ಯುಜಿಡಿ ಕನೆಕ್ಷನ್ ಪಡೆಯದಿದ್ದರೆ ದಂಡ, ಕರೆಂಟ್ ಕಟ್!

 

 

ಸುದ್ದಿ ಕಣಜ.ಕಾಂ
ಶಿವಮೊಗ್ಗ: ಒಳಚರಂಡಿ ಜೋಡಣೆ ಸಂಪರ್ಕಕ್ಕೆ ಪರವಾನಗಿ ಪಡೆಯದೆ ಅಕ್ರಮವಾಗಿ ತಮ್ಮ ಗೃಹ, ವಾಣಿಜ್ಯ ಕಟ್ಟಡಗಳಿಗೆ ಸಂಪರ್ಕ ಕಲ್ಪಿಸಿಕೊಂಡಿದ್ದಲ್ಲಿ ತಕ್ಷಣವೇ ಸಕ್ರಮಗೊಳಿಸಿಕೊಳ್ಳತಕ್ಕದ್ದು. ಇಲ್ಲದಿದ್ದರೆ ದಂಡ ಬೀಳುವುದರೊಂದಿಗೆ ಮನೆಗೆ ಕಲ್ಪಿಸಿರುವ ನೀರು ಮತ್ತು ವಿದ್ಯುತ್ ಸಂಪರ್ಕ ಕಡಿತಗೊಳಿಸುವುದಾಗಿ ಮಹಾನಗರ ಪಾಲಿಕೆ ಆಯುಕ್ತ ಚಿದಾನಂದ್ ಎಸ್.ವಟಾರೆ ಖಡಕ್ ವಾರ್ನಿಂಗ್ ನೀಡಿದ್ದಾರೆ.

ಇದನ್ನೂ ಓದಿ | ಈ 18 ಸೇವೆ ಪಡೆಯಲು ಇನ್ಮುಂದೆ ಆರ್.ಟಿ.ಒ ಕಚೇರಿಗೆ ಹೋಗಬೇಕಾಗಿಲ್ಲ, ಯಾವ್ಯಾವ ಸೇವೆ ಲಭ್ಯ?

ಮಾರ್ಚ್ 15ರೊಳಗೆ ಒಳಚರಂಡಿ ಸಂಪರ್ಕ ಪಡೆದುಕೊಳ್ಳುವಂತೆ ಸೂಚನೆ ನೀಡಲಾಗಿದೆ. ಒಂದುವೇಳೆ, ಡೆಡ್ ಲೈನ್ ಒಳಗೆ ಸಂಪರ್ಕ ಪಡೆಯದಿದ್ದರೆ ರಸ್ತೆ ಅಭಿವೃದ್ದಿಪಡಿಸಿದ ಬಳಿಕ ಒಳಚರಂಡಿ ಪರವಾನಗಿ ನೀಡಲಾಗುವುದಿಲ್ಲ.

ಮನೆಗೆ ಬರಲಿದ್ದಾರೆ ಪರಿವೀಕ್ಷಕರು | ಯುಜಿಡಿ ಪರಿವೀಕ್ಷಣೆಗೆ ಪರಿವೀಕ್ಷಕರು ಬರಲಿದ್ದಾರೆ. ಆ ವೇಳೆ, ಅಕ್ರಮವೆಂದು ತಿಳಿದುಬಂದಲ್ಲಿ ನಿಯಮಾನುಸಾರ ದಂಡ ವಿಧಿಸಲಾಗುವುದು. ನಿಗದಿಪಡಿಸಿದ ಕಾಲಮಿತಿಯಲ್ಲಿ ಸಂಪರ್ಕವನ್ನು ಪಡೆಯದಿದ್ದಲ್ಲಿ ಮನೆಯ ನೀರು ಸರಬರಾಜು ಹಾಗೂ ವಿದ್ಯುತ್ ಸಂಪರ್ಕವನ್ನು ಕಡಿತಗೊಳಿಸಲು ಎಂದು ಎಚ್ಚರಿಸಿದ್ದಾರೆ.

error: Content is protected !!