ಕಿಡಿಗೇಡಿಗಳ ಕೃತ್ಯಕ್ಕೆ ಬೈಕ್ ಸುಟ್ಟು ಭಸ್ಮ, ಎಲ್ಲಿ ನಡೀತು ಘಟನೆ ಗೊತ್ತಾ?

 

 

ಸುದ್ದಿ ಕಣಜ.ಕಾಂ
ಶಿವಮೊಗ್ಗ: ಮನೆಯ ಮುಂದೆ ನಿಲ್ಲಿಸಿದ ಬೈಕಿಗೆ ಬೆಂಕಿಯಿಟ್ಟು ಸುಟ್ಟಿರುವ ಘಟನೆ ದೇವಕಾತಿಕೊಪ್ಪದಲ್ಲಿ ಬುಧವಾರ ತಡ ರಾತ್ರಿ ನಡೆದಿದೆ.

ಇದನ್ನೂ ಓದಿ | ಕೆಜಿಎಫ್ ಚಾಪ್ಟರ್ 2, ಯುವರತ್ನ ಉಚಿತವಾಗಿ ನೋಡುವ ಸುವರ್ಣಾವಕಾಶ

ದೇವಕಾತಿಕೊಪ್ಪ ನಿವಾಸಿ ಚಂದ್ರು ಎಂಬಾತನ ಬೈಕಿಗೆ ಕಿಡಿಗೇಡಿಗಳು ತೆಂಗಿನ ಗರಿಗಳ ಸಹಾಯದಿಂದ ಬೆಂಕಿ ಹಚ್ಚಿದ್ದಾರೆ. ಪರಿಣಾಮ ವಾಹನ ಸುಟ್ಟು ಕರಕಲಾಗಿದೆ.
ಬೈಕಿಗೆ ಹಚ್ಚಿದ ಬೆಂಕಿ ಮನೆಗೂ ಆವರಿಸಿದೆ. ತಕ್ಷಣ ಎಚ್ಚರಗೊಂಡು ಬೆಂಕಿಯನ್ನು ನಂದಿಸಿದ್ದಾರೆ. ಹೀಗಾಗಿ, ಸಂಭವಿಸಬಹುದಾಗಿದ್ದ ಭಾರಿ ದೊಡ್ಡ ಅನಾಹುತ ತಪ್ಪಿದೆ. ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.

 

error: Content is protected !!