ಶಕ್ತಿಧಾಮ ಲೇಔಟ್ ಬಳಿ ಖಾಕಿ ಬಲೆಗೆ ಬಿದ್ದ ದರೋಡೆಕೋರರ ಗುಂಪು, ಅವರ ಬಳಿ ಏನೇನಿತ್ತು ಗೊತ್ತಾ?

 

 

ಸುದ್ದಿ ಕಣಜ.ಕಾಂ
ಶಿವಮೊಗ್ಗ: ನಗರ ಹೊರವಲಯದ ಶಕ್ತಿಧಾಮ ಲೇಔಟ್‍ನಲ್ಲಿ ದರೋಡೆಗೆ ಹೊಂಚು ಹಾಕಿದ್ದ ಇಬ್ಬರನ್ನು ಬಂಧಿಸಿದ್ದು, ಮೂವರು ಪರಾರಿಯಾಗಿದ್ದಾರೆ.

ಇದನ್ನೂ ಓದಿ । ಬಂಕ್‍ನಲ್ಲೇ ಆಯ್ತು 8 ಸಾವಿರ ಲೀಟರ್ ಪೆಟ್ರೋಲ್ ಲೀಕ್!

ಲೇಔಟ್‍ನಲ್ಲಿ ನಡೆದುಕೊಂಡು ಹೋಗುವವರು ಹಾಗೂ ಬೈಕ್ ಸವಾರರನ್ನು ತಡೆದು ಅವರಿಂದ ಹಣ ವಸೂಲಿ ಮಾಡಲಾಗುತ್ತಿತ್ತು. ಚಿನ್ನಾಭರಣ ದೋಚಲಾಗುತ್ತಿತ್ತು. ದರೋಡೆಗೆ ಹೊಂಚು ಹಾಕಿ ಕುಳಿತ ಬಗ್ಗೆ ಖಚಿತ ಮಾಹಿತಿ ಪಡೆದ ತುಂಗಾನಗರ ಪೊಲೀಸ್ ಠಾಣೆಯ ಸಬ್ ಇನ್ಸ್ ಪೆಕ್ಟರ್ ತಿರುಮಲೇಶ್ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಿ, ನ್ಯಾಯಾಂಗ ಬಂಧನಕ್ಕೆ ನೀಡಲಾಗಿದೆ.
ಬಂಧಿತರು | ಟಿಪ್ಪುನಗರದ ಸುಹೇಲ್ ಖಾನ್ (24), ಅಬ್ದುಲ್ ಸಲಾಂ(22) ಎಂಬುವವರನ್ನು ಬಂಧಿಸಲಾಗಿದೆ. ಪೊಲೀಸರು ದಾಳಿ ಮಾಡುತ್ತಿದ್ದಂತೆಯೇ ಇನ್ನೂ ಮೂವರು ಅಲ್ಲಿಂದ ಎಸ್ಕೆಪ್ ಆಗಿದ್ದು ಅವರ ಹುಡುಕಾಟ ಕೂಡ ನಡೆದಿದೆ.
ಬಂಧಿತರ ಬಳಿ ಸಿಕ್ಕಿದ್ದೇನು | ಆರೋಪಿಗಳ ಬಳಿಯಿಂದ ಒಂದು ಬೈಕ್, ಚಾಕು, ಕಬ್ಬಿಣದ ರಾಡ್, 200 ಗ್ರಾಂ ಖಾರದ ಪುಡಿಯನ್ನು ಜಪ್ತಿ ಮಾಡಲಾಗಿದೆ.

error: Content is protected !!