ಒಂದೇ ಕುಟುಂಬದ ನಾಲ್ವರಲ್ಲಿ ರೂಪಾಂತರ ಕೊರೊನಾ ವೈರಸ್ ಪತ್ತೆ, ಸೋಂಕಿತರ ಟ್ರಾವೆಲ್ ಹಿಸ್ಟರಿ ಇಲ್ಲಿದೆ

 

 

ಸುದ್ದಿ ಕಣಜ.ಕಾಂ
ಶಿವಮೊಗ್ಗ: ಬ್ರಿಟನ್‍ನಿಂದ ಶಿವಮೊಗ್ಗಕ್ಕೆ ಬಂದಿದ್ದ ನಾಲ್ವರಲ್ಲಿ ರೂಪಾಂತರ ಕೊರೊನಾ ವೈರಸ್ ಇರುವುದು ದೃಢಪಟ್ಟಿದೆ. ಹೀಗಾಗಿ, ಅವರಿದ್ದ ಮನೆಯನ್ನು ಆರೋಗ್ಯ ಇಲಾಖೆ ಸ್ಯಾನಿಟೈಸ್ ಮಾಡಿದೆ.

Modarate covid 1ಕೋರ್ಟ್ ಸರ್ಕಲ್‍ನಲ್ಲಿ ಜನವೋ ಜನ, ಸೋಲು ಗೆಲುವಿನ ಲೆಕ್ಕಾಚಾರ, ಸದ್ಯ ಹೇಗಿದೆ ಸ್ಥಿತಿ?

ಡಿಸೆಂಬರ್ 21ರಂದು ಬ್ರಿಟನ್‍ನಿಂದ ಬೆಂಗಳೂರು ವಿಮಾನ ನಿಲ್ದಾಣಕ್ಕೆ ಬಂದಿದ್ದಾರೆ. ಬೆಂಗಳೂರಿನಲ್ಲಿ ಎರಡು ಕುಟುಂಬಗಳಿಗೆ ಇವರು ಭೇಟಿ ನೀಡಿದ್ದಾರೆ. ಶಿವಮೊಗ್ಗಕ್ಕೆ ಸ್ವಂತ ವಾಹನದಲ್ಲಿಯೇ ಬಂದಿದ್ದು, ದಾರಿ ಮಧ್ಯೆ ತರೀಕೆರೆಯಲ್ಲಿ ಒಂದು ಕುಟುಂಬಕ್ಕೆ ಭೇಟಿ ನೀಡಿದ್ದಾರೆ. ಶಿವಮೊಗ್ಗದಲ್ಲಿ ಇವರೊಂದಿಗೆ ಒಬ್ಬರು ಸಂಪರ್ಕ ಹೊಂದಿದ್ದು, ಅವರ ಗಂಟಲು ದ್ರವದ ಮಾದರಿಯನ್ನು ಪರೀಕ್ಷೆಗೆ ಒಳಪಡಿಸಿದ್ದು, ನೆಗೆಟಿವ್ ಬಂದಿದೆ.
ಡಿಸೆಂಬರ್ 22ರ ರಾತ್ರಿ ಇವರು ಶಿವಮೊಗ್ಗದ ವೀರ ಸಾವರ್ಕರ್ ನಗರದಲ್ಲಿರುವ ಮನೆಗೆ ಬಂದಿದ್ದಾರೆ.

ಬಾಲ ಬಿಚ್ಚಿದರೆ ಬಾಲ, ತಲೆ ಕಟ್

ಡಿಸೆಂಬರ್ 23ರಂದು ಬೆಳಗ್ಗೆ ಆರೋಗ್ಯ ಇಲಾಖೆ ಸಿಬ್ಬಂದಿ ನಾಲ್ವರ ಸ್ಯಾಂಪಲ್ ಸಂಗ್ರಹಿಸಿದ್ದಾರೆ. ಆಗ ಸೋಂಕಿರುವುದು ಪತ್ತೆಯಾಗಿದೆ. ತಕ್ಷಣ ಅವರನ್ನು ಹೋಂ ಕ್ವಾರಂಟೈನ್ ಮಾಡಲಾಗಿದೆ. ಜತೆಗೆ, ಪ್ರಾಥಮಿಕ ಸಂಪರ್ಕದಲ್ಲಿದ್ದವರ ಗಂಟಲು ದ್ರವದ ಮಾದರಿಯನ್ನು ಸಂಗ್ರಹಿಸಲಾಗಿದೆ. ಜತೆಗೆ, ಮನೆಯನ್ನು ಕಂಟೈನ್ಮೆಂಟ್ ಜೋನ್ ಎಂದು ಗುರುತಿಸಿ, ಜನವರಿ 5ರ ವರೆಗೆ ಯಾರೂ ಮನೆಯಿಂದ ಹೊರಗೆ ಬಾರದಂತೆ ಮತ್ತು ಜನಸಂಪರ್ಕ ಹೊಂದಂತೆ ಸೂಚನೆ ನೀಡಲಾಗಿದೆ.
ಸೋಂಕಿತರ ಗಂಟಲು ದ್ರವವನ್ನು ಮತ್ತೊಂದು ಹಂತದ ಪರೀಕ್ಷೆಗೋಸ್ಕರ ಬೆಂಗಳೂರಿಗೆ ಕಳುಹಿಸಲಾಗಿದೆ. ಅದರ ವರದಿಯೂ ಪಾಸಿಟಿವ್ ಬಂದಿದ್ದಕ್ಕೆ ಡಿಸೆಂಬರ್ 30ರಂದು ಅವರ ಮನೆಯನ್ನು ಮತ್ತೊಮ್ಮೆ ಮಹಾನಗರ ಪಾಲಿಕೆಯಿಂದ ಸ್ಯಾನಿಟೈಸ್ ಮಾಡಲಾಗಿದೆ.

error: Content is protected !!