ಸುದ್ದಿ ಕಣಜ.ಕಾಂ ಶಂಕರಘಟ್ಟ(ಶಿವಮೊಗ್ಗ): ಕುವೆಂಪು ವಿಶ್ವವಿದ್ಯಾಲಯದ 40ಕ್ಕೂ ಅಧಿಕ ಸ್ನಾತಕೋತ್ತರ ಪದವಿ ಕೋರ್ಸ್ಗಳಿಗೆ ಡಿಸೆಂಬರ್ 18, 19 ಮತ್ತು 21ರಂದು ಪ್ರವೇಶಾತಿ ಕೌನ್ಸೆಲಿಂಗ್ ನಡೆಯಲಿದೆ ಎಂದು ವಿಶ್ವವಿದ್ಯಾಲಯದ ಪ್ರಕಟಣೆ ತಿಳಿಸಿದೆ.
ವಿಶ್ವವಿದ್ಯಾಲಯದ ಮುಖ್ಯ ಆವರಣ, ಕಡೂರು ಪಿ.ಜಿ.ಕೇಂದ್ರ ಮತ್ತು 20ಕ್ಕೂ ಹೆಚ್ಚು ಸ್ನಾತಕೋತ್ತರ ಕಾಲೇಜುಗಳ ಎಲ್ಲ 33 ವಿಭಾಗಗಳ 45 ಕೋರ್ಸ್ಗಳಿಗೆ ಡಿಸೆಂಬರ್ 18 ಮತ್ತು 19ರಂದು ಹಾಗೂ 21ರಂದು ಪ್ರವೇಶಾತಿ ಕೌನ್ಸೆಲಿಂಗ್ ಹಮ್ಮಿಕೊಳ್ಳಲಾಗಿದೆ. ಸಂಪೂರ್ಣ ಪ್ರವೇಶಾತಿಯನ್ನು ಈ ಮೂರು ದಿನಗಳಲ್ಲಿಯೇ ಮಾಡಿ ಮುಗಿಸಲು ವಿವಿ ಯೋಜಿಸಿದೆ.
ಬೆಳಗ್ಗೆ 9.30ಕ್ಕೆ ಆವರಣಕ್ಕೆ ಬರಲು ಸೂಚನೆ: 18 ಮತ್ತು 19ರಂದು ಮೆರಿಟ್ ಸೀಟುಗಳು ಮತ್ತು ವೆಯ್ಟಿಂಗ್ ಪಟ್ಟಿಯ ಅಭ್ಯರ್ಥಿಗಳಿಗೆ ಪ್ರವೇಶಾತಿ ಪ್ರಕ್ರಿಯೆ ನಡೆಯಲಿದೆ. ಸೋಮವಾರ 21ರಂದು ಉಳಿಕೆ ಸೀಟುಗಳು, ಪೇಮೆಂಟ್ ಮತ್ತು ಇತರೆ ಕೋಟಾಗಳ ಸೀಟುಗಳಿಗೆ ಪ್ರವೇಶಾತಿ ನಡೆಯಲಿದೆ. ವಿವಿಧ ವಿಭಾಗಗಳಿಗೆ ಅರ್ಜಿ ಹಾಕಿರುವ ವಿದ್ಯಾರ್ಥಿಗಳು 18ರಂದು ಬೆಳಿಗ್ಗೆ 9.30ಕ್ಕೆ ಅಗತ್ಯ ದಾಖಲೆಗಳೊಂದಿಗೆ ವಿವಿಯ ಜ್ಞಾನಸಹ್ಯಾದ್ರಿ ಆವರಣಕ್ಕೆ ಆಗಮಿಸಬೇಕು.
ಸುದ್ದಿ ಕಣಜ | KARNATAKA | ARECANUT RATE ಶಿವಮೊಗ್ಗ: ಇಂದಿನ ಅಡಿಕೆ ಧಾರಣೆ. READ | TODAY ARECANUT RATE | 13/11/2022 ರ ಅಡಿಕೆ ಧಾರಣೆ, ಯಾವ ಮಾರುಕಟ್ಟೆಯಲ್ಲಿ ಎಷ್ಟು […]
ಸುದ್ದಿ ಕಣಜ.ಕಾಂ | DISTRICT | CURFEW ಶಿವಮೊಗ್ಗ: ಭಜರಂಗ ದಳ ಕಾರ್ಯಕರ್ತ ಹರ್ಷನ ಕೊಲೆ ಪ್ರಕರಣ ಹಿಂಸೆಯ ಸ್ವರೂಪ ಪಡೆದಿದ್ದೇ ನಗರದಲ್ಲಿ ಹೆಚ್ಚುವರಿ ಪೊಲೀಸರನ್ನು ನಿಯೋಜನೆ ಮಾಡಲಾಗಿದೆ. ನಗರದ ವ್ಯಾಪ್ತಿಗೆ ಒಳಪಡುವ […]
ಸುದ್ದಿ ಕಣಜ.ಕಾಂ ತೀರ್ಥಹಳ್ಳಿ THIRTHAHALLI: ತೀರ್ಥಹಳ್ಳಿಯ ವಿಹಂಗಮ ಎಂಬ ರೆಸಾರ್ಟ್ ಮೇಲೆ ದಾಳಿ ನಡೆಸಿದ್ದು, ಭಾರೀ ಮೌಲ್ಯದ ಸಾಮಗ್ರಿಗಳು ಪತ್ತೆಯಾಗಿವೆ ಎಂದು ಪೊಲೀಸ್ ಪ್ರಕಟಣೆ ತಿಳಿಸಿದೆ. ಅಕ್ರಮ ಚಟುವಟಿಕೆಗಳು ನಡೆಯುತ್ತಿರುವ ಬಗ್ಗೆ ಬಂದ […]