ಸುದ್ದಿ ಕಣಜ.ಕಾಂ
ಶಿವಮೊಗ್ಗ: ಶುಕ್ರವಾರ ಆರೋಗ್ಯ ಇಲಾಖೆ ಬಿಡುಗಡೆ ಮಾಡಿರುವ ಮೀಡಿಯಾ ಬುಲೆಟಿನ್ ನಲ್ಲಿ ಬರೀ ನಾಲ್ವರಿಗೆ ಕೋವಿಡ್ ಪಾಸಿಟಿವ್ ಇದೆ. ಕೊರೊನಾ ಆರಂಭವಾದಾಗಿನಿಂದ ಅತೀ ಕಡಿಮೆ ಪ್ರಕರಣ ದಾಖಲಾಗಿರುವುದು ಇದೇ ಮೊದಲು. ಜತೆಗೆ, ಚಿಕಿತ್ಸೆ ಪಡೆದು 14 ಜನ ಗುಣಮುಖರಾಗಿದ್ದಾರೆ. ಇಂದೂ ಯಾವುದೇ ಸಾವು ಸಂಭವಿಸಿಲ್ಲ. ಇದುವರೆಗೆ 348 ಜನ ಮೃತಪಟ್ಟಿದ್ದಾರೆ.
ನಿರಂತರ ಕೋವಿಡ್ ಪರೀಕ್ಷೆ ನಡೆದಿದ್ದು, ಇಂದು 1538 ಜನರ ಮಾದರಿಯನ್ನು ಸಂಗ್ರಹ ಮಾಡಲಾಗಿದೆ. ಈ ಹಿಂದೆ ಪಡೆದಿದ್ದರಲ್ಲಿ 1726 ವರದಿ ನೆಗೆಟಿವ್ ಬಂದಿದೆ.
ಕಂಟೈನ್ಮೆಂಟ್ ಜೋನ್ ಗಳಲ್ಲೂ ಇಳಿಕೆಯಾಗಿದೆ. ಇಲ್ಲಿಯವರೆಗೆ 7200 ಜೋನ್ ಗುರುತಿಸಲಾಗಿದೆ. ಅದರಲ್ಲಿ 6720 ಕೈಬಿಡಲಾಗಿದೆ.
ತಾಲೂಕು ವರದಿ: ಶಿವಮೊಗ್ಗ 1, ಭದ್ರಾವತಿ 2, ಶಿಕಾರಿಪುರ 0, ತೀರ್ಥಹಳ್ಳಿ 0, ಸೊರಬ 0, ಸಾಗರ 0, ಹೊಸನಗರ 0 ಹಾಗೂ ಬೇರೆ ಜಿಲ್ಲೆಯ 1 ಒಬ್ಬರಿಗೆ ಕೋವಿಡ್ ಪಾಸಿಟಿವ್ ಬಂದದೆ.
ಪ್ರಸಕ್ತ ಮೆಗ್ಗಾನ್ ಜಿಲ್ಲಾಸ್ಪತ್ರೆಯಲ್ಲಿ 21 ಜನ ಚಿಕಿತ್ಸೆ ಪಡೆಯುತ್ತಿದ್ದಾರೆ. ಖಾಸಗಿ ಆಸ್ಪತ್ರೆಯಲ್ಲಿ 5, ಮನೆ ಆರೈಕೆಯಲ್ಲಿ 94 ಜನ ಸೇರಿ ಜಿಲ್ಲೆಯಲ್ಲಿ ಒಟ್ಟು 120 ಸಕ್ರಿಯ ಪ್ರಕರಣಗಳು ಇವೆ.