10 ಹಸುಗಳು ಸ್ಥಳದಲ್ಲೇ ಸಾವು

 

 

hasu savuಸುದ್ದಿ ಕಣಜ.ಕಾಂ
ತೀರ್ಥಹಳ್ಳಿ: ಕ್ಯಾಂಟರ್ ಪಲ್ಟಿಯಾದ ಪರಿಣಾಮ ಹತ್ತು ಹಸುಗಳು ಸ್ಥಳದಲ್ಲೇ ಮೃತಪಟ್ಟಿವೆ.
ದಾನಸಾಲೆ ಹೊರಬೈಲು ಸಮೀಪ ಜಾನುವಾರು ತುಂಬಿದ್ದ ಕ್ಯಾಂಟರ್ ಪಲ್ಟಿಯಾಗಿದ್ದರಿಂದ 20 ಜಾನುವಾರುಗಳಲ್ಲಿ 10 ಮೃತಪಟ್ಟಿದ್ದು, ಇನ್ನುಳಿದವುಗಳಿಗೆ ಗಾಯಗಳಾಗಿವೆ.
ದಾವಣಗೆರೆಯಿಂದ ಮಂಗಳೂರಿಗೆ ಹೋಗುವಾಗ ಘಟನೆ ಸಂಭವಿಸಿದೆ. ಆದರೆ, ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ಹಸುಗಳನ್ನು ತುಂಬಿಕೊಂಡು ಎಲ್ಲಿಗೆ ಹೋಗುತ್ತಿದ್ದರೆಂಬ ವಿಷಯ ಇನ್ನೂ ತಿಳಿದುಬಂದಿಲ್ಲ. ಮಾಳೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ತನಿಖೆ ಮುಂದುವರಿದಿದೆ.

error: Content is protected !!