ಯಡಿಯೂರಪ್ಪ ವಿರುದ್ಧ ಈಶ್ವರಪ್ಪ ಹೈಕಮಾಂಡ್ ಗೆ ಲೆಟರ್, ಮಾಡಿದ 6 ಗಂಭೀರ ಆರೋಪಗಳೇನು ಗೊತ್ತಾ?

 

 

ಸುದ್ದಿ ಕಣಜ.ಕಾಂ
ಬೆಂಗಳೂರು: ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆ.ಎಸ್.ಈಶ್ವರಪ್ಪ ಹಾಗೂ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ನಡುವಿನ ಶೀತಲ ಸಮರ ಮತ್ತೊಮ್ಮೆ ಸ್ಫೋಟಗೊಂಡಿದೆ.

READ | ಕೂಪನ್ ಹಾಕಿ, ‘ಯುವರತ್ನ’ ಚಿತ್ರ ಉಚಿತವಾಗಿ ನೋಡಿ!

ಕೆ.ಎಸ್.ಈಶ್ವರಪ್ಪ ಅವರು ಬಿಜೆಪಿ ವರಿಷ್ಠ ಅರುಣ್ ಸಿಂಗ್ ಅವರಿಗೆ ಮುಖ್ಯಮಂತ್ರಿ ವಿರುದ್ಧ ಎರಡು ಪುಟಗಳ ದೂರು ಪ್ರತಿಯನ್ನು ಸಲ್ಲಿಸಿದ್ದಾರೆ. ಯಡಿಯೂರಪ್ಪ ಅವರು ನನ್ನ ಇಲಾಖೆಯಲ್ಲಿ ಅನಗತ್ಯ ಹಸ್ತಕ್ಷೇಪ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ಆರೋಪಗಳೇನು?
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‍ರಾಜ್ ಇಲಾಖೆಗೆ ಸಂಬಂಧಿಸಿದ ನಿರ್ಧಾರಗಳನ್ನು ತನ್ನ ಗಮನಕ್ಕೆ ತರದೇ ಕೈಗೊಂಡಿದ್ದಾರೆ. ಇದರಿಂದ ಹಿರಿಯ ಸದಸ್ಯನಾದ ನನಗೆ ತುಂಬ ನೋವಾಗಿದೆ. ಸಂಪುಟದಲ್ಲಿನಾನು ನೀಡಿದ ಹಲವು ಅಭಿಪ್ರಾಯಗಳನ್ನು ನಿರ್ಲಕ್ಷಿಸಲಾಗಿದೆ.
ಆರೋಪ ನಂಬರ್ 1
2020-21ರ ಬಜೆಟಿನ ಪ್ಯಾರಾ 147ರಲ್ಲಿ ‘ಗ್ರಾಮೀಣ ಸುಮಾರ್ಗ ಯೋಜನೆ’ಯನ್ನು ಪ್ರಕಟಿಸಲಾಗಿತ್ತು. ಐದು ವರ್ಷದ ಅವಧಿಯಲ್ಲಿ 20 ಸಾವಿರ ಕಿ.ಮೀ. ಗ್ರಾಮೀಣ ಪ್ರದೇಶ ರಸ್ತೆಗಳ ಅಭಿವೃದ್ಧಿಗೆ 780 ಕೋಟಿ ರೂ. ನಿಗದಿಪಡಿಸಲಾಗಿತ್ತು.

READ | 21 ಲಕ್ಷ ರೂ.ಗೆ ಹರಾಜಾದ ಗುರು ತಿಪ್ಪೇರುದ್ರಸ್ವಾಮಿ ಬ್ರಹ್ಮ ರಥೋತ್ಸವ ಮುಕ್ತಿ ಬಾವುಟ

ಇದರನ್ವಯ ಪ್ರತಿ ವಿಧಾನಸಭೆ ಕ್ಷೇತ್ರದ ವ್ಯಾಪ್ತಿಯಲ್ಲಿ 30 ಕಿ.ಮೀ. ಗ್ರಾಮೀಣ ರಸ್ತೆಗಳನ್ನು ಪಿಎಂಜಿಎಸ್‍ವೈ ಮಾನದಂಡದನ್ವಯ ಅಭಿವೃದ್ಧಿ ಪಡಿಸಬೇಕೆಂಬ ಉದ್ದೇಶ ಹೊಂದಲಾಗಿತ್ತು. ಈ ಯೋಜನೆ ಅನುಷ್ಠಾನಕ್ಕಾಗಿ ಇಲಾಖೆಯಿಂದ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿತ್ತು. ಆದರೆ, ಅಗತ್ಯವಿರುವ ಅನುದಾನವನ್ನು ನೀಡಿಲ್ಲಎಂದು ಆರೋಪಿಸಿದ್ದಾರೆ. ಈ ಸಂಬಂಧ ಪದೇ ಪದೆ ಪತ್ರಗಳನ್ನು ಬರೆದರೂ ಪ್ರಯೋಜನವಾಗಿಲ್ಲ. ಪ್ರತಿಕ್ರಿಯೆಯೂ ಸಿಕ್ಕಿಲ್ಲ. ಕಾರಣ ಗೊತ್ತಿಲ್ಲ.
ಆರೋಪ ನಂಬರ್ 2
2020-21ನೇ ಸಾಲಿನ ಬಜೆಟ್‍ನಲ್ಲಿ ಘೋಷಿಸಿದ ಯೋಜನೆಗಳ ಅನುಷ್ಠಾನಕ್ಕೆ ಹಣಕಾಸು ಇಲಾಖೆಯಿಂದ ಅನುದಾನ ಬಿಡುಗಡೆ ಮಾಡಿಲ್ಲ. ಬಜೆಟ್ ಹೊರತಾದ ವಿಚಾರಗಳಿಗೆ ಕಳೆದ ಒಂದೂವರೆ ವರ್ಷದಲ್ಲಿಈ ಹಿಂದಿನ ಸರಕಾರ ಬಿಡುಗಡೆ ಮಾಡಿದ್ದ 973.80 ಕೋಟಿ ರೂ. ಹೊರತುಪಡಿಸಿ 1439.25 ಕೋಟಿ ರೂ. ವಿಶೇಷ ಅನುದಾನ ನೀಡಲಾಗಿದೆ. 2021ರ ಫೆಬ್ರವರಿ 17ರಂದು ಹಣಕಾಸು ಇಲಾಖೆಯು 81 ವಿಧಾನಸಭೆ ಕ್ಷೇತ್ರಗಳಿಗೆ 775 ಕೋಟಿ ರೂ. ಮಂಜೂರು ಮಾಡಿದೆ. ಪ್ರತಿ ವಿಧಾನಸಭೆ ಕ್ಷೇತ್ರಕ್ಕೆ 5 ರಿಂದ 23 ಕೋಟಿ ರೂಪಾಯಿವರೆಗೆ ಅನುದಾನ ನೀಡಲಾಗಿದೆ. ಇಷ್ಟೊಂದು ದೊಡ್ಡ ಮೊತ್ತವನ್ನು ಹಣಕಾಸು ಇಲಾಖೆಯು ಬೇಕಾಬಿಟ್ಟು ಖರ್ಚು ಮಾಡುವುದರಿಂದ ಭವಿಷ್ಯದಲ್ಲಿ ಮೂಲಸೌಕರ್ಯ ಅಭಿವೃದ್ಧಿ ಯೋಜನೆಯ ಮೇಲೆ ದೀರ್ಘಾವಧಿ ಪರಿಣಾಮ ಬೀರುವ ಸಾಧ್ಯತೆ ಇದೆ.

READ | ಒಂದೇ ದಿನ ಏಳು ವಿದ್ಯಾರ್ಥಿಗಳಿಗೆ ಕೊರೊನಾ ಪಾಸಿಟಿವ್, ತಾಲೂಕುವಾರು ಮಾಹಿತಿ

ಆರೋಪ ನಂಬರ್ 3

ವಿಶೇಷ ಅನುದಾನ ಯೋಜನೆ ಅಡಿ 5 ಲಕ್ಷ ರೂ. ಒಳಗೆ ರಸ್ತೆ ನಿರ್ಮಾಣ ಕಾಮಗಾರಿ ಕೈಗೊಳ್ಳುವಂತೆ ಸೂಚಿಸಲಾಗಿದೆ. ಇದರಿಂದ ಗುಣಮಟ್ಟದ ರಸ್ತೆಗಳಾಗದೇ ಭ್ರಷ್ಟಾಚಾರದ ಆರೋಪಕ್ಕೆ ಎಡೆ ಮಾಡಿಕೊಡುವ ಸಾಧ್ಯತೆ ಇದೆ. ಗುಣಮಟ್ಟದ ರಸ್ತೆಗಳನ್ನು ನಿರ್ಮಿಸಿ ಹೆಚ್ಚು ದಿನ ಬಾಳಿಕೆಗೆ ಬರುವ ರಸ್ತೆ ನಿರ್ಮಿಸಬೇಕೆಂಬುವುದನ್ನು ನನ್ನ ಆಶಯವಾಗಿದೆ.
ಆರೋಪ ನಂಬರ್ 4
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‍ರಾಜ್ ಇಲಾಖೆಗೆ ಅನುದಾನ ನೀಡಬೇಕೆಂಬ ಬಯಕೆ ಹಣಕಾಸು ಇಲಾಖೆಗೆ ಇದ್ದರೆ ವಿಶೇಷ ಅನುದಾನ ಯೋಜನೆ ಅಡಿ ನೀಡದೇ ನೇರವಾಗಿ ಇಲಾಖೆಗೆ ಮಂಜೂರು ಮಾಡಬಹುದು. ಇದರಿಂದ, ಗುಣಮಟ್ಟದ ಕೆಲಸಗಳಾಗುತ್ತವೆ. ಜತೆಗೆ, ಹೆಚ್ಚು ಬಾಳಿಕೆಗೆ ಬರಬಹುದಾದ ಸ್ವತ್ತನ್ನು ಗ್ರಾಮೀಣ ಪ್ರದೇಶದಲ್ಲಿಸೃಷ್ಟಿಸಿದಂತಾಗಲಿದೆ.
ಆರೋಪ ನಂಬರ್ 5
ಹಣಕಾಸು ಇಲಾಖೆಯು 2021ರ ಫೆಬ್ರವರಿ 17ರಂದು ಆದೇಶ ಹೊರಡಿಸಿದೆ. ಅದರಲ್ಲಿ ಬಿಜೆಪಿ ಸೇರಿದಂತೆ ಇನ್ನಿತರ ಶಾಸಕರಿಗೂ ಅನುದಾನ ನೀಡಲಾಗಿದೆ. ಬಿಜೆಪಿಯ 32, ಜೆಡಿಎಸ್ 18, ಕಾಂಗ್ರೆಸ್ಸಿನ 30, ಬಿಎಸ್ಪಿಯ 1 ಸೇರಿ 81 ಎಂ.ಎಲ್.ಎಗಳಿಗೆ ಅನುದಾನ ಮಂಜೂರು ಮಾಡಲಾಗಿದೆ.
ಆರೋಪ ನಂಬರ್ 6
ಗ್ರಾಮೀಣಾಭಿವೃದ್ಧಿ ಇಲಾಖೆಗೆ ಇಲ್ಲಿಯ ತನಕ 3,998.56 ಕೋಟಿ ರೂಪಾಯಿ ಅನುಮೋದನೆ ನೀಡಿದ್ದು, ಅದರಲ್ಲಿ ಬರೀ 1,600.45 ಕೋಟಿ ರೂಪಾಯಿ ಮಂಜೂರಾಗಿ ಆಗಿದೆ. ಯೋಜನೆಗಳನ್ನು ಕಡೆಗಣಿಸಲಾಗಿದೆ.

https://www.suddikanaja.com/2021/02/08/state-level-sports-meet-in-uttara-karnataka-said-cs-shadakshari/

error: Content is protected !!