HIGHLIGHTS
- ಸಕ್ರೆಬೈಲು ಎಲಿಫೆಂಟ್ ಕ್ಯಾಂಪಿನ ಮೃದು ಸ್ವಭಾವದ ನೇತ್ರಾಳಿಗೆ ಚೊಚ್ಚಲ ಜಂಬೂಸವಾರಿ
- ಶಿವಮೊಗ್ಗ ದಸರಾ ರಾಜಬೀದಿ ಉತ್ಸವದಲ್ಲಿ ಸಾಗರನೊಂದಿಗೆ ಹೆಜ್ಜೆ ಹಾಕಲಿದ್ದಾಳೆ ನೇತ್ರಾವತಿ
ಸುದ್ದಿ ಕಣಜ.ಕಾಂ | DISTRICT | 02 OCT 2022
ಶಿವಮೊಗ್ಗ(Shivamogga): ಈ ಸಲದ ಜಂಬೂಸವಾರಿ(Jamboo savari)ಯಲ್ಲಿ ಮೊದಲ ಸಲ ‘ನೇತ್ರಾವತಿ’ (netravathi) ಭಾಗವಹಿಸಲಿದ್ದಾಳೆ. ಇದಕ್ಕೆ ಕಾರಣ, ‘ಕುಂತಿ’ ಗರ್ಭಿಣಿಯಾಗಿರುವುದು.
READ | ಶಿವಮೊಗ್ಗ ಡಾಗ್ ಶೋದಲ್ಲಿ ಉಡುಪಿ ಶ್ವಾನ ಫಸ್ಟ್, 8ಕ್ಕೆ ಬಹುಮಾನ, ಶಿವಮೊಗ್ಗ, ಭದ್ರಾವತಿ ಶ್ವಾನ ಶೈನ್
ಸಾಗರನೊಂದಿಗೆ ದಸರಾ ಜಂಬೂಸವಾರಿಯಲ್ಲಿ ಹೆಜ್ಜೆ ಹಾಕುತಿದ್ದ ‘ಕುಂತಿ’ (Kunti) ಗರ್ಭಿಣಿ(Pregnant) ಆಗಿರುವುದರಿಂದ ಈ ಸಲದ ದಸರಾ ಸಂಭ್ರಮದಲ್ಲಿ ಭಾಗವಹಿಸಲು ಸಾಧ್ಯವಾಗಿಲ್ಲ. ಆದರೆ, ಈಕೆಯ ಸ್ಥಾನಕ್ಕೆ ಮೊದಲ ಬಾರಿಗೆ ನೇತ್ರಾವತಿಯನ್ನು ಕರೆತರಲಾಗಿದೆ. ಈಕೆಗೆ ಸಾರ್ವಜನಿಕ ಕಾರ್ಯಕ್ರಮ, ಜನಜಂಗುಳಿಯ ಅಭ್ಯಾಸವಿಲ್ಲ. ಬರುವ ದಿನಗಳಲ್ಲಿ ತಾಲೀಮು ನಡೆಯಲಿದೆ.
ನೇತ್ರಾವತಿಗೆ ಅನುಭದ ಕೊರತೆ
ನೇತ್ರಾವತಿ(24) ಈ ಮುಂಚೆ ಹಂಪಿ ಉತ್ಸವ(Hampi Utsava)ದಲ್ಲಿ ಕೆಲವು ಸಲ ಭಾಗವಹಿಸಿದೆ. ಅಲ್ಲಿಯೂ ಮೆರವಣಿಗೆಯಲ್ಲಿ ಹೆಜ್ಜೆ ಹಾಕಿದೆ. ಹೀಗಾಗಿ, ನೇತ್ರಾಗೆ ಮೆರವಣಿಗೆ, ಸಾರ್ವಜನಿಕ ಸಭೆ ಸಮಾರಂಭ ಹಾಗೂ ಧಾರ್ಮಿಕ ಕಾರ್ಯಕ್ರಮಗಳೆಂದರೆ ಇರಿಸು ಮುರಿಸೇನಿಲ್ಲ. ಆದರೆ, ದಸರಾದಲ್ಲಿ ಚೊಚ್ಚಲ ಸಲ ಭಾಗವಹಿಸುತ್ತಿದೆ. ಈ ಆನೆಯ ಗುಣ ಸ್ವಭಾವ ಮೃದುವಾದದ್ದು. ಸಕ್ರೆಬೈಲು ಆನೆಬಿಡಾರದಲ್ಲಿ ಅತ್ಯಂತ ವಿಧೇಯವಾದ ಆನೆಯೂ ಇದಾಗಿದೆ.
ಪ್ರಸ್ತುತ ಈ ಆನೆಯನ್ನು ಗಜಪಡೆಯೊಂದಿಗೆ ನಗರದ. ವಾಸವಿ ಶಾಲೆಯಲ್ಲಿ ಇರಿಸಲಾಗಿದೆ.
https://suddikanaja.com/2022/10/02/dog-show-in-shivamogga-10-crore-rate-tibetan-mastiff/