ಸಕ್ರೆಬೈಲು ಆನೆಬಿಡಾರದಲ್ಲಿ ಹಬ್ಬವೋ ಹಬ್ಬ, ಶಿವಮೊಗ್ಗ ದಸರಾದಲ್ಲಿ ಭಾಗವಹಿಸಲಿವೆ 2 ಆನೆ

 

 

ಸುದ್ದಿ ಕಣಜ.ಕಾಂ | DISTRICT | SHIVAMOGGA DASARA
ಶಿವಮೊಗ್ಗ: ನಗರದ ಸಕ್ರೆಬೈಲು ಆನೆಬಿಡಾರದಲ್ಲಿ ಮಂಗಳವಾರ ಬೆಳಗ್ಗೆ ಹಬ್ಬದ ವಾತಾವರಣವಿತ್ತು. ಬೆಳಗ್ಗೆ ಎದ್ದು ಸ್ನಾನ ಮುಗಿಸಿ ತಮ್ಮ ಸ್ಥಾನಗಳಲ್ಲಿ ಗಾಂಭೀರ್ಯದಿಂದ ನಿಲ್ಲುವ ಗಜ ಪಡೆಗೆ ವಿಶೇಷ ಪೂಜೆ ಸಲ್ಲಿಸಲಾಯಿತು.

Sakrebailu Epephant camp 2
ಶಿವಮೊಗ್ಗದ ಸಕ್ರೆಬೈಲು ಆನೆಬಿಡಾರದಲ್ಲಿ ಗಜಪಡೆಯನ್ನು ಪೂಜಿಸುತ್ತಿರುವುದು.

ಶಿವಮೊಗ್ಗ ದಸರಾ‘ದಲ್ಲಿ ಭಾಗವಹಿಸಲಿರುವ ಸಾಗರ ಮತ್ತು ಭಾನುಮತಿ ಆನೆಗಳಿಗೆ ಹೂವಿನ ಮಾಲೆ ಹಾಕಿ, ಕುಂಕುಮವಿಟ್ಟು ನಮಸ್ಕರಿಸಲಾಯಿತು.
ದಸರಾ ಉತ್ಸವ ಸಮಿತಿಯು ಆನೆಬಿಡಾರಕ್ಕೆ ಭೇಟಿ ನೀಡಿ ಗಜಪಡೆ ಹಾಗೂ ಸಕ್ರೆಬೈಲು ಆನೆಬಿಡಾರದ ಅಧಿಕಾರಿಗಳಿಗೆ ಪ್ರೀತಿಯಿಂದ ಆಹ್ವಾನಿಸಲಾಯಿತು.
ಮೇಯರ್ ಸುನೀತಾ ಅಣ್ಣಪ್ಪ, ಉಪ ಮೇಯರ್ ಶಂಕರ್ ಗನ್ನಿ, ಪಾಲಿಕೆ ಸದಸ್ಯರಾದ ಎಸ್.ಎನ್. ಚನ್ನಬಸಪ್ಪ, ಸುವರ್ಣಾ ಶಂಕರ್, ಸುರೇಖಾ ಮುರಳೀಧರ್, ವಿಶ್ವಾಸ್, ಧೀರರಾಜ್ ಹೊನ್ನವಿಲೆ, ಶಿವಕುಮಾರ್, ಜ್ಞಾನೇಶ್ವರ್, ನಾಗರಾಜ್, ಆರತಿ ಆ.ಮ. ಪ್ರಕಾಶ್ ಉಪಸ್ಥಿತರಿದ್ದರು.

error: Content is protected !!