ಕೆ.ಎಸ್.ಆರ್.ಟಿ.ಸಿ‌ ನೌಕರರ‌ ಮುಷ್ಕರಕ್ಕೆ ಬಂಜಾರ‌ ವಿದ್ಯಾರ್ಥಿ ಸಂಘ‌ ಬೆಂಬಲ

 

 

ಸುದ್ದಿ ಕಣಜ.ಕಾಂ
ಶಿವಮೊಗ್ಗ: ಸರ್ಕಾರ ಬೇಡಿಕೆಗಳನ್ನು ಈಡೇರಿಸುವವರೆಗೆ ಕೆ.ಎಸ್.ಆರ್.ಟಿ.ಸಿ ನೌಕರರ ಪ್ರತಿಭಟನೆ ಮುಂದುವರಿಯಲಿದೆ ಎಂದು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನೌಕರರ ಕೂಟದ ರಾಜ್ಯ ಜಂಟಿ ಕಾರ್ಯದರ್ಶಿ ಸಂತೋಷ್ ಕುಮಾರ್ ತಿಳಿಸಿದರು.

READ | ಶಿವಮೊಗ್ಗದ 10 ಪರೀಕ್ಷಾ ಕೇಂದ್ರಗಳಲ್ಲಿ ಏ.11ರಂದು ನಡೆಯಲಿದೆ ಕೆ-ಸೆಟ್ ಪರೀಕ್ಷೆ , ಪರೀಕ್ಷಾ ಕೇಂದ್ರ ಮಾಹಿತಿ ಇಲ್ಲಿದೆ

ಮಾಧ್ಯಮಗೋಷ್ಠಿಯಲ್ಲಿ ಶುಕ್ರವಾರ ಮಾತನಾಡಿದ ಅವರು, ಆರನೇ ವೇತನ ಆಯೋಗದನ್ವಯ ವೇತನ ಮಂಜೂರು, ಸಾರಿಗೆ ನೌಕರರಿಗೆ ಸರ್ಕಾರಿ ನೌಕರರೆಂದು ಪರಿಗಣಿಸುವುದು ಸೇರಿ ವಿವಿಧ‌ ಬೇಡಿಕೆಗಳನ್ನು ಪೂರೈಸಬೇಕು ಎಂದು ಹೇಳಿದರು.

ಸಾರಿಗೆ ನೌಕರರು ಶ್ರಮವಹಿಸಿ ದುಡಿಯುತ್ತಿದ್ದಾರೆ. ಚಾಲಕರು, ನಿರ್ವಾಹಕರು ಹಾಗೂ ಸಿಬ್ಬಂದಿ ಶ್ರಮದ ಫಲವಾಗಿ ಈ‌ ಮಟ್ಟಕ್ಕೆ ಬೆಳೆದಿದೆ. ಆದರೆ, ನೌಕರರ ಹಿತ ಕಾಪಾಡುವಲ್ಲಿ‌ಮೀನಮೇಷ ಎಣಿಸಲಾಗುತ್ತಿದೆ ಎಂದು ಆರೋಪಿಸಿದರು.
ನಿವೃತ್ತಿ ಬಳಿಕ ಮಾಸಿಕ ಕೇವಲ 1,200 ರೂಪಾಯಿ ಪಿಂಚಣಿ‌ ಮಾತ್ರ ನೀಡಲಾಗುತ್ತಿದೆ. ಆರೋಗ್ಯ ವಿಮೆ ಇಲ್ಲ, ಕೆಲಸದ ಭದ್ರತೆಯಿಲ್ಲ‌ ಎಂದು ತಿಳಿಸಿದರು.
ಸರ್ಕಾರ ಕೆ.ಎಸ್‌.ಆರ್‌.ಟಿ.ಸಿ ಬಸ್ ನಿಲ್ದಾಣದಿಂದ ಖಾಸಗಿ ಬಸ್‌ಗಳಿಗೆ ಅವಕಾಶ ನೀಡಿರುವುದು ಸರಿಯಲ್ಲ ಎಂದು‌ ಹೇಳಿದರು.
ಬಂಜಾರ ವಿದ್ಯಾರ್ಥಿ ಸಂಘದ ರಾಜ್ಯಾಧ್ಯಕ್ಷ ಡಿ.ಆರ್.ಗಿರೀಶ್ ಮಾತನಾಡಿ, ರಾಜ್ಯ ರಸ್ತೆ ಸಾರಿಗೆ ನಿಗಮದ ನೌಕರರು ಕರೆ ನೀಡಿರುವ ಮುಷ್ಕರಕ್ಕೆ ನಮ್ಮ ಸಂಘದಿಂದ ಸಂಪೂರ್ಣ ಬೆಂಬಲವಿದೆ ಎಂದರು.
ಪ್ರಮುಖರಾದ ಶ್ರೀನಿವಾಸ್, ಗಣೇಶ್, ದೂದ್ಯನಾಯ್ಕ, ಕೃಷ್ಣನಾಯ್ಕ್, ಉಮಾ ಮಹೇಶ್ವರನಾಯ್ಕ್ ಉಪಸ್ಥಿತರಿದ್ದರು.

https://www.suddikanaja.com/2020/11/04/ranibennur-smg-railwa/

error: Content is protected !!