ಮೂರು ದಿನಗಳ ಹಳ್ಳಿ ಥೇಟ್ರು ನಾಟಕೋತ್ಸವ, ಬುಕ್ ಮೈ ಶೋದಲ್ಲೂ ಟಿಕೆಟ್ ಲಭ್ಯ

 

 

ಸುದ್ದಿ ಕಣಜ.ಕಾಂ
ಶಿವಮೊಗ್ಗ: ನಮ್ಮ ಹಳ್ಳಿ ಥಿಯೇಟರ್, ವಿಶ್ವಪಥ ಕಲಾ ಸಂಗಮ ವತಿಯಿಂದ ನಗರದ ರಂಗಾಯಣದ ಸುವರ್ಣ ಸಾಂಸ್ಕøತಿಕ ಭವನದಲ್ಲಿ ಮೂರು ದಿನಗಳ ಹಳ್ಳಿ ಥೇಟ್ರು ನಾಟಕೋತ್ಸವ-2 ಆಯೋಜಿಸಲಾಗಿದೆ ಎಂದು ನಮ್ಮ ಹಳ್ಳಿ ಥಿಯೇಟರ್ ಖಜಾಂಚಿ ಚೇತನ್ ಸಿ.ರಾಯನಹಳ್ಳಿ ತಿಳಿಸಿದರು.
ಬುಧವಾರ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಟಿಕೆಟ್ ಗಳನ್ನು ಬುಕ್ ಮೈ ಶೋ ಮೂಲಕ ಕಾಯ್ದಿರಿಸಲು ಅವಕಾಶ ನೀಡಲಾಗಿದೆ. ಆಸಕ್ತರು ಇದರ ಸೌಲಭ್ಯ ಪಡೆಯಬೇಕೆಂದು ಮನವಿ ಮಾಡಿದರು.
ಪ್ರದರ್ಶನಗೊಳ್ಳಲಿರುವ ನಾಟಕಗಳು

  • ಫೆಬ್ರವರಿ 5ರಂದು ಹನುಮಂತ ಹಾಲಿಗೇರಿ ರಚನೆಯ ಭಾಸ್ಕರ್ ನೀನಾಸಂ ನಿರ್ದೇಶನದ ನಾಟಕ `ಊರು ಸುಟ್ಟರೂ ಹನುಮಪ್ಪ ಹೊರಗೆ’,
  • ಫೆಬ್ರವರಿ 6ರಂದು ಹಾಸ್ಯ ಬರಹಗಾರ ಎಚ್.ಡುಂಡಿರಾಜ್ ರಚನೆಯ ಬಿ.ಅಶೋಕ್ ನಿರ್ದೇಶನದ `ಪುಕ್ಕಟೆ ಸಲಹೆ’
  • ಫೆಬ್ರವರಿ 7ರಂದು ಪದ್ಮಭೂಷಣ ಡಾ. ಚಂದ್ರಶೇಖರ್ ಕಂಬಾರರ ಕಾದಂಬರಿ ಆಧಾರಿತ ಭಾಸ್ಕರ್ ನೀನಾಸಂ ರಂಗವಿನ್ಯಾಸ, ನಿರ್ದೇಶನದ `ಜೀಕೆ ಮಾಸ್ತರರ ಪ್ರಣಯ ಪ್ರಸಂಗ’

ಟಿಕೆಟ್ ದೊರೆಯುವ ಸ್ಥಳ

  1. ಕಟೀಲು ಅಶೋಕ ಪೈ ಸ್ಮಾರಕ ಕಾಲೇಜು ದುರ್ಗಿಗುಡಿ
  2. ರಾಯಲ್ ಕಾಫಿ, ನೆಹರೂ ರಸ್ತೆ
  3. ಶ್ರೀಲಕ್ಷ್ಮಿ ನಾರಾಯಣ ಸ್ವೀಟ್ಸ್ ಮತ್ತು ಬೇಕರಿ, ಪೊಲೀಸ್ ಚೌಕಿ
  4. ಡಿ.ಜೆ.ಫ್ಯಾನ್ಸಿ ವರ್ಲ್ಡ್, ದ್ರೌಪದಮ್ಮ ಸರ್ಕಲ್, ಗೋಪಾಳ

ಮಾಹಿತಿಗಾಗಿ ಸಂಪರ್ಕಿಸಿ | 9845014229, 9538020367, ಬುಕ್ ಮೈ ಶೋಗಾಗಿ | ಕ್ಲಿಕ್ ಮಾಡಿ

ಉದ್ಘಾಟನೆ | ನಗರದ ಸುವರ್ಣ ಸಾಂಸ್ಕೃತಿಕ ಭವನದಲ್ಲಿ ಫೆಬ್ರವರಿ 5ರಂದು ಸಂಜೆ 6.30 ಗಂಟೆಗೆ ನಾಟಕೋತ್ಸವವನ್ನು ರಂಗಾಯಣ ನಿರ್ದೇಶಕ ಸಂದೇಶ್ ಜವಳಿ ಉದ್ಘಾಟಿಸುವರು. ನಮ್ಮ ಹಳ್ಳಿ ಥಿಯೇಟರ್ ಅಧ್ಯಕ್ಷ ಪ್ರವೀಣ್ ಎಸ್.ಹಾಲ್ಮತ್ತೂರು ಅಧ್ಯಕ್ಷತೆ ವಹಿಸುವರು. ಫೆ.5ರಿಂದ 7ರ ವರೆಗೆ ನಾಟಕೋತ್ಸವ ನಡೆಯಲಿದೆ.
ಸಮಾರೋಪ | ಫೆಬ್ರವರಿ 7ರಂದು ಸಂಜೆ 6.30 ಗಂಟೆಗೆ ಸಮಾರೋಪ ಸಮಾರಂಭ ಜರುಗಲಿದೆ. ಪ್ರವೀಣ್ ಎಸ್.ಹಾಲ್ಮತ್ತೂರು ಅಧ್ಯಕ್ಷ ವಹಿಸುವರು. ಕನ್ನಡ ಮತ್ತು ಸಾಂಸ್ಕೃತಿಕ ಇಲಾಖೆ ಸಹಾಯಕ ನಿರ್ದೇಶಕ ಎಚ್.ಉಮೇಶ್ ಸಮಾರೋಪ ನುಡಿಗಳನ್ನಾಡುವರು.
ಮಾಧ್ಯಮಗೋಷ್ಠಿಯಲ್ಲಿ ವಿಕಸಂ ಬೆಂಗಳೂರು ತಂಡದ ಕಲಾವಿದ ಮದುಸೂಧನ್, ಮಂಜುನಾಥ್ ಸ್ವಾಮಿ ಉಪಸ್ಥಿತರಿದ್ದರು.

error: Content is protected !!