ರಿಪೇರಿಗೆಂದು ಹೋದ ಕಾರು 10 ತಿಂಗಳಾದರೂ ಮನೆಗೆ ಬರಲಿಲ್ಲ! ಕೊನೆಗೆ ಸಿಕ್ಕಿದ್ದೆಲ್ಲಿ ಗೊತ್ತಾ?

 

 

ಸುದ್ದಿ ಕಣಜ.ಕಾಂ
ಶಿವಮೊಗ್ಗ: ಕಾರನ್ನು ರಿಪೇರಿ ಮಾಡಿಸುವ ನೆಪದಲ್ಲಿ ತೆಗೆದುಕೊಂಡು ಹೋಗಿ ಅದನ್ನು ಮತ್ತೊಬ್ಬರಿಗೆ ಮಾರಾಟ ಮಾಡಿದ ಘಟನೆ ಶಿವಮೊಗ್ಗದಲ್ಲಿ ಬೆಳಕಿಗೆ ಬಂದಿದೆ.

ಶಿವಮೊಗ್ಗ, ಭದ್ರಾವತಿಯಲ್ಲಿ ಎಸಿಬಿ ದಾಳಿ

2020ರ ಫೆಬ್ರವರಿ ಕೊನೆಯ ವಾರದಲ್ಲಿ ದುರ್ಗಿಗುಡಿ ನಿವಾಸಿ ವಿಠಲ್ ಕುಮಾರ್ ಎಂಬುವವರ ಕಡೆಯಿಂದ ಮಾರುತಿ ಎಕ್ಸ್ಪೆರಿಯೊ ಕಾರನ್ನು ತೆಗೆದುಕೊಂಡು ಹೋಗಿದ್ದ. ಹಲವು ದಿನಗಳಾದರೂ ಕಾರನ್ನು ವಾಪಸ್ ತಂದು ಕೊಟ್ಟಿರಲಿಲ್ಲ. ಕೊರೊನಾ ಇರುವುದರಿಂದ ಬರಲು ಸಾಧ್ಯವಾಗುತ್ತಿಲ್ಲ ಎಂದು ಸಾಗಿ ಹಾಕುತ್ತಿದ್ದ. ಈ ಪೊಳ್ಳು ನೆಪಗಳಿಂದ ಬೇಸತ್ತ ಕಾರು ಮಾಲೀಕ ಡಿಸೆಂಬರ್ 12ರಂದು ಜಯನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಕಾರ್ಯಾಚರಣೆ ನಡೆಸಿದ ಪೊಲೀಸರು ಕಾರು ಇದ್ದ ಜಾಗವನ್ನು ಪತ್ತೆ ಹಚ್ಚಿದ್ದಾರೆ. ಆ ಕಾರ್ ಅನ್ನು ಸೆಕೆಂಡ್ ಹ್ಯಾಂಡ್‍ನಲ್ಲಿ ಮಾರಾಟ ಮಾಡಿರುವುದಾಗಿ ತನಿಖೆ ವೇಳೆ ಬೆಳಕಿಗೆ ಬಂದಿದೆ. ಬಳಿಕ ಕಾರ್ ಅನ್ನು ವಾಪಸ್ ಮಾಲೀಕರಿಗೆ ತಲುಪಿಸಲಾಗಿದೆ.

ರಾಜ್ಯದ 176 ತಾಲೂಕುಗಳ 285 ಕೇಂದ್ರಗಳಲ್ಲಿ ನಡೆಯಲಿದೆ ಗ್ರಾಪಂ ಸದಸ್ಯರಿಗೆ ಟ್ರೈನಿಂಗ್, ಹೇಗಿರಲಿದೆ ತರಬೇತಿ?

ನಂಬಿಕಸ್ಥನಿಂದಲೇ ಮೋಸ: ನಾಲ್ಕೈದು ತಿಂಗಳಿಂದ ವಿಠಲ್ ಅವರ ಮನೆಯಲ್ಲಿಯೇ ಕೆಲಸ ಮಾಡುತ್ತಿದ್ದ ವ್ಯಕ್ತಿಯೇ ಈ ಮೋಸ ಮಾಡಿದ್ದಾನೆ. ನಂಬಿಗಸ್ಥನೆಂಬ ಕಾರಣಕ್ಕೆ ರಿಪೇರಿಗೆಂದು ಕಾರನ್ನು ನೀಡಿದ್ದಾರೆ.
ಆರೋಪಿಗಳ ಹುಡುಕಾಟ: ಮೋಸ ಮಾಡಿರುವ ವ್ಯಕ್ತಿ ಸಾದಿಕ್ ಎಂದು ಹೆಸರು ಹೇಳಿಕೊಂಡಿದ್ದ. ಈತನೊಂದಿಗೆ ಅಮ್ಜದ್ ಎಂಬಾತ ಸಹ ಇದ್ದ ಎನ್ನಲಾಗಿದೆ. ಇದುವರೆಗೆ ಆರೋಪಿ ಪತ್ತೆಯಾಗಿಲ್ಲ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

error: Content is protected !!