ಡೆತ್ ನೋಟ್ ಬರೆದಿಟ್ಟು ನಾಪತ್ತೆ ಪ್ರಕರಣ, ಗಿರಿರಾಜ್ ಕುಟುಂಬದವರಿಂದ ದೂರು ದಾಖಲು, ಇದುವರೆಗಿನ ಅಪ್‍ಡೇಟ್ ಗಳೇನು?

 

 

ಸುದ್ದಿ ಕಣಜ.ಕಾಂ | DISTRICT | CRIME NEWS 
ಶಿವಮೊಗ್ಗ: ಬೆಳಗ್ಗೆ ಮನೆಯಿಂದ ನಾಪತ್ತೆಯಾದ ಗಿರಿರಾಜ್ ಅವರು ಸಂಜೆಯಾದರೂ ಪತ್ತೆಯಾಗಿಲ್ಲ. ಹೀಗಾಗಿ, ಕುಟುಂಬದವರಿಂದ ಜಯನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಲಾಗಿದ್ದು, ಪ್ರಕರಣ ದಾಖಲಾಗಿದೆ.
ಗಿರಿರಾಜ್ ಅವರು ಬರೆದಿದ್ದಾರೆ ಎನ್ನಲಾಗುತ್ತಿರುವ ಡೆತ್‍ನೋಟ್ ವಾಟ್ಸಾಪ್ ನಲ್ಲಿ ವೈರಲ್ ಆಗಿದ್ದು, ಅದರಲ್ಲಿ
ಹಿರಿಯ ಅಧಿಕಾರಿಗಳ ವಿರುದ್ಧ ನೇರವಾಗಿ ಆರೋಪಿಸಲಾಗಿದೆ. ಅಧಿಕ ಕಾರ್ಯ ಒತ್ತಡದಿಂದಾಗಿ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದಾಗಿ ತಿಳಿಸಿದ್ದಾರೆ.

READ | ಡೆತ್ ನೋಟ್ ಬರೆದಿಟ್ಟು ಡಿಸಿ ಕಚೇರಿ ಸಿಬ್ಬಂದಿ ನಾಪತ್ತೆ, ಕಾರಣವೇನು?

ಭದ್ರಾವತಿ ಬಳಿ ನೆಟ್ವರ್ಕ್ ಆಫ್
ಮಂಗಳವಾರ ಬೆಳಗ್ಗೆ ಏಕಾಏಕಿ ಮನೆ ಬಿಟ್ಟು ಹೋಗಿದ್ದಾರೆ. ಆದರೆ, ನೆಟ್ವರ್ಕ್ ಅನ್ನು ಪರಿಶೀಲಿಸಿದಾಗ ಭದ್ರಾವತಿ ತಾಲೂಕಿನ ಎಂ.ಸಿ. ಹಳ್ಳಿ ಬಳಿ ಮೊಬೈಲ್ ಆಫ್ ಆಗಿರುವುದಾಗಿ ತಿಳಿದುಬಂದಿದೆ. ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ.

error: Content is protected !!