ಒಂದೂವರೆ ತಿಂಗಳ ಹಿಂದೆ ಮೃತಪಟ್ಟಿದ್ದ ಆನೆಯ ಕಳೆಬರ ಮುತ್ತೂಡಿನಲ್ಲಿ ಪತ್ತೆ, ಕಾರಣ ನಿಗೂಢ

 

 

ಸುದ್ದಿ ಕಣಜ.ಕಾಂ | KARNATAKA | WILD LIFE
ಚಿಕ್ಕಮಗಳೂರು: ಮುತ್ತೂಡಿ ಪ್ರಾದೇಶಿಕ ಅರಣ್ಯ ವ್ಯಾಪ್ತಿಯ ಜಾಗರ ಅರಣ್ಯದಲ್ಲಿ ಆನೆಯೊಂದರ ಕಳೆವರ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಕಾರಣ ನಿಗೂಢವಾಗಿದೆ.
ಮೂಲಗಳ ಪ್ರಕಾರ ಮೃತಪಟ್ಟಿರುವುದು ಹೆಣ್ಣು ಆನೆ ಎಂದು ಶಂಕಿಸಲಾಗಿದೆ. 15-20 ವಯಸ್ಸಿನ ಬೃಹತ್ ಕಾಯದ ಆನೆಯ ದೇಹ ಸಂಪೂರ್ಣ ಜೀರ್ಣವಾಗಿದ್ದು, ಬರೀ ಅಸ್ಥಿಪಂಜರ ಮಾತ್ರ ಕಾಣುತ್ತಿದೆ. ಹೀಗಾಗಿ, ಸಾವಿಗೆ ಖಚಿತ ಕಾರಣ ಗೊತ್ತಾಗಿಲ್ಲ. ತಜ್ಞರ ಪ್ರಕಾರ, ಈ ಆನೆ ಮೃತಪಟ್ಟು ಒಂದೂವರೆ ತಿಂಗಳಾಗಿರಬಹುದು ಎನ್ನಲಾಗಿದೆ.
ಮೆಸ್ಕಾಂ ಸಿಬ್ಬಂದಿಯಿಂದಾಗಿ ಬೆಳಕಿಗೆ ಬಂದ ಪ್ರಕರಣ
ಕಳೆದ ಎರಡು ದಿನಗಳ ಹಿಂದೆ ವಿದ್ಯುತ್ ತಂತಿ ಕಡಿದು ಬಿದ್ದಿದ್ದು, ಅದನ್ನು ವೀಕ್ಷಿಸಲು ಹೋದಾಗ ಆನೆಯ ಕಳೆಬರ ಮೆಸ್ಕಾಂ ಸಿಬ್ಬಂದಿಗೆ ಕಣ್ಣಿಗೆ ಬಿದ್ದಿದೆ. ತಕ್ಷಣ ಅವರು ಅರಣ್ಯ ಇಲಾಖೆ ಸಿಬ್ಬಂದಿಗೆ ಈ ಕುರಿತು ಮಾಹಿತಿ ನೀಡಿದ್ದಾರೆ. ಆಗ ಭದ್ರಾ ವನ್ಯಜೀವಿ ವಿಭಾಗದ ಪಶುವೈದ್ಯಾಧಿಕಾರಿ ಡಾ.ಯಶಸ್ ಒಡೆಯರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕಳೆಬರ ಪರೀಕ್ಷೆಗೆ ಕಳುಹಿಸಲಾಗಿದೆ. ವರದಿ ಬಂದ ನಂತರವೇ ಆನೆಯ ಸಾವಿಗೆ ಕಾರಣ ಗೊತ್ತಾಗಲಿದೆ.

https://www.suddikanaja.com/2021/04/04/elephant-attack-on-doctor-at-sakrebailu-elephant-camp/

error: Content is protected !!