ಶಿವಮೊಗ್ಗದ 2 ಆರೋಗ್ಯ ಕೇಂದ್ರ ಮೇಲ್ದರ್ಜೆಗೇರಿಸಲು ಸರ್ಕಾರಕ್ಕೆ ಪ್ರಸ್ತಾವನೆ, ಯಾವ್ಯಾವುದರಲ್ಲಿ 24/7 ಸೇವೆ

 

 

ಸುದ್ದಿ‌ ಕಣಜ.ಕಾಂ | TALUK | HEALTH
ಶಿವಮೊಗ್ಗ: ತಾಲೂಕಿನ ಮೈದೊಳಲು, ಅರಬಿಳಚಿ ಆರೋಗ್ಯ ಕೇಂದ್ರಗಳನ್ನು ಮೇಲ್ದರ್ಜೆಗೇರಿಸಿ ದಿನದ 24 ಗಂಟೆ ಸೇವೆ ಸಿಗುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕು ಎಂದು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ.
ಈ ಸಂಬಂಧ ಗ್ರಾಮಾಂತರ ಶಾಸಕ‌ ಕೆ.ಬಿ. ಅಶೋಕ್ ನಾಯ್ಕ್ ಅವರು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಕೆ.ಸುಧಾಕರ್ ಅವರಿಗೆ ಮನವಿ‌ ಸಲ್ಲಿಸಿದ್ದಾರೆ.
ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಮೇಲ್ದರ್ಜೆಗೇರಿಸುವ ಹಾಗೂ ಹೊಸದಾಗಿ ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಆರಂಭಿಸುವ ಬಗ್ಗೆ ಕೋರಿದ್ದಾರೆ.

READ | ಮಲೆನಾಡಿಗೆ ಅಪಾಯದ ಮುನ್ಸೂಚನೆ ಎಚ್ಚೆತ್ತುಕೊಳ್ಳದಿದ್ದರೆ ಕಾದಿದೆ ಆಪತ್ತು

ಯಾವ್ಯಾವ ಆರೋಗ್ಯ ಕೇಂದ್ರ
ಶಿವಮೊಗ್ಗ ಗ್ರಾಮಾಂತರ ವಿಧಾನಸಭೆ ಕ್ಷೇತ್ರದ ಭದ್ರಾವತಿ ತಾಲೂಕಿನ ಮೈದೊಳಲು, ಅರಬಿಳಚಿ ಆರೋಗ್ಯ ಕೇಂದ್ರಗಳನ್ನು 24/7 ಆರೋಗ್ಯ ಕೇಂದ್ರಗಳಾಗಿ, ಹೆರಿಗೆ ಆಸ್ಪತ್ರೆಗಳನ್ನಾಗಿ ಮೆಲ್ದರ್ಜೆಗೇರಿಸಬೇಕು. ತಾಲೂಕಿನ ಪಿಳ್ಳಂಗರೆ, ನಿದಿಗೆ ಹಾಗೂ ಸೂಗೂರಿನಲ್ಲಿ ಹೊಸದಾಗಿ ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಪ್ರಾರಂಭಿಸಲು ಈಗಾಗಲೇ ಪ್ರಸ್ತಾವನೆ ಸರ್ಕಾರಕ್ಕೆ ಸಲ್ಲಿಸಲಾಗಿದ್ದು, ತುರ್ತಾಗಿ ಮಂಜೂರು ಮಾಡಿಸಲು ಒತ್ತಾಯಿಸಿದರು.

error: Content is protected !!