JOBS IN SAINIK SCHOOL | ಸೈನಿಕ ಶಾಲೆಯಲ್ಲಿ‌ ನಡೆಯಲಿದೆ‌ ವಿವಿಧ ಹುದ್ದೆಗಳ ಭರ್ತಿ, ಕೈತುಂಬ ಸಂಬಳ

 

 

ಸುದ್ದಿ‌ ಕಣಜ.ಕಾಂ | KARNATAKA | JOB JUNCTION
ಬೆಂಗಳೂರು: ಕೇಂದ್ರ ಗೃಹ ಸಚಿವಾಲಯದ ಕೊಡಗು‌ ಸೈನಿಕ ಶಾಲೆಯಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ‌ ಭರ್ತಿಗೆ ಅರ್ಜಿ ಆಹ್ವಾನಿಸಲಾಗಿದೆ.
ಅರ್ಜಿ ಸಲ್ಲಿಸಲು ಅಕ್ಟೋಬರ್ 16 ಅಂತಿಮ ದಿನವಾಗಿದೆ. ಈ‌ ಹುದ್ದೆಗಳಿಗೆ ಅಭ್ಯರ್ಥಿಗಳನ್ನು ಗುತ್ತಿಗೆ‌ ಆಧಾರದ ಮೇಲೆ‌ ಹಾಗೂ ದಿನಗೂಲಿ ಆಧಾರದ ಮೇಲೆ ನೇಮಕ ಮಾಡಲಾಗುವುದು.

READ | ಮೆಟ್ರೋದಲ್ಲಿ‌ ಉದ್ಯೋಗ ಅವಕಾಶ

ಯಾವುದು, ಎಷ್ಟು ಹುದ್ದೆಗಳು?
ಟ್ರೈನಿ‌ ಗ್ರ್ಯಾಜ್ಯುಯೆಟ್ ಟೀಚರ್ (ಟಿಜಿಟಿ)ಹಿಂದಿ 1 ಹುದ್ದೆ, ಕೌನ್ಸೆಲರ್ 1, ಕ್ರಾಫ್ಟ್ ಇನ್ ಸ್ಟ್ರಕ್ಟರ್ 1, ಬ್ಯಾಂಡ್ ಮಾಸ್ಟರ್ 1, ವಾರ್ಡನ್‌ (ಪುರುಷ) 2 ಹಾಗೂ ಸಾಮಾನ್ಯ ನೌಕರರು(ಪುರುಷ) 4 ಹುದ್ದೆಗಳ ನೇಮಕಾತಿ ನಡೆಯಲಿದೆ.
ಆಯಾ ಹುದ್ದೆಗೆ ಅನುಗುಣವಾಗಿ ಸಂಭಾವನೆ ನೀಡಲಾಗುವುದು. ಹೀಗಾಗಿ, ಅಭ್ಯರ್ಥಿಗಳಿಗೆ ಇದೊಂದು ಸದಾವಕಾಶವಾಗಿದೆ.
ಆಯ್ಕೆ ಪ್ರಕ್ರಿಯೆ ಹೇಗೆ?
ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳಿಗೆ ಲಿಖಿತ ಪರೀಕ್ಷೆ ನಡೆಸಲಾಗುವುದು, ನಂತರ ಕೌಶಲ ಪರೀಕ್ಷೆ, ಡೆಮೊನ್ ಸ್ಟ್ರೇಷನ್‌ ಹಾಗೂ ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುವುದು.
ಅರ್ಜಿಯನ್ನು‌ ಇಲ್ಲಿಗೆ ಸಲ್ಲಿಸಿ
ಭರ್ತಿ ಮಾಡಿದ ಅರ್ಜಿಯೊಂದಿಗೆ ಸ್ವಯಂ ವಿಳಾಸದ ಎನ್ವಲಪ್ ಹಾಕಿ ₹25 ಸ್ಟ್ಯಾಂಪ್ ಅಂಟಿಸಿ ‘The Principal, Sainik School Kodagu, PO:Kudige, Kushalnagar Taluk, Dist. Kodagu, Karnataka, PIN 571 232’ ವಿಳಾಸಕ್ಕೆ ಡಿಡಿಯೊಂದಿಗೆ ಕಳುಹಿಸತಕ್ಕದ್ದು.
ಗಮನಿಸಿ | ಸಂಬಂಧಪಟ್ಟ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅಗತ್ಯವಿರುವ ವಿದ್ಯಾರ್ಹತೆ, ಅನುಭವ, ಶುಲ್ಕ ಇತ್ಯಾದಿ ವಿಚಾರಗಳಿಗಾಗಿ ಕೆಳಗಿನ ನೋಟಿಫಿಕೇಷನ್ ಲಿಂಕ್ ಮೇಲೆ ಕ್ಲಿಕ್ ಮಾಡಿ, ಓದಿ.

NOTIFICATION & APPLICATION FORM

https://www.suddikanaja.com/2021/09/24/job-vacancy-available-in-water-resource-deparment/

 

error: Content is protected !!