ಸುದ್ದಿ ಕಣಜ.ಕಾಂ
ಶಿವಮೊಗ್ಗ: ಸೋಂಕು ತಡೆಗೆ ರಾಜ್ಯ ಸರ್ಕಾರ ಕಟ್ಟುನಿಟ್ಟಿನ ಕ್ರಮಕೈಗೊಂಡಿದ್ದು, ಅದರ ಬೆನ್ನಲ್ಲೇ ಕೊರೊನಾ ಪಾಸಿಟಿವ್ ಪ್ರಕರಣಗಳಲ್ಲಿ ಶುಕ್ರವಾರ ಭಾರಿ ಇಳಿಕೆಯಾಗಿದೆ.
720 ಮಂದಿಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದ್ದು, ಅದರಲ್ಲಿ 28 ವಿದ್ಯಾರ್ಥಿಗಳು, 12 ಸಿಬ್ಬಂದಿ ಇದ್ದಾರೆ. 577 ಜನ ಗುಣಮುಖರಾಗಿದ್ದಾರೆ.
1,555 ಮಾದರಿ ಸಂಗ್ರಹಿಸಲಾಗಿದೆ. 1,103 ನೆಗೆಟಿವ್ ಬಂದಿದೆ. ಸೋಂಕಿತರು ಮೆಗ್ಗಾನ್ ನಲ್ಲಿ 600, ಡಿಸಿಎಚ್ಸಿನಲ್ಲಿ 356, ಕೋವಿಡ್ ಕೇರ್ ಸೆಂಟರ್ ನಲ್ಲಿ 325, ಖಾಸಗಿ ಆಸ್ಪತ್ರೆಯಲ್ಲಿ 508, ಹೋಂ ಐಸೋಲೇಷನ್ ನಲ್ಲಿ 4835, ಟ್ರಿಯೇಜ್ ನಲ್ಲಿ 653 ಜನ ಸೋಂಕಿತರಿದ್ದಾರೆ. 7277 ಸಕ್ರಿಯ ಪ್ರಕರಣಗಳಿವೆ.
ತಾಲೂಕುವಾರು ವರದಿ | ಶಿವಮೊಗ್ಗದಲ್ಲಿ 209, ಭದ್ರಾವತಿ 103, ಶಿಕಾರಿಪುರ 41, ತೀರ್ಥಹಳ್ಳಿ 61, ಸೊರಬ 78, ಸಾಗರ 171, ಹೊಸನಗರ 31, ಬಾಹ್ಯ ಜಿಲ್ಲೆಯ 26 ಜನರಲ್ಲಿ ಸೋಂಕು ಪತ್ತೆಯಾಗಿದೆ.