ಗ್ಯಾಂಗ್ ರೇಪ್ ವಿರುದ್ಧ ಸಿಡಿದೆದ್ದ ಶಿವಮೊಗ್ಗ, ಆರೋಪಿಗಳನ್ನು ಗಲ್ಲಿಗೇರಿಸಲು ಹೆಚ್ಚುತ್ತಿದೆ ಒತ್ತಾಯ, ಇಂದೇನಾಯ್ತು?

 

 

ಸುದ್ದಿ ಕಣಜ.ಕಾಂ
ಶಿವಮೊಗ್ಗ: ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರದ ವಿರುದ್ಧ ಶಿವಮೊಗ್ಗ ಸಿಡಿದೆದ್ದಿದೆ. ಆರೋಪಿಗಳನ್ನು ಗಲ್ಲಿಗೇರಿಸುವಂತೆ ವಿವಿಧ ಸಂಘ-ಸಂಸ್ಥೆಗಳು, ಸಾರ್ವಜನಿಕರು ಒತ್ತಾಯಿಸುತ್ತಿದ್ದಾರೆ.

9SMG Gandhada gudiಆರೋಪಿಗಳಾಗಿ ಮನೋಜ್ ಮತ್ತು ಸಹಚರರಿಗೆ ಕಠಿಣ ಶಿಕ್ಷೆ ವಿಧಿಸಬೇಕು. ಹೇಯ ಕೃತ್ಯ ಎಸಗಿರುವ ಇವರನ್ನು ಗಲ್ಲಿಗೇರಿಸಬೇಕೆಂಬ ಕೂಗು ಬಲವಾಗುತ್ತಿದೆ. ಬುಧವಾರ ಕೂಡ ನಗರದ ಜಿಲ್ಲಾಧಿಕಾರಿ ಕಚೇರಿ ಮುಂದೆ ಹಲವರು ಪ್ರತಿಭಟನೆ ಮಾಡಿ ಜಿಲ್ಲಾಡಳಿದ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದರು.

ಗ್ಯಾಂಗ್ ರೇಪ್ ಮಾಡಿದ್ದ ನಾಲ್ವರು ಆರೋಪಿಗಳು ಅರೆಸ್ಟ್

ಯಾರ‍್ಯಾರು ಪ್ರತಿಭಟನೆ ಮಾಡಿದ್ದು?: ಜಯ ಕರ್ನಾಟಕ ಜಿಲ್ಲಾ ಮಹಿಳಾ ಘಟಕ, ಕರುನಾಡ ಯುವಶಕ್ತಿ ಜಿಲ್ಲಾ ಮಹಿಳಾ ಘಟಕ, ನವ ಕರ್ನಾಟಕ ಯುವಶಕ್ತಿ ಜಿಲ್ಲಾ ಘಟಕದಿಂದ ಪ್ರತಿಭಟನೆ ಮಾಡಲಾಯಿತು.
ಗಂಧದ ಗುಡಿ ಫೌಂಡೇಶನ್ ಜಿಲ್ಲಾಧ್ಯಕ್ಷ ಸಿ.ಎಸ್.ವೇಣುಗೋಪಾಲ್, ಉಪಾಧ್ಯಕ್ಷ ಕುಶಾಲ್ ಎಂ.ಕಲ್ಮಠ್ ಕಪ್ಪು ಬಟ್ಟೆ ಧರಿಸಿ ಧರಣಿ ಸತ್ಯಾಗ್ರಹ ನಡೆಸಿದರು.
ಪಾಲ್ಗೊಂಡವರು: ಜಯ ಕರ್ನಾಟಕ ಜಿಲ್ಲಾ ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ನಾಜೀಮಾ, ಪ್ರೇಮ, ರೇಖಾ, ಮೀನಾಕ್ಷಿ, ಡಾ.ದೀಪಕ್, ನಾಗರತ್ನಮ್ಮ, ಮಹಮ್ಮದ್ ನಾಸಿರುದ್ದೀನ್ ಹಲವರು ಪಾಲ್ಗೊಂಡಿದ್ದರು.

9SMG nava karanataka

ನಾಳೆಯಿಂದ ಕರ್ಫ್ಯೂ ಏರಿಯಾದಲ್ಲಿ ವಹಿವಾಟು ವೇಳೆ ಬದಲಾವಣೆ, ವರ್ತಕರ ಆಗ್ರಹಕ್ಕೆ ಡಿಸಿ ಹೇಳಿದ್ದೇನು?

ನವ ಕರ್ನಾಟಕ ಯುವಶಕ್ತಿ ಜಿಲ್ಲಾ ಘಟಕದ ಡಾ.ಡಿ.ಜೆ. ತಾನಾಜಿ, ಆರ್.ಸತೀಶ್ ಗೌಡ, ಡಿ.ಜೀವನ್, ಗಣೇಶ್, ಎಚ್.ಪ್ರಫುಲ್ ಚಂದ್ರ, ಮೊಹಮ್ಮದ್ ಶಫಿ ಭಾಗವಹಿಸಿದ್ದರು.
ಕರುನಾಡ ಯುವಶಕ್ತಿ ಜಿಲ್ಲಾ ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಕೆ.ಬಿ.ವಿಜಯಲಕ್ಷ್ಮಿ, ಪದಾಧಿಕಾರಿಗಳಾದ ನಾಗವೇಣಿ, ಸಿಂಚನ, ಭಾಗ್ಯಶ್ರೀ, ಎಸ್.ಎಂ.ಸಿ.ಸ್ವಾಮಿ, ಸುನೀಲ್ ಉಪಸ್ಥಿರಿದ್ದರು.

error: Content is protected !!