JOBS IN ESIC | ಇಎಸ್‍ಐಸಿ ಡೆಂಟಲ್ ಕಾಲೇಜಿನಲ್ಲಿ ಉದ್ಯೋಗ ಅವಕಾಶ

 

 

ಸುದ್ದಿ ಕಣಜ.ಕಾಂ | KARNATAKA | JOB JUNCTION
ಬೆಂಗಳೂರು: ಕಲಬುರಗಿಯಲ್ಲಿರುವ ಇಎಸ್.ಐಸಿ ದಂತ ಕಾಲೇಜಿನಲ್ಲಿ ವಿವಿಧ ಹುದ್ದೆಗಳಿಗೆ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಅಕ್ಟೋಬರ್ 21ರಂದು ಬೆಳಗ್ಗೆ 9.11ರೊಳಗೆ ಅರ್ಜಿಗಳನ್ನು ಸಲ್ಲಿಸುವಂತೆ ಅಧಿಸೂಚನೆಯಲ್ಲಿ ಸೂಚಿಸಲಾಗಿದೆ.
ಭರ್ತಿ ಮಾಡಿದ ಅರ್ಜಿ ನಮೂನೆಯನ್ನು ಜಾಹೀರಾತು ಜೊತೆಗೆ ತುಂಬಿ ಕಲಬುರಗಿಯಲ್ಲಿರುವ ಡೆಂಟಲ್ ಕಾಲೇಜಿಗೆ ಸಲ್ಲಿಸಬೇಕು. ಗುತ್ತಿಗೆ ಆಧಾರದ ಮೇಲೆ ಟ್ಯೂಟರ್ ಹುದ್ದೆಗಳನ್ನು ಭರ್ತಿ ಮಾಡಲಾಗುವುದು.

21 ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದ್ದು, ಅಭ್ಯರ್ಥಿಗಳು 30 ವರ್ಷ ಮೀರಿರುವಂತಿಲ್ಲ. ಎಸ್ಸಿ, ಎಸ್ಟಿ ಇತರ ವರ್ಗದರಿಗೆ ವಯೋಮಿತಿ ಸಡಿಲಿಕೆ ನೀಡಲಾಗಿದೆ. ಸಾಮಾನ್ಯ ವರ್ಗ ಅಡಿ ಅರ್ಜಿ ಸಲ್ಲಿಸುವ ಎಸ್‍ಸಿ, ಎಸ್‍ಟಿ, ಒಬಿಸಿ ಅಭ್ಯರ್ಥಿಗಳಿಗೆ ಯಾವುದೇ ವಯಸ್ಸಿನ ಸಡಿಲಿಕೆ ಇರುವುದಿಲ್ಲ. ಅರ್ಜಿ ಸಲ್ಲಿಸುವವರು ಯಾವುದೇ ವಿಶ್ವವಿದ್ಯಾಲಯದಿಂದ ಡೆಂಟಲ್ ಸರ್ಜರಿಯಲ್ಲಿ ಪದವಿ ಪೂರ್ಣಗೊಳಿಸಿರಬೇಕು. ಕನಿಷ್ಠ 1 ವರ್ಷ ಅನುಭವ ಹೊಂದಿರಬೇಕು.

ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳು ಅಕ್ಟೋಬರ್ 21ರಂದು ಬೆಳಗ್ಗೆ 9 ಗಂಟೆಗೆ ಡೆಂಟಲ್ ಕಾಲೇಜು ಕ್ಯಾಂಪಸ್ ನಲ್ಲಿ ಕಡ್ಡಾಯವಾಗಿ ಹಾಜರು ಇರಬೇಕು. ಅದೇ ದಿನ ಅರ್ಹ ಅಭ್ಯರ್ಥಿಗಳಿಗೆ 30 ಅಂಕಗಳ ಲಿಖಿತ ಪರೀಕ್ಷೆ ನಡೆಸಲಾಗುವುದು. ಆಯ್ಕೆಯಾದವರ ಹೆಸರುಗಳನ್ನು 5 ಗಂಟೆ ಶಾರ್ಟ್ ಲಿಸ್ಟ್ ಮಾಡಿ ಪ್ರಕಟಿಸಲಾಗುವುದು. ಆಯ್ಕೆಯಾದವರಿಗೆ 22ರಂದು ಸಂದರ್ಶನ ನಡೆಸಲಾಗುವುದು. ಸಂದರ್ಶನ ವೇಳೆ ಎಲ್ಲ ಮೂಲ ದಾಖಲಾತಿಗಳನ್ನು ಜೊತೆಯಲ್ಲಿ ತರತಕ್ಕದ್ದು.

NOTIFICATION

WEBSITE

https://www.suddikanaja.com/2021/09/28/job-recruitment-in-karnataka-for-3006-posts/

error: Content is protected !!