ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಟೆಂಪಲ್ ರನ್, ಯಾವ ದೇವಸ್ಥಾನಗಳಿಗೆಲ್ಲ ಭೇಟಿ ನೀಡಿದರು?

 

 

ಸುದ್ದಿ ಕಣಜ.ಕಾಂ
ಶಿವಮೊಗ್ಗ: ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ನಮ್ಮೊಲುಮೆಯ ಅಭಿಮಾನದ ಅಭಿನಂದನಾ ಸಮಾರಂಭದಲ್ಲಿ ಭಾನುವಾರ ಭಾಗವಹಿಸಿದರು. ಸೋಮವಾರ ಬೆಳಗ್ಗೆಯಿಂದಲೇ ಅತ್ಯಂತ ಚಟುವಟಿಕೆಯಿಂದ ಹಲವೆಡೆ ಓಡಾಡಿದ್ದಾರೆ. ಅದರಲ್ಲೂ ನಾನಾ ದೇವಸ್ಥಾನಗಳಿಗೆ ಭೇಟಿ ನೀಡಿದ್ದು ವಿಶೇಷವಾಗಿತ್ತು.
Meenaksh BSY bhavana march 1ಎಲ್ಲೆಲ್ಲಿ ಭೇಟಿ?
ಗೌಡಸಾರಸ್ವತ ಸಮಾಜದ ಲಕ್ಷ್ಮಿ ವೆಂಕಟರಮಣ ಮಂದಿರಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದರು. ಈ ವೇಳೆ, ಜಿ.ಎಸ್.ಬಿ. ಸಮಾಜದ ಮುಖಂಡರು ಯಡಿಯೂರಪ್ಪ ಅವರಿಗೆ ಜನ್ಮದಿನದ ಶುಭಾಷಯಗಳನ್ನು ಕೋರಿದರು. ಬ್ರಾಹ್ಮಣ ಸಮಾಜಕ್ಕೆ ಶೇ.10ರಷ್ಟು ಮೀಸಲಾತಿ ನೀಡಲಾಗಿದೆ. ಆದರೆ, ಕೆಲ ತಾಂತ್ರಿಕ ಅಂಶಗಳಿಂದಾಗಿ ಜಿ.ಎಸ್.ಬಿ. ಸಮಾಜ ಸೇರ್ಪಡೆಯಾಗಿಲ್ಲ. ಬರುವ ದಿನಗಳಲ್ಲಿ ಇದರೆಡೆಗೆ ಗಮನಹರಿಸಿ, ಮೀಸಲಾತಿ ನೀಡಬೇಕೆಂದು ಮನವಿ ಮಾಡಲಾಯಿತು.
ಸಮಾಜದ ಪ್ರಮುಖರಾದ ಬಿ.ಎಸ್.ಕಾಮತ್, ಮನೋಹರ ಕಾಮತ್, ರಾಜೇಶ್ ಕಾಮತ್ ಉಪಸ್ಥಿತರಿದ್ದರು.
ನಂತರ, ಕೋಟೆ ಸೀತಾರಾಮಾಂಜನೇಯ ದೇವಸ್ಥಾನಕ್ಕೆ ಸಿಎಂ ಭೇಟಿ ನೀಡಿ ದೇವರ ದರ್ಶನ ಪಡೆದರು. ಅಲ್ಲಿಂದ ಕೋಟೆ ಮಾರಿಕಾಂಬ ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು.
ದೇವಸ್ಥಾನಗಳೀಗೆ ಭೇಟಿ ನೀಡಿದ ನಂತರ ಮುಖ್ಯಮಂತ್ರಿಗಳು ನಗರದ ಬಿ.ಎಚ್.ರಸ್ತೆಯಲ್ಲಿರುವ ಮೀನಾಕ್ಷಿ ಭವನದಲ್ಲಿ ಉಪಹಾರ ಸೇವಿಸಿದರು.

error: Content is protected !!