- ಹಂತ ಹಂತವಾಗಿ ಪ್ರತಿಬಂಧಕಾಜ್ಞೆಯಲ್ಲಿ ಸಡಿಲೀಕರಣ ನೀಡಿದ ಜಿಲ್ಲಾಡಳಿತ
- ಆಗಸ್ಟ್ 15ರಂದು ಎಎ ವೃತ್ತದಲ್ಲಿ ನಡೆದಿದ್ದ ಘಟನೆ ಹಿನ್ನೆಲೆ ಸಿಆರ್.ಪಿಸಿ ಕಲಂ 144 ಅನ್ವಯ ಪ್ರತಿಬಂಧಕಾಜ್ಞೆ
ಸುದ್ದಿ ಕಣಜ.ಕಾಂ | CITY | 22 AUG 2022
ಶಿವಮೊಗ್ಗ: ನಗರದ ಮೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಿಷೇಧಾಜ್ಞೆಯನ್ನು ವಿಸ್ತರಿಸಿ ಸೋಮವಾರ ಆದೇಶಿಸಲಾಗಿದೆ.
ಆಗಸ್ಟ್ 15ರಂದು ಅಮೀರ್ ಅಹಮದ್ ವೃತ್ತ(ameer ahmed circle)ದಲ್ಲಿ ವೀರ ಸಾವರ್ಕರ್ (veer savarkar) ಫ್ಲೆಕ್ಸ್ ತೆರವುಗೊಳಿಸಿದ್ದಕ್ಕೆ ಗಲಾಟೆ ಉಂಟಾಗಿತ್ತು. ಈ ಹಿನ್ನೆಲೆ ನಿಷೇಧಾಜ್ಞೆಯನ್ನು ಹೇರಲಾಗಿದೆ. ಪರಿಸ್ಥಿತಿಯನ್ನು ಅವಲೋಕಿಸಿ ಹಂತ ಹಂತವಾಗಿ ನಿಷೇಧಾಜ್ಞೆಯಲ್ಲಿ ಸಡಿಲೀಕರಣ ನೀಡುತ್ತಾ ಬರಲಾಗುತ್ತಿದೆ. ಆರಂಭದಲ್ಲಿ ಶಿವಮೊಗ್ಗ ಮತ್ತು ಭದ್ರಾವತಿ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಹೇರಲಾಗಿತ್ತು. ನಂತರ, ಶಿವಮೊಗ್ಗ ತಾಲೂಕು ವ್ಯಾಪ್ತಿಗೆ ಸೀಮಿತಗೊಳಿಸಿ ಈಗ ಮೂರು ಠಾಣೆಗಳ ವ್ಯಾಪ್ತಿಗೆ ಒಳಪಡುವಂತೆ ನಿಷೇಧಾಜ್ಞೆ ವಿಧಿಸಲಾಗಿದೆ.
READ | ಗಣಪತಿ ಪ್ರತಿಷ್ಠಾಪನೆಗೆ ಪೊಲೀಸ್ ಇಲಾಖೆ ಕಂಡಿಷನ್ಸ್
ಯಾವ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ 144?
ಶಿವಮೊಗ್ಗ ನಗರದಲ್ಲಿರುವ ಕೋಟೆ(Kote), ತುಂಗಾನಗರ (Tunganagar) ಹಾಗೂ ದೊಡ್ಡಪೇಟೆ (Doddapete) ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ನಿಷೇಧಾಜ್ಞೆಯನ್ನು ಆಗಸ್ಟ್ 26ರ ವರೆಗೆ ವಿಸ್ತರಣೆ ಮಾಡಿ ಅಪರ ಜಿಲ್ಲಾಧಿಕಾರಿ ಡಾ.ನಾಗೇಂದ್ರ ಎಫ್.ಹೊನ್ನಳ್ಳಿ (Dr.Nagendra F.Honnalli) ಆದೇಶಿಸಿದ್ದಾರೆ.
ಸಿಆರ್.ಪಿಸಿ ಕಲಂ 144 ಅನ್ವಯ ಪ್ರತಿಬಂಧಕಾಜ್ಞೆಯನ್ನು ಆಗಸ್ಟ್ 23ರ ಬೆಳಗ್ಗೆ 6 ಗಂಟೆಯಿಂದ ಆಗಸ್ಟ್ 26ರ ಬೆಳಗ್ಗೆ 6 ಗಂಟೆಯವರೆಗೆ ವಿಧಿಸಲಾಗಿದೆ.
https://suddikanaja.com/2022/02/15/due-to-hijab-and-saffron-controversy-section-144-imposed-in-shimoga-city-for-four-days/