ಸುದ್ದಿ ಕಣಜ.ಕಾಂ
ಶಿಕಾರಿಪುರ: ತಾಲೂಕಿನ ಮದಗಹಾರನಹಳ್ಳಿ ಗ್ರಾಮಸ್ಥರ ನಿದ್ದೆಗೆಡಿಸಿದ್ದ 5 ವರ್ಷದ ಗಂಡು ಚಿರತೆಯನ್ನು ಅರಣ್ಯ ಇಲಾಖೆ ಹಿಡಿಯಲು ಯಶಸ್ವಿಯಾಗಿದೆ.
ಇದನ್ನೂ ಓದಿ | ಇನ್ಮುಂದೆ ವರ್ಷದ 365 ದಿನ ಹಾಲಿ ಡೇ ಆಫರ್, ಎಲ್ಲಿ ಗೊತ್ತಾ?
ಕಳೆದ ಒಂದು ತಿಂಗಳಿಂದ ಗ್ರಾಮದ ಅಕ್ಕಪಕ್ಕ ಕಾಣಿಸಿಕೊಳ್ಳುತ್ತಿದ್ದ ಈ ಚಿರತೆಯಿಂದಾಗಿ ಜನ ಓಡಾಡುವುದಕ್ಕೂ ಭಯಪಡುತ್ತಿದ್ದರು. ಅರಣ್ಯ ಇಲಾಖೆಗೆ ಈ ಕುರಿತು ದೂರು ನೀಡಿದ್ದರಿಂದ ಕಾರ್ಯಾಚರಣೆ ನಡೆಸಿ ಹಿಡಿಯಲಾಗಿದೆ.
ಇದನ್ನೂ ಓದಿ | ಮೂವರು ವಿದ್ಯಾರ್ಥಿಗಳ ಮೇಲೆ ಹೆಜ್ಜೇನು ದಾಳಿ, ಹೇಗೆ ನಡೆಯಿತು ಘಟನೆ?