ರಾಜ್ಯದಲ್ಲಿ 18 ಲಕ್ಷ ಜನಸಂಖ್ಯೆ ಇರುವ ತ್ರಿಮತಸ್ಥ ಚರ್ಮಕಾರರ ಪ್ರತ್ಯೇಕ ನಿಗಮ ಸ್ಥಾಪನೆಗೆ ಒತ್ತಾಯ, ಕಾರಣಗಳೇನು?

 

 

ಸುದ್ದಿ ಕಣಜ.ಕಾಂ | CITY | RELIGIOUS 
ಶಿವಮೊಗ್ಗ: ರಾಜ್ಯದಲ್ಲಿ ರಾಜಕೀಯ ಹಾಗೂ ಆರ್ಥಿಕವಾಗಿ ಹಿಂದುಳಿದಿರುವ ತ್ರಿಮತಸ್ಥ ಚರ್ಮಕಾರರ ಜಾತಿಗೆ ಪ್ರತ್ಯೇಕ ಅಭಿವೃದ್ಧಿ ನಿಗಮ ನೀಡಬೇಕು ಎಂದು ಕರ್ನಾಟಕ ತ್ರಿಮತಸ್ಥ ಚರ್ಮಕಾರ ಪರಿಷತ್ ಜಿಲ್ಲಾ ಸಂಚಾಲಕ ಆರ್.ಸತ್ಯನಾರಾಯಣ್ ಒತ್ತಾಯಿಸಿದರು.
ಮಾಧ್ಯಮಗೋಷ್ಠಿಯಲ್ಲಿ ಸೋಮವಾರ ಮಾತನಾಡಿ, ತ್ರಿಮಸ್ಥ ಚರ್ಮಕಾರರ ಒಟ್ಟು ಜನಸಂಖ್ಯೆಯು 18 ಲಕ್ಷಕ್ಕೂ ಅಧಿಕವಿದೆ ಎಂದು ಹೇಳಿದರು.
ಆಧುನಿಕತೆಯ ಭರಾಟೆಗೆ ಸಿಲುಕಿ ಪ್ರಸ್ತುತ ಚರ್ಮಕಾರರ ಕುಲಕಸುಬು ಅವಸಾನವಾಗುತ್ತಿದೆ. 10 ಲಕ್ಷಕ್ಕಕೂ ಅಧಿಕ ಯುವಪೀಳಿಗೆಗೆ ಉದ್ಯೋಗವಿಲ್ಲ. ಹೀಗಾಗಿ, ಸರ್ಕಾರ ಪ್ರತ್ಯೇಕ ನಿಗಮ ಸ್ಥಾಪನೆಗೆ ಮುಂದಾಗಬೇಕು ಎಂದು ಒತ್ತಾಯಿಸಿದರು.
ಪರಿಷತ್ ರಾಜ್ಯ ಸಂಚಾಲಕ ಗುರುರಾಜ್, ಚಂದ್ರಶೇಖರ್, ಚನ್ನವೀರಪ್ಪ ಗಾಮನಕಟ್ಟೆ, ಎಲ್. ಮಂಜುನಾಥ್ ಉಪಸ್ಥಿತರಿದ್ದರು.

error: Content is protected !!