ಲಾಕ್‍ಡೌನ್ ಲವ್ ಸ್ಟೋರಿ, ‘ಒಂದು ಪ್ರೀತಿ ಎರಡು ಕನಸು’

 

 

ಸುದ್ದಿ ಕಣಜ.ಕಾಂ | KARNATAKA | TALENT JUNCTION
ಶಿವಮೊಗ್ಗ: ಲಾಕ್ ಡೌನ್ ಸಮಯದಲ್ಲಿ ನಡೆದ ಘಟನೆಯ ಆಧಾರದ ಮೇಲೆ ಕಿರುಚಿತ್ರವೊಂದು ಸಿದ್ಧವಾಗುತ್ತಿದ್ದು, ಯುವ ಮನಸ್ಸುಗಳಿಗೆ ಹತ್ತಿರವಾಗಲಿದೆ.
`ಒಂದು ಪ್ರೀತಿ ಎರಡು ಕನಸು’ ಹೆಸರಿನ ಕಿರುಚಿತ್ರವನ್ನು ಹಲವು ಲೊಕೇಶನ್ ಗಳಲ್ಲಿ ಶೂಟಿಂಗ್ ಮಾಡಲಾಗಿದೆ. ಚಿತ್ರಕ್ಕೆ ನಿರ್ಮಾಪಕಿಯಾಗಿ ಮಂಜುಳಾ (ಮಸ್ಕಿ), ಛಾಯಾಗ್ರಹಣ ಮೋಹನ್ ರಾಜು (ಬೆಂಗಳೂರು), ನಿರ್ದೇಶಕ ಅಭಿಲಾಷ್ (ಹಾಸನ) ಮಾಡಿದ್ದಾರೆ.
ನಿರ್ದೇಶಕ ಅಭಿಲಾಷ್ ಹಾಸನ ಅವರು ತಾವು ಕಂಡ ಪ್ರೇಮ ಕಥೆಯನ್ನು ಕಿರುಚಿತ್ರ ಮೂಲಕ ತೋರಿಸಲು ಹೊರಟಿದ್ದಾರೆ. ಈ ಚಿತ್ರಕ್ಕೆ ಅಭಿಲಾಷ್ ಹಾಸನ ಅವರು ಚಿತ್ರಕಥೆ ಹಾಗೂ ಸಂಭಾಷಣೆ ಬರೆದಿದ್ದಾರೆ.
ದೇವನಹಳ್ಳಿ ಸುತ್ತ ಚಿತ್ರೀಕರಣ
ಕೆಲವು ದಿನಗಳ ಹಿಂದಷ್ಟೇ ದೇವನಹಳ್ಳಿಯಲ್ಲಿ ಚಿತ್ರೀಕರಿಸುವ ಮೂಲಕ ಚಿತ್ರೀಕರಣ ಆರಂಭವಾಗಿದೆ. ಈ ಚಿತ್ರದಲ್ಲಿ ನಾಯಕ ನಟನಾಗಿ ಮೌನೇಶ್ ರಾಠೋಡ್ (ಮಸ್ಕಿ) ಮತ್ತು ನಾಯಕಿಯಾಗಿ ಪಲ್ಲವಿ (ದಾವಣಗೆರೆ) ಅವರು ನಟಿಸಿದ್ದಾರೆ.
ಈಗಾಗಲೇ ಮೌನೇಶ್ ಮತ್ತು ಪಲ್ಲವಿ ಅವರು ತಮ್ಮ ಮನೋಜ್ಞ ನಟನೆಯ ಮೂಲಕ ಹಲವು ಧಾರಾವಾಹಿಗಳಲ್ಲಿ ಮಿಂಚಿದ್ದಾರೆ.

ಅಳಿಗುಳಿಮನೆ, ಸಿಲ್ಲಿ ಲಲ್ಲಿ, ಕಾದಂಬರಿ, ಕಣಜ, ರೋಬೋ ಫ್ಯಾಮಿಲಿ ಈ ಧಾರಾವಾಹಿಗಳಲ್ಲಿ ಚಿಕ್ಕ ಚಿಕ್ಕ ಪಾತ್ರದಲ್ಲಿ ನಟಿಸಿದ್ದಾರೆ. ತಮ್ಮದೇ ಆದ ನಿಹಾರಿಕ ಕ್ರಿಯೇಶನ್ಸ್ ಬ್ಯಾನರ್ ನಲ್ಲಿ ಎರಡು ಕಿರುಚಿತ್ರವನ್ನು ನಿರ್ಮಾಣ, ನಾಯಕ ನಟನಾಗಿ ನಟಿಸಿದ್ದಾರೆ.

ಇವರು ಈಗಾಗಲೇ ‘ಪ್ರೀತಿ ಬೆಸೆದ ಕೊರೊನಾ’, ‘ಯಮ ಧರ್ಮರಾಜ’ ಎಂಬ ಕಿರುಚಿತ್ರವನ್ನು ಮಾಡಿದ್ದು, ಈಗ ಮೂರನೇ ಪ್ರಾಜೆಕ್ಟ್‍ಗೆ ಕೈಹಾಕಿದ್ದಾರೆ.
ಒಂದು ಪ್ರೀತಿ ಎರಡು ಕನಸು ತಾರಾಗಣ
ಮಲ್ಲಿಕಾರ್ಜುನ್ (ಕೊಪ್ಪಳ), ರೂಪಾ (ವಾಸು) (ಬೆಂಗಳೂರು) ಮತ್ತಿತರು ಈ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಬೆಂಗಳೂರಿನ ಸುತ್ತಮುತ್ತ ಈ ಚಿತ್ರವನ್ನು ಚಿತ್ರೀಕರಿಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ.

https://www.suddikanaja.com/2021/04/29/tirthahalli-girl-in-cinema/

error: Content is protected !!