ಕೇಳುವವರಿಲ್ಲ ಹುಣಸೋಡು ಗ್ರಾಮಸ್ಥರ ಗೋಳು, ಕಿವಿಯೇ ಕೇಳುತ್ತಿಲ್ಲ, ಇನ್ನೂ ಹಲವರಲ್ಲಿ ಸುಸ್ತು

 

 

ಸುದ್ದಿ ಕಣಜ.ಕಾಂ
ಶಿವಮೊಗ್ಗ: ಹುಣಸೋಡು ಗ್ರಾಮಸ್ಥರ ಗೋಳು ಕೇಳುವವರೇ ಇಲ್ಲ. ಜನಪ್ರತಿನಿಧಿಗಳು ಬಂದು ಕಲ್ಲು ಕ್ವಾರಿ ಮತ್ತು ಶವಗಳನ್ನು ವೀಕ್ಷಿಸಿ ಹೋಗುತ್ತಿದ್ದಾರೆಯೇ ವಿನಹ ಬದುಕಿರುವವರ ಬಗ್ಗೆ ತಲೆಯೇ ಕೆಡಿಸಿಕೊಳ್ಳುತ್ತಿಲ್ಲ ಎಂದು ಸ್ಫೋಟ ಸಂಭವಿಸಿದ ಕಲ್ಲು ಕ್ವಾರಿ ಪಕ್ಕದ ಮನಯಲ್ಲೇ ವಾಸವಾಗಿರುವ ವ್ಯಕ್ತಿಯೊಬ್ಬರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

IMG 20210122 112130
ಮಕ್ಕಳು, ಮಹಿಳೆಯರು ಹುಷಾರಿಲ್ಲದೇ ಮಲಗಿದ್ದಾರೆ. ಕೆಲವರಿಗೆ ಕಿವಿಯೇ ಕೇಳುತ್ತಿಲ್ಲ. ಇಡೀ ರಾತ್ರಿ ನಿದ್ದೆಯೂ ಮಾಡಿಲ್ಲ. ಇಂತಹ ಸಂಕಷ್ಟ ಸ್ಥಿತಿಯಲ್ಲಿದ್ದು ಇದರೆಡೆಗೆ ಗಮನಹರಿಸುವವರೇ ಇಲ್ಲ. ರಾಜಕಾರಣಿಗಳು ಮತ್ತು ಅಧಿಕಾರಿಗಳು ನಿರ್ಲಕ್ಷ್ಯ ವಹಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

IMG 20210122 113220
ಕಿವಿಯೇ ಕೇಳುತ್ತಿಲ್ಲ: ಗ್ರಾಮದ ನಿವಾಸಿ ಪೂಜಾ ಎಂಬುವವರಿಗೆ ನಿನ್ನೆಯ ಘಟನೆಯಿಂದಾಗಿ ಕಿವಿ ಕೇಳುತ್ತಿಲ್ಲ. ಮಕ್ಕಳು ಜ್ವರದಿಂದ ಹಾಸಿಗೆ ಹಿಡಿದಿದ್ದಾರೆ. ಮನೆಗಳು ಬಿರುಕು ಬಿಟ್ಟಿವೆ. ಇಡೀ ರಾತ್ರಿ ನಿದ್ದೆ ಇಲ್ಲ. ಕರೆಂಟ್ ಇಲ್ಲ. ವಯಸ್ಸಾದವರು ಸ್ಫೋಟದ ಸದ್ದಿನ ಘಾಸಿಯಿಂದ ಇದುವರೆಗೆ ಹೊರಗೆ ಬರಲು ಸಾಧ್ಯವಾಗಿಲ್ಲ.

error: Content is protected !!