ಭದ್ರಾವತಿ, ಶಿವಮೊಗ್ಗದಲ್ಲಿ ಮೊಬೈಲ್ ಕಳವು ಮಾಡಿ ಮಾರಾಟ ಮಾಡುತ್ತಿದ್ದವ ಅರೆಸ್ಟ್, ಎಷ್ಟು ಮೊಬೈಲ್ ಸಿಕ್ಕಿವೆ ಗೊತ್ತಾ?

 

 

ಸುದ್ದಿ ಕಣಜ.ಕಾಂ
ಶಿವಮೊಗ್ಗ: ಭದ್ರಾವತಿ, ಶಿವಮೊಗ್ಗದಲ್ಲಿ ಮೊಬೈಲ್ ಕಳ್ಳತನ ಮಾಡಿ ಮಾರಾಟ ಮಾಡಲು ಯತ್ನಿಸುತ್ತಿದ್ದ ವ್ಯಕ್ತಿಯೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ.

ಹೊಸಮನೆ ಬಡಾವಣೆಯ ನಿವಾಸಿ ವಿಶಾಲ್(18) ಎಂಬಾತನೇ ಬಂಧಿತ ಆರೋಪಿ. ಆತನಿಂದ ಬೇರೆ ಬೇರೆ ಕಂಪೆನಿಯ ಆರು ಮೊಬೈಲ್ ವಶಕ್ಕೆ ಪಡೆಯಲಾಗಿದೆ.
ಹಣದ ಅವಶ್ಯಕತೆ ಇದ್ದು, ಮೊಬೈಲ್ ಮಾರಾಟ ಮಾಡುತ್ತಿರುವುದಾಗಿ ಹೇಳಿದ್ದಾನೆ. ಈ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಲಾಗಿದ್ದು, ಸ್ಥಳಕ್ಕೆ ಧಾವಿಸಿ ವಿಶಾಲ್ ನನ್ನು ವಶಕ್ಕೆ ಪಡೆದಿದ್ದಾರೆ.
ವಿಚಾರಣೆ ನಡೆಸಿದಾಗ ಅವುಗಳು ಕಳ್ಳತನದ ಮೊಬೈಲ್ ಗಳೆಂಬ ವಿಚಾರ ಬೆಳಕಿಗೆ ಬಂದಿದೆ. ಇದರಲ್ಲಿ ಸ್ಯಾಮ್ ಸಂಗ್, ರೆಮಿ ಸೇರಿದಂತೆ ವಿವಿಧ ಕಂಪೆನಿಯ ಮೊಬೈಲ್ ಗಳಿವೆ.

error: Content is protected !!