ಸುದ್ದಿ ಕಣಜ.ಕಾಂ ಸಾಗರ/ಶಿವಮೊಗ್ಗ: ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಾಖಲಾಗಿದ್ದ ಕಳ್ಳತನ ಮತ್ತು ಕಳ್ಳತನ ಯತ್ನ ಪ್ರಕರಣಗಳನ್ನು ಪೊಲೀಸರು ಶುಕ್ರವಾರ ಬೇಧಿಸಿ, ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ. ನ್ಯಾಯಾಲಯದ ಮುಂದೆ ಹಾಜರು ಪಡಿಸಲಾಗಿದೆ.
ಶಿವಮೊಗ್ಗದ ಅಣ್ಣಾನಗರ ನಿವಾಸಿ 30 ವರ್ಷದ ತಬ್ರೇಜ್ ಅಲಿಯಾಸ್ ಬಚ್ಚಾ ಎಂಬಾತನನ್ನು ವಶಕ್ಕೆ ಪಡೆಯಲಾಗಿದೆ. ಬಂಧಿತನಿಂದ 45 ಗ್ರಾಂ ತೂಕದ 1.80 ಲಕ್ಷ ರೂಪಾಯಿ ಮೌಲ್ಯದ ಚಿನ್ನಾಭರಣ ಮತ್ತು 1 ಕೆಜಿ 600 ಗ್ರಾಂ ತೂಕದ 96 ಸಾವಿರ ಮೌಲ್ಯದ ಬೆಳ್ಳಿ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ.
ಎಲ್ಲೆಲ್ಲಿ ದಾಖಲಾಗಿದ್ದವು ಕೇಸ್: ಸಾಗರ ಗ್ರಾಮಾಂತರ ಠಾಣೆಯಲ್ಲಿ ಇದೇ ವರ್ಷದಲ್ಲಿ ಎರಡು ಮನೆಗಳ್ಳತನ ಪ್ರಯತ್ನ ಪ್ರಕರಣಗಳು ಹಾಗೂ ಹೊಳೆಹೊನ್ನೂರು ಠಾಣೆಯಲ್ಲಿ ಒಂದು ಮನೆಗಳ್ಳತನ ಪ್ರಕರಣ ದಾಖಲಾಗಿತ್ತು. ತಂಡದಲ್ಲಿ ಯಾರಿದ್ದಾರೆ?: ಸಾಗರ ಡಿವೈಎಸ್ಪಿ ವಿನಾಯಕ ಶೆಟಗೇರಿ ಮಾರ್ಗದರ್ಶನದಲ್ಲಿ ಸಾಗರ ಗ್ರಾಮಾಂತರದ ಸಿಪಿಐ ಕುಮಾರಸ್ವಾಮಿ ನೇತೃತ್ವದಲ್ಲಿ ಪ್ರಕರಣ ಬೇಧಿಸಲಾಗಿದೆ. ತಂಡದಲ್ಲಿ ಸಾಗರ ಗ್ರಾಮಾಂತರ ಠಾಣೆಯ ಪಿಎಸ್ಐ ಭರತ್ ಕುಮಾರ್, ಸುಜಾತ ಮತ್ತು ಸಿಬ್ಬಂದಿ ಫೈರೋಜ್ ಅಹಮದ್, ಅಶೋಕ್, ರವಿಕುಮಾರ್, ಹಜರತ್ ಅಲಿ, ಸಂತೋಷ್ ನಾಯ್ಕ್ ಅವರನ್ನು ಒಳಗೊಂಡ ತಂಡ ಕಾರ್ಯಾಚರಣೆ ನಡೆಸಿದೆ.
ಸುದ್ದಿ ಕಣಜ.ಕಾಂ | DISTRICT | EDUCATION CORNER ಶಿವಮೊಗ್ಗ: ರಾಜ್ಯದಾದ್ಯಂತ ಸ್ನಾತಕ ಪದವಿ ಕೋರ್ಸ್ ಗಳು ಹಿಂದಿನಂತೆ ಈಗಲೂ ಕೂಡ ಮೂರು ವರ್ಷಗಳ ಅವಧಿಯಾದಾಗಿರುತ್ತದೆ. ಇದರಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ. ಹೀಗಾಗಿ […]
ಸುದ್ದಿ ಕಣಜ.ಕಾಂ | SHIVAMOGGA CITY | OLYMPIC ಶಿವಮೊಗ್ಗ: ಒಲಿಂಪಿಕ್ಸ್ ಕ್ರೀಡಾಕೂಟದ ಅಥ್ಲೆಟಿಕ್ಸ್ ನಲ್ಲಿ ನಿರಾಜ್ ಚೋಪ್ರಾ ಅವರು ಭಾರತಕ್ಕೆ ಚಿನ್ನ ಗೆದ್ದು ತಂದಿದ್ದಕ್ಕೆ ನಗರದಲ್ಲಿ ಜಿಲ್ಲಾ ಯುವ ಕಾಂಗ್ರೆಸ್ ನಿಂದ […]
ಸುದ್ದಿ ಕಣಜ.ಕಾಂ ಶಿವಮೊಗ್ಗ: ಆನ್ಲೈನ್ ನಲ್ಲಿ ಗೋಣಿ ಚೀಲ ಖರೀದಿಸುವುದಕ್ಕಾಗಿ 1,13,720 ರೂಪಾಯಿ ಕಳುಹಿಸಿ ಮೋಸ ಹೋದ ಘಟನೆ ವರದಿಯಾಗಿದೆ. https://www.suddikanaja.com/2021/01/12/video-call-facility-in-shivamogga-central-jail/ ಶಿಕಾರಿಪುರದ ಶಿಕ್ಷಕರೊಬ್ಬರು ಮೋಸ ಹೋಗಿದ್ದಾರೆ. ಇವರು ಗೂಗಲ್ ನಲ್ಲಿ ಖಾಲಿ […]