ಭದ್ರಾವತಿ, ಶಿವಮೊಗ್ಗದಲ್ಲಿ ಕೊರೊನಾ ಕೇಕೆ, ಒಂದೇ ದಿನ 300ಕ್ಕೂ ಹೆಚ್ಚು ಪ್ರಕರಣ ಪತ್ತೆ, ಮೂರು ಸಾವು

 

 

ಸುದ್ದಿ ಕಣಜ.ಕಾಂ
ಶಿವಮೊಗ್ಗ: ಭದ್ರಾವತಿ ಮತ್ತು ಶಿವಮೊಗ್ಗದಲ್ಲಿ ಸೋಂಕು ಮತ್ತೆ ಉಲ್ಬಣಿಸಿದೆ. ಶನಿವಾರ 314 ಜನರಿಗೆ ಕೊರೊನಾ ಪಾಸಿಟಿವ್ ಬಂದಿದೆ. 24 ವಿದ್ಯಾರ್ಥಿಗಳು ಮತ್ತು ಇಬ್ಬರು ಸಿಬ್ಬಂದಿಗೆ ಸೋಂಕು ತಗಲಿದೆ.

READ | ಶಿವಮೊಗ್ಗದಲ್ಲಿ ಹೇಗಿತ್ತು ಫಸ್ಟ್ ವೀಕೆಂಡ್ ಕರ್ಫ್ಯೂ, ಎಲ್ಲೆಲ್ಲಿ ಏನಾಯ್ತು?

ಒಂದೇ ದಿನ ಮೂವರು ಮೃತಪಟ್ಟಿದ್ದು, ಸಾವಿನ ಸಂಖ್ಯೆ ಇದುವರೆಗೆ 362ಕ್ಕೆ ಏರಿಕೆಯಾಗಿದೆ. ಇಂದು 149 ಜನ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. 2,373 ಮಾದರಿ ಸಂಗ್ರಹಿಸಿದ್ದು, 1,684 ವರದಿಗಳು ನೆಗೆಟಿವ್ ಬಂದಿವೆ.

ಸಕ್ರಿಯ ಪ್ರಕರಣ ಏರಿಕೆ | ಮೆಗ್ಗಾನ್ ಆಸ್ಪತ್ರೆಯ ಕೋವಿಡ್ ವಾರ್ಡ್ ನಲ್ಲಿ 240, ಖಾಸಗಿ ಆಸ್ಪತ್ರೆಯಲ್ಲಿ 165, ಹೋಮ್ ಐಸೋಲೇಷನ್ ನಲ್ಲಿ 1,044, ಟ್ರಿಯೇಜ್ ನಲ್ಲಿ 21 ಜನರಿದ್ದಾರೆ.
ತಾಲೂಕುವಾರು ವರದಿ | ಶಿವಮೊಗ್ಗ 123, ಭದ್ರಾವತಿ 79, ಶಿಕಾರಿಪುರ 8, ತೀರ್ಥಹಳ್ಳಿ, ಸೊರಬ 26, ಸಾಗರ 29, ಹೊಸನಗರ 28, ಹೊರ ಜಿಲ್ಲೆಯ 14 ಮಂದಿಯಲ್ಲಿ ಕೊರೊನಾ ವೈರಸ್ ಪತ್ತೆಯಾಗಿದೆ.

error: Content is protected !!