ಶಿವಮೊಗ್ಗದಲ್ಲಿ ಮತ್ತೆ ಶುರುವಾಯ್ತು ಸರಗಳ್ಳತನ, ಎಲ್ಲಿ ನಡೀತು ಘಟನೆ?

 

 

ಸುದ್ದಿ ಕಣಜ.ಕಾಂ

ಶಿವಮೊಗ್ಗ: ಕೆಲವು ದಿನಗಳಿಂದ ತಣ್ಣಗಿದ್ದ ಸರಗಳ್ಳತನ ಮತ್ತೆ ಆರಂಭವಾಗಿದೆ. ಸೋಮವಾರ ಸಂಜೆ 7.15ರ ಸುಮಾರಿಗೆ ತುಂಗಾನಗರ ಪೊಲೀಸ್ ಠಾಣೆ ವ್ಯಾಪ್ತಿಯ ತಿಲಕ ನಗರದಲ್ಲಿ ಮಹಿಳೆಯೊಬ್ಬರ ಚಿನ್ನದ ಸರ ಕಳ್ಳತನ ಮಾಡಲಾಗಿದೆ.

ಇದನ್ನೂ ಓದಿ | ಮಲೆನಾಡ ಪ್ರವಾಸೋದ್ಯಮಕ್ಕೆ ಡಿಜಿಟಲ್ ಟಚ್!

ತಿಲಕ್‌ ನಗರ ನಾಲ್ಕನೇ ಕ್ರಾಸ್‌ ನಿವಾಸಿ ಸುವರ್ಣಮ್ಮ (65) ಎಂಬುವವರ ಸರ ದೋಚಲಾಗಿದೆ. 30-35 ಗ್ರಾಂ. ಸರ ದೋಚಿ ದುಷ್ಕರ್ಮಿಗಳು ಪರಾರಿಯಾಗಿದ್ದಾರೆ.
ಹೇಗೆ ನಡೀತು ಘಟನೆ?
ತಿಲಕ ನಗರದಲ್ಲಿ ಸುವರ್ಣಮ್ಮ ಅವರು ಮೊಮ್ಮಗನನ್ನು ಆಡಿಸುವಾಗ ಬೈಕ್‌ ವೊಂದರಲ್ಲಿ ಬಂದು ಸರಗಳ್ಳತನ ಮಾಡಲಾಗಿದೆ‌. ಸರಗಳ್ಳರು ಹೆಲ್ಮೆಟ್‌ ಧರಿಸಿದ್ದರಿಂದ ಅವರ ಗುರುತು ಪತ್ತೆಯಾಗಿಲ್ಲ. ಹಾಗೂ ಕತ್ತಲು ಇದ್ದುದ್ದರಿಂದ ಯಾವ ಬೈಕ್ ನಲ್ಲಿ ಬಂದಿದ್ದರು ಎಂಬುವುದು ಗೊತ್ತಾಗಿಲ್ಲ.

error: Content is protected !!