ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ನಗರದ ಅನುಪಿನಕಟ್ಟೆ ರಸ್ತೆ(Anupinakatte Raod)ಯ ತುಂಗಾ ಚಾನಲ್ (Tunga channal) ಹತ್ತಿರ ಗಾಂಜಾ ಮಾರಾಟ (Cannabis Sale) ಮಾಡುತ್ತಿದ್ದರೆನ್ನಲಾದ ಇಬ್ಬರು ಆರೋಪಿಗಳನ್ನು ಬಂಧಿಸಿ, ಅಂದಾಜು 35,000 ರೂ. ಮೌಲ್ಯದ 1 ಕೆಜಿ 282 ಗ್ರಾಂ ತೂಕದ ಒಣ ಗಾಂಜಾ, 1,500 ರೂ. ನಗದು ಹಣವನ್ನು ವಶಕ್ಕೆ ಪಡೆಯಲಾಗಿದೆ.
ಸಾಗರ ಪಟ್ಟಣದ ರಾಮನಗರ ನಿವಾಸಿ ಅಲ್ತಾಫ್ ಅಲಿಯಾಸ್ ಮಚ್ಚಿ(36), ಆಯನೂರು ಗ್ರಾಮದ ಸಯ್ಯದ್ ಯಾಸೀನ್ ಅಲಿಯಾಸ್ ಯಾಸೀನ್(25) ಎಂಬುವರರನ್ನು ಬಂಧಿಸಲಾಗಿದೆ.
READ | ಅನ್ನ ಭಾಗ್ಯ ಯೋಜನೆ ಅಡಿ ಅಕ್ಕಿ ಅಲ್ಲ ಹಣ ಸಿಗಲಿದೆ, ಸಂಪುಟದಲ್ಲಿ ಮಹತ್ವದ ನಿರ್ಧಾರ, ಯಾರಿಗೆಷ್ಟು ಹಣ?
ಖಚಿತ ಮಾಹಿತಿ ಮೇರೆಗೆ ದಾಳಿ
ಕಾರು ನಿಲ್ಲಿಸಿಕೊಂಡು ಅಕ್ರಮವಾಗಿ ಗಾಂಜಾವನ್ನು ಸಾರ್ವಜನಿಕರಿಗೆ ಮಾರಾಟ ಮಾಡುತ್ತಿರುವ ಬಗ್ಗೆ ಖಚಿತ ಮಾಹಿತಿ ಬಂದ ಮೇರೆಗೆ ಜಿಲ್ಲಾ ಪೊಲೀಸ್ ಅಧೀಕ್ಷಕ ಜಿ.ಕೆ.ಮಿಥುನ್ ಕುಮಾರ್, ಹೆಚ್ಚುವರಿ ಪೆÇಲೀಸ್ ಅಧೀಕ್ಷಕ ಅನಿಲ್ ಕುಮಾರ್ ಭೂಮರಡ್ಡಿ ಮಾರ್ಗದರ್ಶನದಲ್ಲಿ ಡಿಸಿಆರ್.ಬಿ ವಿಭಾಗದ ಪೆÇಲೀಸ್ ಉಪಾಧೀಕ್ಷಕ ಡಿ.ಟಿ.ಪ್ರಭು, ಮೇಲ್ವಿಚಾರಣೆಯಲ್ಲಿ ಸಿಇಎನ್ ಪೊಲೀಸ್ ಠಾಣೆ ಸಿಪಿಐ ಎಂ.ಎಸ್.ದೀಪಕ್, ಪಿಎಸ್.ಐ ಮಂಜುನಾಥ್ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿದ್ದಾರೆ.