ಭದ್ರಾವತಿಯಲ್ಲಿ ಎಸಿಬಿ ದಾಳಿ, ಲಂಚ ಸ್ವೀಕರಿಸುವಾಗ ರೆಡ್ ಹ್ಯಾಂಡ್ ಆಗಿ ಅರೆಸ್ಟ್

 

 

ಸುದ್ದಿ ಕಣಜ.ಕಾಂ
ಭದ್ರಾವತಿ: ವಾಣಿಜ್ಯ ತೆರಿಗೆ ಕಚೇರಿಯಲ್ಲಿ ಲಂಚದ ಹಣ ಸ್ವೀಕರಿಸುವಾಗ ರೆಡ್ ಹ್ಯಾಂಡ್ ಆಗಿ ಕಂಪ್ಯೂಟರ್ ಆಪ್‍ರೇಟರ್ ಭ್ರಷ್ಟಾಚಾರ ನಿಗ್ರಹ ದಳದ ಬಲೆಗೆ ಮಂಗಳವಾರ ಬಿದ್ದಿದ್ದಾನೆ.

ಇದನ್ನೂ ಓದಿ । ಮೈಸೂರಿನಿಂದ ಬಂದಿದ್ದ ಎಮು ಇನ್ನಿಲ್ಲ

ಕಂಪ್ಯೂಟರ್ ಆಪರೇಟರ್ ವೇಣು ಎಂಬಾತನೇ ಎಸಿಬಿ ಬಲೆಗೆ ಬಿದ್ದಾತ. ಈತ ಶಾಮೀಯಾನ ವ್ಯಾಪಾರ ಮಾಡುವ ಜಾಕೀರ್ ಎಂಬಾತನಿಗೆ ಆನ್‍ಲೈನ್ ಮೂಲಕ ಜಿಎಸ್‍ಟಿ ನೋಂದಣಿಗೆ 2500 ರೂಪಾಯಿ ಲಂಚಕ್ಕೆ ಬೇಡಿಕೆ ಇಟ್ಟಿದ್ದ. ಅದರನ್ವಯ ಹಣ ಸ್ವೀಕರಿಸುವಾಗ ಎಸಿಬಿಯವರು ಬಲೆ ಬೀಸಿ, ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ.

ಇದನ್ನೂ ಓದಿ । ಜನವರಿ 20ರಿಂದ ಮೈಸೂರು-ತಾಳಗುಪ್ಪ ರೈಲು ಪುನರಾರಂಭ, ಟಿಕೆಟ್ ಬುಕಿಂಗ್ ಹೇಗೆ ಮಾಡಬೇಕು ಇಲ್ಲಿದೆ ಮಾಹಿತಿ

ಎಸಿಬಿ ಡಿವೈಎಸ್‍ಪಿ ಲೋಕೇಶ್ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಲಾಗಿದೆ. ಇನ್ಸ್‍ಪೆಕ್ಟರ್ ಇಮ್ರಾನ್ ಬೇಗ್, ಸಿಬ್ಬಂದಿ ವಸಂತ್, ರಘುನಾಯ್ಕ್, ನಾಗರಾಜ್, ಸುರೇಂದ್ರ, ಹರೀಶ್, ಯೋಗೇಶ್, ಶ್ರೀನಿವಾಸ್ ಪಾಲ್ಗೊಂಡಿದ್ದರು.

error: Content is protected !!