OLXನಲ್ಲಿ ವೈದ್ಯರಿಗೆ ವಂಚನೆ, ಹಣ ಪಡೆದವನು ನಾಪತ್ತೆ!

 

 

ಸುದ್ದಿ ಕಣಜ.ಕಾಂ | DISTRICT | CYBER CRIME
ಶಿವಮೊಗ್ಗ: ತೀರ್ಥಹಳ್ಳಿ ತಾಲೂಕಿನ ಕೋಣಂದೂರು ಗ್ರಾಮದ ಆಯುರ್ವೇದ ವೈದ್ಯರೊಬ್ಬರಿಗೆ ಓ.ಎಲ್.ಎಕ್ಸ್.ನಲ್ಲಿ ರ‌್ಯಾಕ್ ಮಾರಾಟ ಮಾಡುವುದಾಗಿ ನಂಬಿಸಿ ಮೋಸ ಮಾಡಲಾಗಿದೆ.

ಒ.ಎಲ್‍.ಎಕ್ಸ್.ನಲ್ಲಿ ಹಳೇ ರ‌್ಯಾಕ್ ಮಾರಾಟದ ಮಾಹಿತಿಯನ್ನು ಹಾಕಿದ ಅಪರಿಚಿತ ವ್ಯಕ್ತಿಯೊಬ್ಬರಿಗೆ ವೈದ್ಯರು ಕರೆ ಮಾಡಿ ರ‌್ಯಾಕ್ ಬಗ್ಗೆ ವಿಚಾರಿಸಿದ್ದಾರೆ. ಅದಕ್ಕಾಗಿ, ಹಣ ಸಂದಾಯ ಮಾಡುವಂತೆ ಸೂಚಿಸಿದ್ದು, ವೈದ್ಯರು ಸಹ ಎರಡು ಹಂತದಲ್ಲಿ ಒಟ್ಟು ₹31,000 ಕಳುಹಿಸಿದ್ದಾರೆ.

ತದನಂತರ, ಮಾರಾಟ ಮಾಡುವುದಾಗಿ ಹೇಳಿದ್ದ ವ್ಯಕ್ತಿಯ ಮೊಬೈಲ್ ಸ್ವಿಚ್ ಆಫ್ ಆಗಿದೆ. ಶಿವಮೊಗ್ಗ ಸಿಇಎನ್ ಠಾಣೆಗೆ ದೂರು ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.

error: Content is protected !!