ಹುಲಿ ಪ್ರೇಮಿಗಳಿಗೆ ಹಾರ್ಟ್ ಬ್ರೇಕಿಂಗ್ ನ್ಯೂಸ್, ಕಳಚಿತು ಕೃತಿಕ ವಂಶದ ಇನ್ನೊಂದು ಕುಡಿ

 

 

ಸುದ್ದಿ ಕಣಜ.ಕಾಂ
ಶಿವಮೊಗ್ಗ: ಹುಲಿಗಳು ಅರಣ್ಯದಲ್ಲಿ ಹೆಚ್ಚೆಂದರೆ 15ರಿಂದ 16 ವರ್ಷ ಮಾತ್ರ ಬದುಕಬಹುದು. ಆದರೆ, ಮೃಗಾಲಯಗಳಲ್ಲಿ ಹುಲಿಗಳ ನಡುವೆ ಆಹಾರ ಮತ್ತು ಟೆರಿಟರಿಗಾಗಿ ಸಂಘರ್ಷಕ್ಕೆ ಅವಕಾಶವಿಲ್ಲದ ಕಾರಣ 18ರಿಂದ 19 ವರ್ಷಗಳ ಕಾಲ ಬದುಕಿದ ಉದಾಹರಣೆಗಳಿವೆ. ಇದೇ ಸಾಲಿನಲ್ಲಿ ನಿಲ್ಲುತ್ತದೆ ಶಿವಮೊಗ್ಗ ಮೃಗಾಲಯದ ವಾಲಿ.

ವಿಡಿಯೋ ರಿಪೋರ್ಟ್: ರಾಜ್ಯದ ಹಿರಿಯ ಹೆಣ್ಣಾನೆ ಗೀತಾಳ ಅಂತ್ಯಸಂಸ್ಕಾರ ಹೇಗಾಯ್ತು ಗೊತ್ತಾ? ಇನ್ನಷ್ಟು ಕುತೂಹಲಕಾರಿ ಅಂಶಗಳು

18 ವರ್ಷದ ವಾಲಿ ತ್ಯಾವರೆಕೊಪ್ಪದ ಸಫಾರಿಯಲ್ಲಿ ಮೃತಪಟ್ಟಿದ್ದಾನೆ. ವಯೋಸಹಜ ಕಾಯಿಲೆಗಳಿಂದ ಅಂಗಾಂಗ ವೈಫಲ್ಯಗೊಂಡು ಬಳಲುತ್ತಿದ್ದ ವಾಲಿಗೆ ಸಾಕಷ್ಟು ಚಿಕಿತ್ಸೆ ನೀಡಿದರೂ ಫಲಕಾರಿಯಾಗದೇ ಇತ್ತೀಚೆಗೆ ವಿಧಿವಶನಾಗಿದ್ದಾನೆ.
ವಯೋವೃದ್ಧನೆಂಬ ಕಾರಣಕ್ಕೋ ಅಥವಾ ಇಲ್ಲಿಯೇ ಹುಟ್ಟಿದ್ದಾನೆಂಬುವುದಕ್ಕೋ ಮೃಗಾಲಯದ ಹಿರಿಯ ಹುಲಿ ಖ್ಯಾತಿಯ ವಾಲಿಯ ಮೇಲೆ ತ್ಯಾವರೆಕೊಪ್ಪದ ಸಿಬ್ಬಂದಿಗೆ ಎಲ್ಲಿಲ್ಲದ ಅನುಕಂಪವಿತ್ತು. ಅತ್ಯಂತ ಪ್ರೀತಿಯಿಂದ ಕಾಣಲಾಗುತ್ತಿತ್ತು. ಈಗ ಆತನಿಲ್ಲದ ಸಫಾರಿ ಬಿಕೋ ಎನ್ನುತ್ತಿದೆ.

ಖೆಡ್ಡಾ ಆಪರೇಷನ್ ನಲ್ಲಿ ಸೆರೆ ಸಿಕ್ಕ ರಾಜ್ಯದ ಹಿರಿಯ ಹೆಣ್ಣಾನೆ ಸಾವು, ಏನಾಗಿತ್ತು ಗೊತ್ತಾ?

18 ತುಂಬಿದ್ದ ಹಿರಿಯ ಅಜ್ಜ ವಾಲಿ ಇತ್ತೀಚೆಗಂತೂ ಭಾರಿ ಸಪ್ಪಗಾಗಿದ್ದ. ಸಫಾರಿಯ ಕಡೆಗೆ ಮುಖ ಕೂಡ ಮಾಡುತ್ತಿರಲಿಲ್ಲ. ಎನ್‍ಕ್ಲೋಸರ್ ಬಿಟ್ಟು ಹೊರಗಡೆಯೂ ಬರುತ್ತಿರಲಿಲ್ಲ. ಆರೋಗ್ಯದಲ್ಲಿ ಭಾರಿ ಏರುಪೇರುಗಳು ಸಹ ಆಗಿದ್ದವು. ಇದೆಲ್ಲವನ್ನು ಗಮನಿಸಿ ಮೈಸೂರಿಗೆ ಕಳುಹಿಸುವ ಬಗ್ಗೆಯೂ ಅಧಿಕಾರಿಗಳು ಯೋಚಿಸುತ್ತಿದ್ದರು. ಅಷ್ಟರಲ್ಲಿ ಬಾರದ ಲೋಕಕ್ಕೆ ಹೋಗಿದ್ದಾನೆ.

ವಾಲಿಯ ಬಗ್ಗೆ ತಿಳಿದಿರಲೇಬೇಕಾದ ಅಂಶಗಳಿವು

  • ಶಿವಮೊಗ್ಗ ಮೃಗಾಲಯದಲ್ಲಿಯೇ ವಾಲಿ ಹುಟ್ಟಿ ಬೆಳೆದಿದ್ದು, ಕೃತಿಕಾ ಇದರ ತಾಯಿ. ವಾಲಿಯ ಸಹೋದರ ಭರತ್ ಕೂಡ ಕಳೆದ ತಿಂಗಳು ಸಾವನ್ನಪ್ಪಿದ್ದ.
  • ವಾಲಿ ತನ್ನ ಯೌವನಾವಸ್ಥೆಯಲ್ಲಿ ಭಾರಿ ಜೋರು ಮತ್ತು ಶಕ್ತಿಶಾಲಿಯಾಗಿದ್ದ.
  • ವಾಲಿಯ ಅಮ್ಮ ಕೃತಿಕಾ 2016ರಲ್ಲಿ ಮೃತಪಟ್ಟಿತ್ತು. 2020ರ ಅಕ್ಟೋಬರ್‍ನಲ್ಲಿ ಸಹೋದರ ಭರತ್ ಸಾವನ್ನಪ್ಪಿದ್ದ

ಸಫಾರಿಯಲ್ಲಿ ಐದೇ ಹುಲಿ: ಪ್ರಸಕ್ತ ಸಫಾರಿಯಲ್ಲಿ ಕೇವಲ ಐದು ಹುಲಿಗಳು ಇವೆ. ಅದರಲ್ಲಿ 2007ರಲ್ಲಿ ಚಾಮುಂಡಿಗೆ ಜನಿಸಿದ ವಿಜಯ ಮತ್ತು ದಶಮಿ (12 ವರ್ಷ), ವಾಲಿಯ ಸಹೋದರ ಹನುಮ(18), ರಾಮ ಮತ್ತು ಸೀತಾ (16 ವರ್ಷ)

error: Content is protected !!