Special story | ಶಿವಮೊಗ್ಗದಲ್ಲಿ ಆಪರೇಷನ್ ಬುಲ್ಡೋಜರ್, ಎಲ್ಲೆಲ್ಲಿ ತೆರವು ಕಾರ್ಯಾಚರಣೆ?, ಜನಾಭಿಮತ ಇಲ್ಲಿದೆ

Operation JCB

 

 

ಸುದ್ದಿ ಕಣಜ.ಕಾಂ ಶಿವಮೊಗ್ಗ
ಶಿವಮೊಗ್ಗ (shivamogga) ನಗರದ ಜನನಿಬಿಡ ಪ್ರದೇಶಗಳಲ್ಲಿ ಮಹಾನಗರ ಪಾಲಿಕೆ `ಆಪರೇಷನ್ ಬುಲ್ಡೋಜರ್'(operation bulldozer) ಇನ್ನಷ್ಟು ಜೋರಾಗಲಿದೆ. ಬುಧವಾರ ರಾತ್ರಿಯಿಂದ ಕಾರ್ಯಾಚರಣೆ ಆರಂಭಿಸಿದ್ದು, ಇದು ನಿರಂತರವಾಗಿ ಸಾಗಲಿದೆ.

READ | ಕಾನೂನು ವಿದ್ಯಾರ್ಥಿಗಳೇ ಗಮನಿಸಿ, ಅರ್ಜಿ ಸಲ್ಲಿಸಿ ಮಾಸಿಕ 10,000 ಶಿಷ್ಯವೇತನ ಪಡೆಯಿರಿ

ಮೊದಲ ಹಂತದಲ್ಲಿ ಪ್ರಮುಖ ವ್ಯಾಪಾರ ಕೇಂದ್ರವಾಧ ಗಾಂಧಿ ಬಜಾರಿನಲ್ಲಿ ಕಾರ್ಯಾಚರಣೆ ಕೈಗೊಳ್ಳಲಾಗಿದೆ. ಈಗಾಗಲೇ ಪಾದಾಚಾರಿ ರಸ್ತೆಗಳಿಗೆ ಅಡ್ಡಲಾಗಿ ಕಟ್ಟಲಾಗಿದ್ದ ಕಟ್ಟೆ, ಗೋಡೆಗಳನ್ನು ಮುಲಾಜಿಲ್ಲದೇ ಪಾಲಿಕೆಯಿಂದ ತೆರವುಗೊಳಿಸಲಾಗಿದೆ.

ಶಿವಮೊಗ್ಗ ನಗರದ ಗಾಂಧಿ ಬಜಾರ್ ಸುತ್ತ ಪುಟ್ಪಾತ್ ಒತ್ತುವರಿ, ಅತಿಕ್ರಮಣಗಳನ್ನು ತೆರವು ಗೊಳಿಸಿದ ಜಿಲ್ಲಾಧಿಕಾರಿ ಡಾ.ಆರ್.ಸೆಲ್ವಮಣಿ, ಜಿಲ್ಲಾ ರಕ್ಷಣಧಿಕಾರಿ ಜಿ.ಕೆ.ಮಿಥನ್ ಕುಮಾರ್ ಮತ್ತು ಮಹಾನಗರ ಪಾಲಿಕೆಯ ಆಯುಕ್ತ ಮಾಯಣ್ಣ ಗೌಡ ಅವರ ಕ್ರಮವನ್ನು ಶಿವಮೊಗ್ಗ ನಾಗರಿಕ ಹಿತರಕ್ಷಣಾ ವೇದಿಕೆಗಳ ಒಕ್ಕೂಟ ಸ್ವಾಗತಿಸುತ್ತದೆ. ಶಿವಮೊಗ್ಗ ಸ್ಮಾರ್ಟ್ ಸಿಟಿಗೆ ಇವರ ಈ ಕಾರ್ಯ ಪೂರಕವಾಗಿದ್ದು, ಪುಟ್ಪಾತ್ ಒತ್ತುವರಿ ತೆರವು ಕಾರ್ಯ ಮುಂದುವರಿಸಿ, ಇಡೀ ನಗರದಲ್ಲಿ ನಾಗರಿಕರಿಗೆ ಸಂಚಾರಕ್ಕೆ ಪುಟ್ಪಾತ್ ನಲ್ಲಿ ಅವಕಾಶ ಕಲ್ಪಿಸಬೇಕು.
ಕೆ.ವಿ.ವಸಂತ್ ಕುಮಾರ್, ಪ್ರಮುಖರು, ಶಿವಮೊಗ್ಗ ನಾಗರಿಕ ಹಿತರಕ್ಷಣಾ ವೇದಿಕೆಗಳ ಒಕ್ಕೂಟ

ಆಪರೇಷನ್ ಬುಲ್ಡೋಜರ್ ಏಕೆ?

  • ಪ್ರಮುಖ ವ್ಯಾಪಾರ ಕೇಂದ್ರಗಳಲ್ಲಿ ಪಾದಾಚಾರಿ ರಸ್ತೆಗಳನ್ನು ಒತ್ತುವರಿ ಮಾಡಿದ್ದರಿಂದ ಜನರ ಓಡಾಟಕ್ಕೆ ತೊಂದರೆ ಆಗುತ್ತಿತ್ತು.
  • ಪಾದಾಚಾರಿ ರಸ್ತೆಗಳಲ್ಲಿಯೇ ವ್ಯಾಪಾರ ವಹಿವಾಟು ನಡೆಯುತ್ತಿದ್ದರಿಂದ ಜನರು ರಸ್ತೆಯ ಮೇಲೆ ನಡೆದಾಡುವ ಸ್ಥಿತಿ ಸೃಷ್ಟಿಯಾಗಿತ್ತು.
  • ವಾಹನ ಸವಾರರು ವಾಹನಗಳ ನಿಲುಗಡೆಗೆ ಸರಿಯಾದ ವ್ಯವಸ್ಥೆ ಇಲ್ಲದೇ ಎಲ್ಲೆಂದರಲ್ಲಿ ನಿಲ್ಲಿಸುವುದು, ಅದರ ನಡುವೆ ಫುಟ್ ಪಾತ್ ಇಲ್ಲದೇ ಜನ ರಸ್ತೆಯ ಮೇಲೆ ನಡೆದಾಡುವ ಅಶಿಸ್ತು ಜಾರಿಯಲ್ಲಿತ್ತು.
  • ಮಹಾನಗರ ಪಾಲಿಕೆಯಲ್ಲಿ ಈ ಹಿಂದೆ ಕರೆದಿದ್ದ ಸಭೆಯಲ್ಲೂ ಸಾರ್ವಜನಿಕರು, ಬೀದಿಬದಿ ವ್ಯಾಪಾರಿಗಳು ಫುಟ್ ಪಾತ್ ಒತ್ತುವರಿಯಿಂದ ಆಗುತ್ತಿರುವ ಸಮಸ್ಯೆಯ ಬಗ್ಗೆ ದೂರು ಸಲ್ಲಿಸಿದ್ದರು.

ಮಹಾನಗರ ಪಾಲಿಕೆ ಅಧಿಕಾರಿಗಳು ಈ ಎಲ್ಲ ಅಂಶಗಳನ್ನು ಅರಿತು `ಆಪರೇಷನ್ ಬುಲ್ಡೋಜರ್’ಗೆ ಮುಂದಡಿ ಬರೆದಿದ್ದಾರೆ. ಇದಕ್ಕೆ ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆ ಪೂರ್ಣ ಬೆಂಬಲ ನೀಡಿದೆ. ಹೀಗಾಗಿ, ಶಿವಮೊಗ್ಗ ನಗರದಲ್ಲಿ ಬರುವ ದಿನಗಳಲ್ಲಿ ಪಾರ್ಕಿಂಗ್, ಪಾದಾಚಾರಿಗಳ ಹಕ್ಕು ಇತ್ಯಾದಿಗಳ ಪಾಲನೆ ಸರಿಯಾಗಿ ಆಗಲಿದೆ ಎಂಬ ವಿಶ್ವಾಸ ಮೂಡಿದೆ.

READ | ಶಾಸಕ ಬಿ.ಕೆ.ಸಂಗಮೇಶ್ವರ್’ಗೆ Rs.50 ಅಲ್ಲ 500 ಕೋಟಿ ಆಫರ್ ಮಾಡಿದ್ದು! 

ಇನ್ನೂ ಎಲ್ಲೆಲ್ಲಿ ನಡೆಯಲಿದೆ ಆಪರೇಷನ್ ಬುಲ್ಡೋಜರ್?
ಪ್ರಸ್ತುತ ಗಾಂಧಿನಗರ ಸುತ್ತಮುತ್ತ ನಡೆಯುತ್ತಿದೆ. ರಾಮಣ್ಣಶ್ರೇಷ್ಠಿ ಪಾರ್ಕ್, ಸಿದ್ದಯ್ಯ ವೃತ್ತ, ಎಂಕೆಕೆ ವೃತ್ತ, ಚೋರ್ ಬಜಾರ್, ವೀರಶೈವ ಕಲ್ಯಾಣ ಮಂದಿರ ಮುಂಭಾಗ ಹಲವೆಡೆ ನಡೆಯುತ್ತಿದೆ. ಇನ್ನೂ ಬರುವ ದಿನಗಳಲ್ಲಿ ಬುಲ್ಡೋಜರ್ ಸದ್ದು ಕೆಎಸ್.ಆರ್.ಟಿಸಿ ಬಸ್ ನಿಲ್ದಾಣ, ಖಾಸಗಿ ಬಸ್ ನಿಲ್ದಾಣ, ದುರ್ಗಿಗುಡಿ, ಶಿವಮೂರ್ತಿ ಸರ್ಕಲ್, ಆಲ್ಕೋಳ ಸರ್ಕಲ್, ಕುವೆಂಪು ರಸ್ತೆ, ನೆಹರೂ ರಸ್ತೆ ಸೇರಿದಂತೆ ಇನ್ನಿತರ ಭಾಗಗಳಲ್ಲಿ ನಡೆಯಲಿದೆ. ಸಾರ್ವಜನಿಕರು ಸಹಕರಿಸಬೇಕು ಎಂದು ಪಾಲಿಕೆ ಆಡಳಿತ ವರ್ಗ ಮನವಿ ಮಾಡಿದೆ.

error: Content is protected !!