ಸುದ್ದಿ ಕಣಜ.ಕಾಂ ಶಿವಮೊಗ್ಗ: ತಾಲೂಕಿನ ಹೊಸಹಳ್ಳಿ ಗ್ರಾಮದ ಅಡಿಕೆ ತೋಟದಲ್ಲಿ ಮತದಾರರಿಗೆ ನಾಜ್ ವೆಜ್ ಊಟದ ವ್ಯವಸ್ಥೆ ಮಾಡಿದ್ದ ಸ್ಥಳಕ್ಕೆ ಮಂಗಳವಾರ ಬೆಳಗ್ಗೆ ಮಾದರಿ ನೀತಿ ಸಂಹಿತೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ಅಡಿಕೆ ತೋಟದಲ್ಲಿರುವ ಕೋಳಿ ಫಾರಂ ಇದ್ದು, ಅಲ್ಲಿ ಅಭ್ಯರ್ಥಿಯ ಪರ ಮತ ಚಲಾಯಿಸಿದವರಿಗೆ ಊಟದ ವ್ಯವಸ್ಥೆ ಮಾಡಲಾಗಿತ್ತು. ಈ ಬಗ್ಗೆ ದೂರು ಬಂದಿದ್ದೇ ನೀತಿ ಸಂಹಿತೆ ಜಾರಿ ಅಧಿಕಾರಿ ಎನ್.ಚಂದ್ರಪ್ಪ, ಇಒ ಕಲ್ಲಪ್ಪ ದಾಳಿ ನಡೆಸಿದ್ದಾರೆ.
ಬಾಣಸಿಗ ವಶಕ್ಕೆ: ನೀತಿ ಸಂಹಿತೆ ಉಲ್ಲಂಘಿಸಿದ ಅಭ್ಯರ್ಥಿಯ ಬಗ್ಗೆ ಇದುವರೆಗೆ ಮಾಹಿತಿ ಲಭ್ಯವಾಗಿಲ್ಲ. ಅಧಿಕಾರಿಗಳ ತಂಡ ದಾಳಿ ಮಾಡುತ್ತಿದ್ದಂತೆಯೇ ಸ್ಥಳದಲ್ಲಿದ್ದವರು ಪರಾರಿಯಾಗಿದ್ದಾರೆ. ಅಡುಗೆ ಮಾಡುವವ(ಬಾಣಸಿಗ)ನನ್ನು ಸಿಕ್ಕಿದ್ದು, ಆತನಿಗೆ ವಶಕ್ಕೆ ಪಡೆಯಲಾಗಿದೆ.
ಸುದ್ದಿ ಕಣಜ.ಕಾಂ ಶಿವಮೊಗ್ಗ: ಕೊರೊನಾ ಹಿನ್ನೆಲೆ ಸ್ಥಗಿತಗೊಂಡಿದ್ದ ರೈಲುಗಳನ್ನು ಜೂನ್ 18ರಿಂದ ಪುನರ್ ಆರಂಭಿಸಲಾಗುತ್ತಿದೆ. ಆದರೆ, ಯಾವುದಕ್ಕೂ ಕೌಂಟರ್ ಟಿಕೆಟ್ ಲಭ್ಯ ಇರುವುದಿಲ್ಲ. ಕಡ್ಡಾಯವಾಗಿ ಆನ್ ಲೈನ್ ನಲ್ಲೇ ಟಿಕೆಟ್ ಗಳನ್ನು ಕಾಯ್ದಿರಿಸಬೇಕು […]
ಸುದ್ದಿ ಕಣಜ.ಕಾಂ ಶಿವಮೊಗ್ಗ: ಏಷಿಯಾ ಒನ್ ಮ್ಯಾಗ್ಝಿನ್ ಪ್ರತಿ ವರ್ಷ ಆಯ್ಕೆ ಮಾಡುವ ಏಷ್ಯಾದ ಪ್ರಭಾವಿಗಳ ಪಟ್ಟಿಯಲ್ಲಿ ಮಲೆನಾಡಿನ ಪ್ರತಿಭೆ ಹಾಗೂ ಅಡಕೆ ಟೀ ಸಂಶೋಧಕ ನಿವೇದನ್ ನೆಂಪೆ ಆಯ್ಕೆಯಾಗಿದ್ದಾರೆ. 40 ವರ್ಷದೊಳಗಿನ […]
ಸುದ್ದಿ ಕಣಜ.ಕಾಂ | CITY | POWER CUT ಶಿವಮೊಗ್ಗ: ಮೆಗ್ಗಾನ್ ವಿದ್ಯುತ್ ವಿತರಣೆ ಕೇಂದ್ರದಿಂದ ಸರಬರಾಜಾಗುವ ಎಂಜಿಎಫ್ 4ರಲ್ಲಿ ಸ್ಮಾರ್ಟ್ ಸಿಟಿ ಕಾಮಗಾರಿ ಹಮ್ಮಿಕೊಂಡಿರುವುದರಿಂದ ಡಿಸೆಂಬರ್ 17ರಂದು ಬೆಳಗ್ಗೆ 10 ರಿಂದ […]