ಬಜರಂಗ ದಳ ಕಾರ್ಯಕರ್ತನ ಮೇಲೆ ಅಟ್ಯಾಕ್

 

 

WhatsApp Image 2020 12 03 at 9.14.43 AMಸುದ್ದಿ ಕಣಜ.ಕಾಂ
ಶಿವಮೊಗ್ಗ: ಬಜರಂಗ ದಳದ ಕಾರ್ಯಕರ್ತರೊಬ್ಬರ ಬೈಕ್ ಅಡ್ಡಗಟ್ಟಿ ದೊಣ್ಣೆಯಿಂದ ಹಲ್ಲೆ ಮಾಡಿರುವ ಘಟನೆ ಗುರುವಾರ ಬೆಳಗ್ಗೆ ನಡೆದಿದೆ.
ಅಶೋಕ ರಸ್ತೆಯ ನಾಗೇಶ್(28) ಎಂಬಾತನ ಮೇಲೆ ಕಿಡಿಗೇಡಿಗಳು ಹಲ್ಲೆ ಮಾಡಿ ಪರಾರಿಯಾಗಿದ್ದಾರೆ. ವಾಯುವಿಹಾರಕ್ಕಾಗಿ ನೆಹರೂ ಕ್ರೀಡಾಂಗಣಕ್ಕೆ ಬಂದು ವಾಪಸ್ ಮನೆಗೆ ಹೋಗುವಾಗ ಬೈಕ್ ಮೇಲೆ ಬಂದ ನಾಲ್ಕು ಜನ ದೊಣ್ಣೆಯಿಂದ ಹಲ್ಲೆ ಮಾಡಿದ್ದಾರೆ. ಇದರಿಂದಾಗಿ ನಾಗೇಶ್ ಮೂಗಿಗೆ ಗಾಯವಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.
ಯಾರು ಹಲ್ಲೆ ಮಾಡಿದ್ದು, ಏಕೆ ಮಾಡಿದ್ದು ಈ ವಿಷಯಗಳಿನ್ನೂ ತಿಳಿದುಬಂದಿಲ್ಲ. ಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ. ಆರೋಪಿಗಳನ್ನು ತಕ್ಷಣ ಪತ್ತೆ ಹಚ್ಚಿ ಬಂಧಿಸುವಂತೆ ಬಜರಂಗ ದಳದ ಕಾರ್ಯಕರ್ತರು ಆಗ್ರಹಿಸಿದ್ದಾರೆ.

error: Content is protected !!