ಸುದ್ದಿ ಕಣಜ.ಕಾಂ
ಶಿವಮೊಗ್ಗ: ಕಾಲೇಜಿಗೆ ಹೋಗುವ ಅಧ್ಯಾಪಕರು, ವಿದ್ಯಾರ್ಥಿಗಳು ಹಾಗೂ ಇನ್ನಿತರ ಸಿಬ್ಬಂದಿ ಅನುಕೂಲಕ್ಕಾಗಿ ಕೋವಿಡ್ ವರದಿಯನ್ನು ವೆಬ್ ಸೈಟ್ನಲ್ಲಿಯೇ ನೀಡಲಾಗುತ್ತಿದೆ.
ಸರ್ಕಾರದ ಮಾರ್ಗಸೂಚಿ ಅನ್ವಯ ಕಡ್ಡಾಯವಾಗಿ ಕೋವಿಡ್ ಪರೀಕ್ಷೆ ಮಾಡಿಸಿಕೊಳ್ಳಬೇಕು. ತಪಾಸಣೆ ಫಲಿತಾಂಶ ನೇರವಾಗಿ ವೆಬ್ ಸೈಟ್’ನಲ್ಲಿ ವೀಕ್ಷಿಸುವ ವ್ಯವಸ್ಥೆ ಮಾಡಲಾಗಿದೆ.
ಕಾಲೇಜು, ವಸತಿ ಗೃಹಗಳಿಗೆ ಪ್ರವೇಶಿಸುವ 72 ಗಂಟೆ ಪೂರ್ವದಲ್ಲಿ ನಡೆಸಲಾದ ಆರ್ಟಿ-ಪಿಸಿಆರ್ ತಪಾಸಣೆ ವರದಿನೀಡಬೇಕೆಂಬ ನಿಯಮ ವಿಧಿಸಲಾಗಿದೆ. ಈ ಹಿಂದಿನಂತೆಯೇ ತಪಾಸಣೆಯ ವರದಿಯನ್ನು ಐಸಿಎಂಆರ್ ಪೋರ್ಟಟ್’ನಲ್ಲಿ ನೋಂದಣಿ ಮಾಡಲಾಗಿರುವ ಮೊಬೈಲ್ ಸಂಖ್ಯೆಗೆ ಎಸ್.ಎಂ.ಎಸ್. ಮೂಲಕ ಕಳುಹಿಸಲಾಗುತ್ತದೆ. ಜತೆಗೆ, https://covidwar.karnataka.gov.in/service1 ಲಾಗ್’ಇನ್ ಆಗಿಯೂ ಪಡೆಯಬಹುದು.
ಕೊರೊನಾ ತಪಾಸಣೆ ಪರೀಕ್ಷಾ ಕೇಂದ್ರಗಳಲ್ಲಿ ವಿದ್ಯಾರ್ಥಿಗಳಿಗೆ ಆದ್ಯತೆ ಮೇರೆಗೆ ಆರ್.ಟಿ-ಪಿಸಿಆರ್ ಸ್ಯಾಂಪಲ್ ಪರೀಕ್ಷೆ ನಡೆಸಲು ಸೂಚಿಸಲಾಗಿದೆ. ಪರೀಕ್ಷೆ ಫಲಿತಾಂಶ ತಕ್ಷಣ ಐಸಿಎಂಆರ್ ವೆಬ್ ಸೈಟ್’ಗೆ ಅಪ್’ಲೋಡ್ ಮಾಡಲು ನಿರ್ದೇಶನ ನೀಡಲಾಗಿದೆ.
– ಕೆ.ಬಿ.ಶಿವಕುಮಾರ್, ಜಿಲ್ಲಾಧಿಕಾರಿ ಶಿವಮೊಗ್ಗ