Dasara elephant | ಶಿವಮೊಗ್ಗ ದಸರಾದಲ್ಲಿ ಭಾಗವಹಿಸಲಿರುವ ಗಜಪಡೆಯ ಬಗ್ಗೆ ತಿಳಿದುಕೊಳ್ಳಬೇಕಾದ ವಿಚಾರಗಳಿವು

Sagar

 

 

HIGHLIGHTS

  • ಸಕ್ರೆಬೈಲು ಎಲಿಫೆಂಟ್ ಕ್ಯಾಂಪಿನ ಮೃದು ಸ್ವಭಾವದ ನೇತ್ರಾಳಿಗೆ ಚೊಚ್ಚಲ ಜಂಬೂಸವಾರಿ
  • ಶಿವಮೊಗ್ಗ ದಸರಾ ರಾಜಬೀದಿ‌ ಉತ್ಸವದಲ್ಲಿ ಸಾಗರನೊಂದಿಗೆ ಹೆಜ್ಜೆ ಹಾಕಲಿವೆ ನೇತ್ರಾ, ಭಾನುಮತಿ
    180 ಕೆಜಿ ಅಂಬಾರಿ ಸೇರಿ ಒಟ್ಟು 400 ಕೆಜಿಯಷ್ಟು ಭಾರ ಹೊರಲಿದ್ದಾನೆ‌ ‘ಸಾಗರ’
  • ಶಿವಮೊಗ್ಗದ ವಾಸವಿ ಶಾಲೆಯ ಆವರಣದಲ್ಲಿ ವಾಸ್ತವ್ಯ ಹೂಡಲಿದೆ ಗಜಪಡೆ, ಮಳೆಯ ನಡುವೆಯೇ ಸ್ವಾಗತ

ಸುದ್ದಿ ಕಣಜ.ಕಾಂ | DISTRICT | 03 OCT 2022
ಶಿವಮೊಗ್ಗ(shivamogga): ಈ ವರ್ಷದ ದಸರಾ‌ ಜಂಬೂಸವಾರಿ(Jamboo savari)ಯಲ್ಲಿ ಸಕ್ರೆಬೈಲು ಆನೆಬಿಡಾರದ (Sakrebailu elephant camp) ಎರಡು ಹೆಣ್ಣಾನೆ ಮತ್ತು ಒಂದು ಗಂಡಾನೆ ಭಾಗವಹಿಸಲಿದೆ.
ಸಾಗರ ಗಜಪಡೆಯ ಮುಂದಾಳತ್ವ
ಗಂಡಾನೆ ಸಾಗರ (34) ಅಂಬಾರಿಯನ್ನು ಹೊರಲಿದ್ದಾನೆ. 180 ಕೆಜಿ ಅಂಬಾರಿ ಸೇರಿ ಒಟ್ಟು 400 ಕೆಜಿಯಷ್ಟು ಭಾರ ಹೊರಲಿದ್ದು, ಭಾನುವಾರ ಸಂಜೆ ಸಕ್ರೆಬೈಲಿನಿಂದ ಶಿವಮೊಗ್ಗ ನಗರದ ವಾಸವಿ‌ ಶಾಲೆಗೆ ಕರೆದುಕೊಂಡು ಬರಲಾಗಿದೆ. ಈ ಆನೆಯು ಸಾಗರದಲ್ಲಿ ಇದನ್ನು ವಶಕ್ಕೆ ಪಡೆಯಲಾಗಿದೆ. ಆನೆಬಿಡಾರಕ್ಕೆ ಸಾಗರ ದೊಡ್ಡ ಆಸ್ತಿ. ಅಂಬಾರಿ ಹೊರುವುದು ಸೇರಿ ಕಾಡಾನೆಗಳನ್ನು‌ ಹಿಮ್ಮೆಟ್ಟಿಸುವುದಕ್ಕೂ ಇವನ ಸಹಾಯ ಬೇಕು. ಸ್ವಭಾತಃ ಸೌಮ್ಯವಾಗಿದ್ದು, ಯಾರೇ ಅಕ್ಕಪಕ್ಕ ಓಡಾಡಿದರೂ ಕಿಂಚಿತ್ತೂ ಸಿಟ್ಟಿಹೇಳುವುದಿಲ್ಲ.

READ | ಶಿವಮೊಗ್ಗ ಡಾಗ್ ಶೋದಲ್ಲಿ ಉಡುಪಿ ಶ್ವಾನ ಫಸ್ಟ್, 8ಕ್ಕೆ ಬಹುಮಾನ, ಶಿವಮೊಗ್ಗ, ಭದ್ರಾವತಿ ಶ್ವಾನ ಶೈನ್

ಜೊತೆಗಿರಲಿವೆ ಭಾನುಮತಿ, ನೇತ್ರಾವತಿ
ಅಂಬಾರಿ‌ ಹೊತ್ತು ‘ಸಾಗರ’ ಗಾಂಭೀರ್ಯ ನಡೆಯಿಂದ ನಡೆದರೆ, ಅವನೊಂದಿಗೆ ಭಾನುಮತಿ ಮತ್ತು ನೇತ್ರಾವತಿ ಹೆಜ್ಜೆ ಹಾಕಲಿದ್ದಾರೆ. ಈ‌ ಎರಡೂ ಹೆಣ್ಣು ಸೌಮ್ಯ ಸ್ವಭಾವದ್ದಾಗಿವೆ.
ಭಾನುಮತಿ(30-32)ಯನ್ನು 2014ರಲ್ಲಿ ಹಾಸನದಲ್ಲಿ‌ ಸೆರೆಹಿಡಿದು ಕ್ಯಾಂಪಿಗೆ ತರಲಾಗಿದೆ. ಭಾನುಮತಿಗೆ ಈ ಹಿಂದೆಯೂ ದಸರಾದಲ್ಲಿ‌ ಪಾಲ್ಗೊಂಡ ಅನುಭವವಿದೆ. ಆದರೆ, ನೇತ್ರಾವತಿ ಹೊಸಬಳು.
ಗಜಪಡೆಗೆ ವಿಶೇಷ ಆರೈಕೆ
ಗಜಪಡೆಗೆ ವಿಶೇಷ ಆರೈಕೆ ಮಾಡಲಾಗುವುದು. ‌ಅದಕ್ಕೆ ನಿಗದಿಪಡಿಸಿರುವ ಆಹಾರವನ್ನು ಪೂರೈಸಲಾಗುವುದು. ಜತೆಗೆ, ರಾಜಬೀದಿ ಉತ್ಸವದ ತಾಲೀಮು ನೀಡಲಾಗುವುದು. ಕಳೆದ ಎರಡು ವರ್ಷಗಳಿಂದ ಕೊರೊನಾ ಹಿನ್ನೆಲೆ ದಸರಾದಲ್ಲಿ ಜಂಬೂಸವಾರಿ ಮಾಡಿರಲಿಲ್ಲ. ಈ‌ ಸಲ ಕಾಲ ಕೂಡಿಬಂದಿದ್ದು, ಅದ್ಧೂರಿಯಾಗಿ ದಸರಾ ಆಚರಣೆ ಮಾಡಲಾಗುತ್ತಿದೆ.
ಗಜಪಡೆಗೆ ಸ್ವಾಗತ ಕೋರಿದ ಪಾಲಿಕೆ ಸದಸ್ಯರು
ಮಹಾನಗರ ಪಾಲಿಕೆಯ ಸದಸ್ಯರು ಸೇರಿದಂತೆ ಇತರರು ಸೇರಿ ಗಜಪಡೆಯನ್ನು ಭಾನುವಾರ ಸಂಜೆ ಸ್ವಾಗತಿಸಿತು. ಆನೆಗಳಿಗೆ ಪೂಜೆ ಮಾಡಿ ಆರುತಿ ಮಾಡಲಾಯಿತು.

https://suddikanaja.com/2022/10/02/kunti-not-participated-in-shivamogga-dasara-jamboo-savari/

Leave a Reply

Your email address will not be published. Required fields are marked *

error: Content is protected !!