SHIVAMOGGA | ಮತ್ತೆ ಸದ್ದು ಮಾಡಿದ ಪೊಲೀಸರ ಬಂದೂಕು

 

 

ಸುದ್ದಿ ಕಣಜ.ಕಾಂ
ಶಿವಮೊಗ್ಗ: ಹಲವು ದಿನಗಳ ನಂತರ ಶಿವಮೊಗ್ಗದಲ್ಲಿ ಪೊಲೀಸರ ಬಂದೂಕು ಮತ್ತೆ ಸದ್ದು ಮಾಡಿದೆ. ರೌಡಿಶೀಟರ್ ವೊಬ್ಬನ ಮೇಲೆ ಒಂದು ಸುತ್ತಿನ ಗುಂಡು ಹಾರಿಸಿದ್ದು, ಈ ಕಾರ್ಯಾಚರಣೆಯಲ್ಲಿ ಮುಖ್ಯ ಪೇದೆಯೊಬ್ಬರು ಗಾಯಗೊಂಡಿದ್ದಾರೆ.
ರೌಡಿಶೀಟರ್ ದೀಪು ಅಲಿಯಾಸ್ ಡಿಂಗನನ್ನು ಬಂಧಿಸಲು ಪೊಲೀಸರು ಅನುಪಿನಕಟ್ಟೆ ಹೋದಾಗ ಆತ ತುಂಗಾನಗರ ಪೊಲೀಸ್ ಠಾಣೆ ಮುಖ್ಯ ಪೇದೆ ಅರುಣ್ ಕುಮಾರ್ ಮೇಲೆ ದಾಳಿ ನಡೆಸಿ ತಪ್ಪಿಸಿಕೊಳ್ಳಲು ಯತ್ನಿಸಿದ್ದಾನೆ. ಆಗ ಇನ್ ಸ್ಪೆಕ್ಟರ್ ದೀಪಕ್ ಗಾಳಿಯಲ್ಲಿ ಒಂದು ಸುತ್ತಿನ ಗುಂಡು ಹಾರಿಸಿದ್ದಾರೆ. ನಿಲ್ಲುವಂತೆ ಎಚ್ಚರಿಕೆ ನೀಡಿದರೂ ತಪ್ಪಿಸಿಕೊಳ್ಳುವಾಗ ಕಾಲಿಗೆ ಗುಂಡು ಹಾರಿಸಿದ್ದಾರೆ.
ದೀಪು, ಬಚ್ಚನ್ ಗ್ಯಾಂಗಿನ ಸದಸ್ಯನೆಂದು ಹೇಳಲಾಗಿದೆ. ಇತ್ತೀಚೆಗೆ ಟಿಪ್ಪುನಗರದಲ್ಲಿ ರೋಲ್ ಕಾಲ್ ಮಾಡುತ್ತಿದ್ದ. ಜತೆಗೆ, ಸಹೋದರರಿಬ್ಬರ ಮೇಲೆ ದಾಳಿ ಸಹ ಮಾಡಿದ್ದ. ಈ ಪ್ರಕರಣದ ತನಿಖೆಗಾಗಿ ಬಂಧಿಸಲು ಹೋದಾಗ ಘಟನೆ ನಡೆದಿದೆ.

error: Content is protected !!