
ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai) ಅವರು ಮಾ.17 ರಂದು ಶಿವಮೊಗ್ಗ ಜಿಲ್ಲೆಯ ಪ್ರವಾಸ ಕೈಗೊಳ್ಳಲಿದ್ದಾರೆ.
READ | ಹಂದಿ ಅಣ್ಣಿ ಮರ್ಡರ್ ಕೇಸ್, ಜಾಮೀನು ಮೇಲೆ ಹೊರಬಂದವರ ಮೇಲೆ ಅಟ್ಯಾಕ್
ಯಾವ್ಯಾವ ಕಾರ್ಯಕ್ರಮಗಳಲ್ಲಿ ಭಾಗಿ?
ಅಂದು ಬೆಳಗ್ಗೆ 11.20 ಕ್ಕೆ ಶಿಕಾರಿಪುರ ಹೆಲಿಪ್ಯಾಡ್ ತಲುಪುವರು ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಆಸ್ಪತ್ರೆಯ ಉದ್ಘಾಟನೆ ಹಾಗೂ ನೂತನ ಸರ್ಕಾರಿ ಬಸ್ ನಿಲ್ದಾಣದ ಉದ್ಘಾಟನೆ ಮಾಡುವರು. ಮಧ್ಯಾಹ್ನ 12 ಕ್ಕೆ ಶಿಕಾರಿಪುರ(shikaripura)ದ ಸರ್ಕಾರಿ ಡಿಪೋ ಉದ್ಘಾಟಿಸುವರು. 12.30ಕ್ಕೆ ರಸ್ತೆಯ ಮೂಲಕ ಉಡುತಡಿ(udutadi) – ಉಡುಗಣಿ(udugani)ಗೆ ತೆರಳಿ ಶಿವಶರಣೆ ಅಕ್ಕಮಹಾದೇವಿ (akkamahadevi) ಪುತ್ಥಳಿ ಅನಾವರಣ ಮಾಡುವರು ಹಾಗೂ ಅಕ್ಷರಧಾಮ (aksharadhama) ಮಾದರಿಯ ಯಾತ್ರಾ ಸ್ಥಳವನ್ನು ಉದ್ಘಾಟಿಸುವರು ಹಾಗೂ ವಿವಿಧ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ/ಶಂಕುಸ್ಥಾಪನೆ ಮಾಡುವರು.
ಮಧ್ಯಾಹ್ನ 2.15 ಕ್ಕೆ ಶಿಕಾರಿಪುರ ಹೆಲಿಪ್ಯಾಡ್ನಿಂದ ಹೆಲಿಕಾಪ್ಟರ್ ಮೂಲಕ ಹೊರಟು ದಾವಣಗೆರೆ ಜಿಲ್ಲೆಯ ಹೊನ್ನಾಳಿ ತಾಲೂಕು, ಎಚ್. ಕಡದಕಟ್ಟೆಗೆ ತಲುಪುವರು ಎಂದು ಮುಖ್ಯಮಂತ್ರಿ ವಿಶೇಷ ಕರ್ತವ್ಯಾಧಿಕಾರಿ ತಿಳಿಸಿದ್ದಾರೆ.
ಶಿವಮೊಗ್ಗದಲ್ಲಿ ಕ್ರೈಂ ತಡೆಗೆ ಪೊಲೀಸ್ ಮಾಸ್ಟರ್ ಪ್ಲ್ಯಾನ್ ಸಿದ್ಧ, ಇಲ್ಲಿವೆ ಟಾಪ್ 11 ಅಂಶ