Estd at 1990 ಪ್ರೊಫೆಷನಲ್ ಕಳ್ಳರು ಅಂದರ್, ಚಿಕ್ಕಮಗಳೂರನ್ನೂ ಬಿಟ್ಟಿರಲಿಲ್ಲ ಖದೀಮರು

 

 

ಸುದ್ದಿ ಕಣಜ. ಕಾಂ
ಬೆಂಗಳೂರು: ಮನೆಯ ಮುಂದೆ ಪೇಪರ್, ಹಾಲು ಹಾಗೆಯೇ‌ ಇರುವುದನ್ನು ಕಂಡರೆ ಸಾಕು ರಾತ್ರಿ ಆ ಮನೆಯಲ್ಲಿ ಕಳ್ಳತನಕ್ಕೆ‌ ಸ್ಕೆಚ್ ಹಾಕುತ್ತಿದ್ದ ಇಬ್ನರು ಪ್ರೊಫೆಷನಲ್ ಕಳ್ಳರನ್ನು ಪೊಲೀಸರು ಬಂಧಿಸಿದ್ದಾರೆ.
ಕಾಂತರಾಜ್‌‌ ಮತ್ತು ಆತನ ಸಹಚರ ಸುರೇಶ್ ಎಂಬುವವರನ್ನು ಬ್ಯಾಡರಹಳ್ಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ. ಅವರಿಂದ 300 ಗ್ರಾಂ. ಚಿನ್ನಾಭರಣ ವಶಕ್ಕೆ ಪಡೆಯಲಾಗಿದೆ.
1990ರಿಂದ ಕಳ್ಳತನವನ್ನೇ ವೃತ್ತಿಯನ್ನಾಗಿಸಿಕೊಂಡಿದ್ದ ಇವರು ಐಷಾರಾಮಿ ಜೀವನ ಹಾಗೂ ತಮ್ಮ ಅಗತ್ಯತೆಗಳನ್ನು ಪೂರೈಸಿಕೊಳ್ಳುವುದಕ್ಕಾಗಿ ಕಳ್ಳತನ ಮಾಡುತ್ತಿದ್ದರು.
ಇದಿದ್ದರೆ ಸಾಕು ಕಳ್ಳರು ಹಾಜರ್: ಕಾಂತರಾಜ್ ಯಾವುದೇ ಮನೆಗೆ ಬೀಗ ಹಾಕಿದ ಮನೆಗಳನ್ನು ಕಂಡರೆ ಸಾಕು ಆ ಮನೆಯನ್ನೇ ಟಾರ್ಗೆಟ್ ಮಾಡುತ್ತಿದ್ದರು. ಮನೆ ಮುಂದೆ ಕಸ ಗುಡಿಸದಿದ್ದರೆ, ಪೇಪರ್, ಹಾಲು ಹಾಗೆಯೇ ಉಳಿದಿದ್ದರೆ ರಾತ್ರಿ‌ಕಳ್ಳತನಕ್ಕೆ ಹೊಂಚು ಹಾಕುತ್ತಿದ್ದರು.
ಕಾಂತರಾಜ್ ವಿರುದ್ಧ ಚಿಕ್ಕಮಗಳೂರು, ಗೌರಿಬಿದನೂರು ಸೇರಿದಂತೆ ವಿವಿಧ ಕಡೆಗಳಲ್ಲಿ 25ಕ್ಕೂ ಅಧಿಕ ಪ್ರಕರಣ ದಾಖಲಾಗಿವೆ.

Leave a Reply

Your email address will not be published. Required fields are marked *

error: Content is protected !!