ಕಾಂಗ್ರೆಸ್, ಜೆಡಿಎಸ್ ಇನ್ನು ಮುಂದಾದರೂ ನೆಗೆಟಿವ್ ಪಾಲಿಟಿಕ್ಸ್ ಕೈಬಿಡಲಿ: ಸವದಿ

 

 

ಸುದ್ದಿ ಕಣಜ.ಕಾಂ
ಬೆಂಗಳೂರು: ಶಿರಾ ಮತ್ತು ರಾಜರಾಜೇಶ್ವರಿ ನಗರ ವಿಧಾನ ಸಭೆ ಉಪ ಚುನಾವಣೆಗಳಲ್ಲಿ ಜಯ ಸಾಧಿಸುವ ಮೂಲಕ ಬಿಜೆಪಿ ಮತ್ತೊಮ್ಮೆ ಅಗ್ನಿ ಪರೀಕ್ಷೆಯಲ್ಲಿ ಯಶಸ್ವಿಯಾಗಿ ದಾಖಲೆ ನಿರ್ಮಿಸಿದೆ ಎಂದು ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಉಪ ಚುನಾವಣೆಯನ್ನು ಅಸ್ತ್ರವಾಗಿ ಇಟ್ಟುಕೊಂಡು ಕಾಂಗ್ರೆಸ್ ಮುಖಂಡರು ರಾಜ್ಯ ಸರ್ಕಾರದ ಆಡಳಿತವನ್ನು ಅಸ್ಥಿರಗೊಳಿಸಲು ಹುನ್ನಾರ ನಡೆಸಿದ್ದರು. ಆದರೆ, ಈ ಎರಡೂ ಕ್ಷೇತ್ರಗಳ ಮತದಾರರು ಈ ಕುತಂತ್ರಕ್ಕೆ ತಕ್ಕ ಪಾಠ ಕಲಿಸಿದ್ದಾರೆ ಎಂದು ತಿಳಿಸಿದರು.
ಸರ್ಕಾರದ ಸಕರಾತ್ಮಕ, ಜನಪರ ಕಾರ್ಯಕ್ರಮಗಳಿಗೆ ಬೆಂಬಲ ಸೂಚಿಸಿರುವುದು ಉತ್ತಮ ರಾಜಕೀಯ ಬೆಳವಣಿಗೆ. ಈ ಎರಡು ಫಲಿತಾಂಶಗಳ ಮೂಲಕ ಮತದಾರರು ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳಿಗೆ ತಕ್ಕ ಪಾಠ ಕಲಿಸಿರುವುದರಿಂದ ಇನ್ನಾದರೂ ಮುಂದೆ ಈ ಪಕ್ಷಗಳು ನೆಗೆಟಿವ್ ಪಾಲಿಟಿಕ್ಸ್ ಕೈಬಿಡುವಂತಾಗಲಿ ಎಂದರು.

Leave a Reply

Your email address will not be published. Required fields are marked *

error: Content is protected !!