಾಕುಗಳನ್ನು ಧರಿಸಿ ಅಣಕು ಪ್ರದರ್ಶನ ಮಾಡಿದರು.

ಸರ್ಕಾರದಿಂದ ಸಾಂತ್ವನ ಕೇಂದ್ರಗಳ ನಿರ್ಲಕ್ಷ್ಯ

ದೌರ್ಜನ್ಯಕ್ಕೆ ಒಳಗಾದ ಮಹಿಳೆಗೆ ಆಪ್ತ ಸಮಾಲೋಚನೆ ನೀಡಬೇಕು ಎಂಬ ಕಾರಣಕ್ಕೆ ಸಾಂತ್ವನ ಕೇಂದ್ರಗಳನ್ನು ಆರಂಭಿಸಲಾಗಿದೆ. ಆದರೆ, ಸರ್ಕಾರ ಅವುಗಳನ್ನು ನಿರ್ಲಕ್ಷಿಸುತ್ತಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದ್ದಾರೆ.
ನೊಂದ ಮತ್ತು ತುರ್ತು ಅಗತ್ಯ ಇರುವ ಮಹಿಳೆಯರಿಗೆ ತಾತ್ಕಾಲಿಕ ಆಶ್ರಯ, ಆರ್ಥಿಕ ನೆರವು, ಶಿಕ್ಷಣ, ಉದ್ಯೋಗ, ಉಚಿತ ಕಾನೂನು ನೆರವು ಸೇರಿದಂತೆ ಹಲವು ಸಹಾಯ ಒಂದೇ ಸೂರಿನಡಿ ಸಿಗುವುದಕ್ಕಾಗಿ ಕೇಂದ್ರಗಳನ್ನು ಆರಂಭಿಸಲಾಗಿದೆ. ಆದರೆ, ಸರ್ಕಾರ ಇವುಗಳನ್ನು ಕಡೆಗಣಿಸುತ್ತಿದೆ ಎಂದು ಟೀಕಿಸಿದ್ದಾರೆ.
ಸಂಘಟನೆಯ ಜಿಲ್ಲಾ ಮಹಿಳಾ ಸಂಚಾಲಕಿ ಆಯಿಶಾ ಏಜಾಜ್, ಜಿಲ್ಲಾಧ್ಯಕ್ಷ ಮುಜಮ್ಮಿಲ್ ಅನ್ವರ್, ಕಾರ್ಯದರ್ಶಿ ಝೀಷಾನ್, ನಗರ ಅಧ್ಯಕ್ಷ ನದೀಮ್ ಇತರರು ಉಪಸ್ಥಿತರಿದ್ದರು.

https://www.suddikanaja.com/2021/06/09/congress-protest-against-petrol-rate-hike/

error: Content is protected !!