
ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ.ಕೆ.ಮಿಥುನ್ ಕುಮಾರ್ ನೇತೃತ್ವದಲ್ಲಿ ಭದ್ರಾವತಿ (Bhadravathi) ತಾಲೂಕು ಹೊಳೆಹೊನ್ನೂರು ಪೊಲೀಸ್ ಠಾಣಾ (Holehonnuru Police station) ವ್ಯಾಪ್ತಿಯ ಯಡೇಹಳ್ಳಿ (Yadehalli) ಗ್ರಾಮದ ಅಶೋಕ್ ನಗರದಲ್ಲಿ ಜನ ಸಂಪರ್ಕ ಸಭೆಯನ್ನು ನಡೆಸಿದರು. ಈ ವೇಳೆ ಅಪರಾಧ ತಡೆಗೆ ಕೆಲವು ಕ್ರಮಗಳನ್ನು ಕೈಗೊಳ್ಳಬೇಕಿರುವ ಬಗ್ಗೆ ನಾಗರಿಕರಿಗೆ ತಿಳಿಸಿದರು.
READ | ತಮ್ಮ ಮನೆಯಲ್ಲೇ ಕಳ್ಳತನ ಮಾಡಿದ ಸೊಸೆ ಈಗ ಪೊಲೀಸರ ಅತಿಥಿ, ಕಳ್ಳತನ ಮಾಡಿದ್ದೆಷ್ಟು?
ಅಪರಾಧ ತಡೆಗೆ ಪಂಚ ಸೂತ್ರಗಳು
- ಪ್ರತಿ ಗ್ರಾಮಗಳಿಗೂ ಬೀಟ್ (Police Beat) ಸಿಬ್ಬಂದಿಯನ್ನು ನೇಮಕ ಮಾಡಲಾಗಿದ್ದು, ನಿರಂತರವಾಗಿ ತಮ್ಮ ಗ್ರಾಮಕ್ಕೆ ಭೇಟಿ ನೀಡಲಿದ್ದು, ಯಾವಾಗಲೂ ನಿಮ್ಮ ಸಂಪರ್ಕದಲ್ಲಿತ್ತಾರೆ. ಅದೇ ರೀತಿ ನೀವುಗಳೂ ಸಹ ನಿಮ್ಮ ಗ್ರಾಮದ ಬೀಟ್ ಸಿಬ್ಬಂಧಿಯವರೊಂದಿಗೆ ಸಂಪರ್ಕದಲ್ಲಿರುವುದು.
- ಗ್ರಾಮದಲ್ಲಿ ಯಾವುದಾದರೂ ಅಕ್ರಮ ಚಟುವಟಿಕೆಗಳು ಕಂಡಲ್ಲಿ ಕೂಡಲೇ ಬೀಟ್ ಸಿಬ್ಬಂದಿ, ಪಿಎಸ್ಐ, ಠಾಣಾಧಿಕಾರಿಯವರಿಗೆ ಮಾಹಿತಿ ನೀಡುವುದು.
- ಗ್ರಾಮದಲ್ಲಿರುವ ಯುವಕರನ್ನು ಗುರುತಿಸಿ, 20 ರಿಂದ 30 ಜನ ಯುವಕರ ಪಡೆಯನ್ನು ರಚಿಸಿ, ಬೀಟ್ ಸಿಬ್ಬಂದಿಯವರೊಂದಿಗೆ ಗಸ್ತು ಮಾಡುವುದು. ಯಾವುದೇ ಅಕ್ರಮ ಚಟುವಟಿಗಳು ಕಂಡುಬಂದಲ್ಲಿ ಯಾವುದೇ ಮಾಹಿತಿಗಳಿದ್ದಲ್ಲಿ ಕೂಡಲೇ ಪೊಲೀಸ್ ಠಾಣೆಗೆ ಮಾಹಿತಿ ನೀಡಿ ಉತ್ತಮ ಸಮಾಜ ನಿರ್ಮಾಣಕ್ಕಾಗಿ ಪೊಲೀಸ್ ಇಲಾಖೆಯೊಂದಿಗೆ ಕೈ ಜೋಡಿಸುವುದು.
- ಯಾವುದೇ ಸಮಾಜ ಘಾತುಕ, ಅಕ್ರಮ ಚಟುವಟಿಕೆಯಲ್ಲಿ ತೊಡಗುವವರ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕಾನೂನು ರೀತ್ಯಾ ಕಠಿಣ ಕ್ರಮ ಜರುಗಿಸಲಾಗುವುದು.
- ಯಾವುದೇ ತುರ್ತು ಸಂದರ್ಭದಲ್ಲಿ ERSS 112 ಸಹಾಯವಾಣಿಗೆ ಕರೆಮಾಡಿ ಪೊಲೀಸ್ ಸಹಾಯ ಪಡೆದುಕೊಳ್ಳುವುದು.
ಹೊಳೆಹೊನ್ನೂರು ಪೊಲೀಸ್ ಠಾಣೆ ಪೊಲೀಸ್ ನಿರೀಕ್ಷಕ ಲಕ್ಷ್ಮೀಪತಿ, ಯಡೇಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷರು, ಉಪಾಧ್ಯಕ್ಷರು, ಎಸ್.ಡಿ.ಎಂ.ಸಿ ಸಮಿತಿ ಅಧ್ಯಕ್ಷರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.
Good News | ಶಿವಮೊಗ್ಗ-ಬೆಂಗಳೂರು ಮಾರ್ಗದಲ್ಲಿ 5 ಇ-ಬಸ್‍ಗಳ ಸಂಚಾರ ಪ್ರಾರಂಭ, ಎಷ್ಟಿದೆ ರೇಟ್?