ಸುದ್ದಿ ಕಣಜ.ಕಾಂ
ಶಿವಮೊಗ್ಗ: ಶಿವಮೊಗ್ಗ ತಾಲೂಕುವೊಂದರಲ್ಲಿಯೇ 26 ಜನರಿಗೆ ಕೊರೊನಾ ಸೋಂಕು ತಗಲಿದೆ. 10 ಮಂದಿ ಚಿಕಿತ್ಸೆ ಪಡೆದು ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಇಂದೂ ಯಾವುದೇ ಸಾವು ಸಂಭವಿಸಿಲ್ಲ. ಇಲ್ಲಿಯವರೆಗೆ 348 ಸೋಂಕಿತರನ್ನು ಕೋವಿಡ್ ಬಲಿ ಪಡೆದಿದೆ.
ಕೆಲವೇ ಹೊತ್ತಲ್ಲಿ ಸುಟ್ಟು ಕರಕಲಾದ ಬಸ್
ತಾಲೂಕುವಾರು ಕೊರೊನಾ: ಶಿವಮೊಗ್ಗ 12, ಭದ್ರಾವತಿ 5, ಶಿಕಾರಿಪುರ 0, ತೀರ್ಥಹಳ್ಳಿ 1, ಸೊರಬ 1, ಸಾಗರ 4, ಹೊಸನಗರ 2, ಬೇರೆಯ ಜಿಲ್ಲೆಯ 1 ಪ್ರಕರಣ ಕಂಡುಬಂದಿವೆ.
`ಸರ್ಕಾರಿ ನೌಕರರಿಗೆ ಹ್ಯಾಟ್ಸ್ ಆಫ್, ಪ್ರತಿಭಟನೆಯ ದಾರಿ ತುಳಿಯಬೇಡಿ, ಸರ್ಕಾರ ನಿಮ್ಮೊಂದಿಗಿದೆ’
ಮತ್ತೆ ಸಕ್ರಿಯ ಪ್ರಕರಣಗಳಲ್ಲಿ ಏರಿಕೆ: ಇಂದು 619 ಜನರ ಗಂಟಲು ದ್ರವದ ಮಾದರಿಯನ್ನು ಸಂಗ್ರಹಿಸಲಾಗಿದೆ. 985 ನೆಗೆಟಿವ್ ಬಂದಿದೆ. ಪ್ರಸಕ್ತ ಮೆಗ್ಗಾನ್ ಜಿಲ್ಲಾಸ್ಪತ್ರೆಯ ಕೋವಿಡ್ ವಾರ್ಡ್ನಲ್ಲಿ 52 ಜನರು ಚಿಕಿತ್ಸೆ ಪಡೆಯುತ್ತಿದ್ದಾರೆ. ಕೋವಿಡ್ ಕೇರ್ ಸೆಂಟರ್ 0, ಖಾಸಗಿ ಆಸ್ಪತ್ರೆಯಲ್ಲಿ 8, ಮನೆ ಆರೈಕೆಯಲ್ಲಿ 61 ಜನರಿದ್ದಾರೆ. 121 ಸಕ್ರಿಯೆ ಪ್ರಕರಣಗಳಿವೆ.