VIDEO REPORT | ಹುಣಸೋಡು ಗ್ರಾಮದಲ್ಲಿ ಬೆಳಗ್ಗೆಯಿಂದ ಏನೇನಾಯ್ತು?

 

 

ಸುದ್ದಿ ಕಣಜ.ಕಾಂ
ಶಿವಮೊಗ್ಗ: ಹುಣಸೋಡು ಗ್ರಾಮದಲ್ಲಿ ಗುರುವಾರ ರಾತ್ರಿ ಏಕಾಏಕಿ ಸಂಭವಿಸಿದ ಸ್ಫೋಟ ಬರೀ ಆ ಗ್ರಾಮವನ್ನು ಮಾತ್ರವಲ್ಲದೇ ಅಕ್ಕಪಕ್ಕದವರ ನೆಮ್ಮದಿಯನ್ನೂ ಹಾಳು ಮಾಡಿದೆ.

VIDEO REPORT

ಗ್ರಾಮದ ಪ್ರತಿಯೊಬ್ಬರು ಭಯ, ಭೀತಿ ಮತ್ತು ಗಾಬರಿಯಲ್ಲಿದ್ದಾರೆ. ಈ ಎಲ್ಲ ಘಟನೆಗಳ ಮಧ್ಯೆ ರಾತ್ರಿಯಿಂದಲೇ ಪೊಲೀಸ್ ಇಲಾಖೆ ಈ ಸ್ಥಳದಲ್ಲಿ ಬಿಗಿ ಬಂದೋಬಸ್ತ್ ಕಲ್ಪಿಸಿದೆ.
ಬೆಳಗ್ಗೆ ಎರಡು ಶವಗಳನ್ನು ಸಾಗಿಸಲಾಗಿದೆ. ಅದಾದ ಬಳಿಕ ಮತ್ತೆ ಮೂರು ಶವಗಳನ್ನು ಘಟನಾ ಸ್ಥಳದಿಂದ ಹೊರತೆಗೆದು ಆಂಬ್ಯುಲೆನ್ಸ್ ಮೂಲಕ ಕಳುಹಿಸಲಾಗಿದೆ.
ಬಾಂಬ್ ನಿಷ್ಕ್ರಿಯ ದಳ, ಶ್ವಾನ ದಳ ಸಿಬ್ಬಂದಿ ಸ್ಥಳ ಪರಿಶೀಲನೆ ಮಾಡಿದರು. ಎಲ್ಲೆಲ್ಲೋ ಹಾರಿ ಬಿದ್ದ ಶವದ ಅಂಗಾಂಗಗಳನ್ನು ಸೇರಿಸಿ ಸಾಗಿಸಲಾಯಿತು. ರಾತ್ರಿಯಿಂದಲೇ ಅಗ್ನಿಶಾಮಕ ದಳ ಮೊಕ್ಕಾಂ ಹೂಡಿದೆ.
ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್.ಈಶ್ವರಪ್ಪ, ಸಂಸದ ಬಿ.ವೈ.ರಾಘವೇಂದ್ರ, ಶಾಸಕರಾದ ಅಶೋಕ್ ನಾಯ್ಕ, ಆಯನೂರು ಮಂಜುನಾಥ್, ಬಿ.ಕೆ.ಸಂಗಮೇಶ್, ಮಾಜಿ ಶಾಸಕ ಕೆ.ಬಿ.ಪ್ರಸನ್ನಕುಮಾರ್, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಎಚ್.ಎಸ್.ಸಂದರೇಶ್ ಸೇರಿದಂತೆ ವಿವಿಧ ಪಕ್ಷದ ನಾಯಕರು, ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.

error: Content is protected !!