THIRTHAHALLI | ಬಂಕ್‍ನಲ್ಲೇ ಆಯ್ತು 8 ಸಾವಿರ ಲೀಟರ್ ಪೆಟ್ರೋಲ್ ಲೀಕ್!

 

 

ಸುದ್ದಿ ಕಣಜ.ಕಾಂ
ತೀರ್ಥಹಳ್ಳಿ: ಒಂದೆಡೆ ಪೆಟ್ರೋಲ್ ಪೆಟ್ರೋಲ್ ಬೆಲೆ ನಿರಂತರ ಏರಿಕೆ ಕಾಣುತ್ತಿದೆ. ಅದರ ಮಧ್ಯೆ ತೀರ್ಥಹಳ್ಳಿ ಪಟ್ಟಣದ ಪೆಟ್ರೋಲ್ ಬಂಕ್‍ನಲ್ಲಿ 8 ಸಾವಿರ ಲೀಟರ್ ಪೆಟ್ರೋಲ್ ಸೋರಿಕೆಯಾಗಿದೆ!

ಇದನ್ನೂ ಓದಿ| ವಿದ್ಯುತ್ ಬಿಲ್, ಪವರ್ ಕಟ್ ಇತ್ಯಾದಿ ಮಾಹಿತಿ ಬೇಕೆ, ಹಾಗಾದರೆ ಎಲ್ಲದಕ್ಕೂ ಉತ್ತರ ನೀಡಲಿದೆ ‘ನನ್ನ ಮೆಸ್ಕಾಂ’!

ಇಷ್ಟೊಂದು ದೊಡ್ಡ ಪ್ರಮಾಣದ ಪೆಟ್ರೋಲ್ ಸೋರಿಕೆಯಿಂದಾಗಿ ಅಂದಾಜು 8 ಲಕ್ಷ ರೂಪಾಯಿ ನಷ್ಟವಾಗಿದೆ. ಸ್ಥಳಕ್ಕೆ ಭೇಟಿ ನೀಡಿದ ತಜ್ಞರು ಸೋರಿಕೆಯ ಕಾರಣವನ್ನು ಪತ್ತೆ ಹಚ್ಚಿದ್ದಾರೆ.
ಪೆಟ್ರೋಲ್ ಫಿಲ್ ಮಾಡುವ ಯಂತ್ರದ ಬಳಿಯೇ ಲೀಕ್ ಆಗಿರುವುದು ತಿಳಿದುಬಂದಿದೆ. ಇದಕ್ಕೆ ಇತ್ತೀಚೆಗೆ ಸುರಿದ ಮಳೆಯೂ ಕಾರಣವಿರಬಹುದೆಂದು ಹೇಳಲಾಗಿದೆ.

error: Content is protected !!