ವಿರೋಧ, ಅವಿರೋಧ ನಡುವೆ ಚುನಾವಣೆ ಮುಂದೂಡಿಕೆ

 

 

ಸುದ್ದಿ ಕಣಜ.ಕಾಂ

ಶಿವಮೊಗ್ಗ: ಜಿಲ್ಲಾ ಸಹಕಾರ ಕೇಂದ್ರ (ಡಿಸಿಸಿ) ಬ್ಯಾಂಕ್ ಇತಿಹಾಸದಲ್ಲೇ ಇದುವರೆಗೆ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆದಿಲ್ಲ. ಪ್ರತಿ ಸಲ ಅವಿರೋಧವಾಗಿಯೇ ಆಯ್ಕೆ ಮಾಡಲಾಗುತ್ತಿತ್ತು. ಆದರೆ, ಈ ಸಲ ಚುನಾವಣೆ ಭಾರಿ ಕೌತುಕಕ್ಕೆ ಕಾರಣವಾಗಿದೆ.
ನವೆಂಬರ್ 9ರಂದು ನಡೆಯಬೇಕಿದ್ದ ಅಧ್ಯಕ್ಷ, ಉಪಾಧ್ಯಕ್ಷರ ಚುನಾವಣೆ ಕೋರಂ ಭರ್ತಿ ಆಗದೇ ಇದ್ದ ಕಾರಣದಿಂದಾಗಿ ನ.13ಕ್ಕೆ ಮುಂದೂಡಲಾಗಿದೆ. ಆದರೆ, ಅಂದೂ ಚುನಾವಣೆ ನಡೆಯಬಹುದೇ ಎಂಬ ಅನುಮಾತ ಕಾಡುತ್ತಿದೆ.
ಈ ಸಲವೂ ಅವಿರೋಧ ಆಯ್ಕೆ ಮಾಡುವುದಕ್ಕಾಗಿಯೇ ನಿರ್ದೇಶಕರು ಒಲವು ತೋರುತ್ತಿರುವುದರಿಂದ ಪರಸ್ಪರರ ನಡುವೆ ಇನ್ನೂ ಒಮ್ಮತ ಏರ್ಪಟ್ಟಿಲ್ಲ. ಹೀಗಾಗಿ, ಚುನಾವಣೆ ಕಣ ಇನ್ನಷ್ಟು ಕುತೂಹಲಕ್ಕೆ ಕಾರಣವಾಗಿದೆ.
* 8 ಜನ ಗೈರು: ಬ್ಯಾಂಕ್ ಅಧ್ಯಕ್ಷರಾಗಿದ್ದ ಆರ್.ಎಂ. ಮಂಜುನಾಥ್ ಗೌಡ ಅವರ ಸಹಕಾರ ಸಂಘಗಳ ಪ್ರಾಥಮಿಕ ಸದಸ್ಯತ್ವ ರದ್ದು ಮಾಡಲಾಗಿತ್ತು. ಹೀಗಾಗಿ, ಡಿಸಿಸಿ ಬ್ಯಾಂಕ್ ನಿರ್ದೇಶಕ ಮತ್ತು ಅಧ್ಯಕ್ಷ ಸ್ಥಾನ ಕಳೆದುಕೊಂಡಿದ್ದರು. ತೆರವಾದ ಸ್ಥಾನಕ್ಕೆ ನವೆಂಬರ್ 9ರಂದು ಚುನಾವಣೆ ನಿಗದಿಯಾಗಿತ್ತು.
ಒಟ್ಟು 14 ಜನ ಸದಸ್ಯರಲ್ಲಿ ಕನಿಷ್ಠ 8 ಜನರಾದರೂ ಹಾಜರಾಗಬೇಕಿತ್ತು. ಆದರೆ, ಬಂದಿದ್ದ ಮಾತ್ರ ಕೇವಲ 6 ಜನ. ಹೀಗಾಗಿ, ಸಂಖ್ಯಾಬಲದ ಕೊರತೆಯಿಂದ ಚುನಾವಣೆಯನ್ನು ಚುನಾವಣಾಧಿಕಾರಿ ನಾಗೇಂದ್ರ ಬಿ. ಹೊನ್ನಳ್ಳಿ ಮುಂದೂಡಿದರು.
(ಹೈಲೈಟ್ಸ್)
* ಆರ್.ಎಂ.ಮAಜುನಾಥ್ ಗೌಡ ಅವರನ್ನು ನಿರ್ದೇಶಕ ಸ್ಥಾನದಿಂದ ವಜಾಗೊಳಿಸಿದ್ದನ್ನು ಪ್ರಶ್ನಿಸಿ ಹೈಕೋರ್ಟ್ ಮೆಟ್ಟಿಲೇರಿದ್ದರಿಂದ ಜುಲೈ 31ರಂದು ನಡೆಯಬೇಕಿದ್ದ ಚುನಾವಣೆ ರದ್ದಾಗಿತ್ತು.
* ಹಾಜರು: ಎಂ.ಬಿ.ಚನ್ನವೀರಪ್ಪ, ಬಿ.ಡಿ.ಭೂಕಾಂತ್, ಎನ್.ಎಚ್. ಶ್ರೀಪಾದ್ ರಾವ್, ಅಗಡಿ, ಬಿಜೆಪಿ ಬೆಂಬಲಿತ ಸದಸ್ಯ ಅಶೋಕ್ ಹಾಗೂ ಇಬ್ಬರು ನಾಮನಿರ್ದೇಶಿತ ಸದಸ್ಯರು.
* ಗೈರು: ಎಚ್.ಎಲ್.ಷಡಕ್ಷರಿ, ಜಿ.ಎನ್.ಸುಧೀರ್, ಎಸ್.ಪಿ.ದಿನೇಶ್, ಜೆ.ಪಿ.ಯೋಗೇಶ್, ಎಚ್.ಕೆ.ವೆಂಕಟೇಶ್, ಬಸವಾನಿ ವಿಜಯದೇವ್, ಕೆ.ಪಿ.ದುಗ್ಗಪ್ಪಗೌಡ, ಕಾಂಗ್ರೆಸ್-ಜೆಡಿಎಸ್ ಬೆಂಬಲಿತ ಸದಸ್ಯ ಎಂ.ಎA.ಪರಮೇಶ್.
* ಅಧ್ಯಕ್ಷ ಸ್ಥಾನಕ್ಕೆ ಅರ್ಜಿ ಸಲ್ಲಿಸಿದವರು: ಎಚ್.ಎಲ್. ಷಡಕ್ಷರಿಪ್ರಭಾರ ಅಧ್ಯಕ್ಷ ಚನ್ನವೀರಪ್ಪ, ಯೋಗೇಶ್.

Leave a Reply

Your email address will not be published. Required fields are marked *

error: Content is protected !!