ಶಿವಮೊಗ್ಗದಲ್ಲಿ ಇದೇ ಮೊದಲು ಕೊರೊನಾ ಲಸಿಕೆ ಕೊರತೆ, ಕಾರಣವೇನು? ಯಾವ ವ್ಯಾಕ್ಸಿನ್ ಲಭ್ಯವಿಲ್ಲ?

 

 

ಸುದ್ದಿ ಕಣಜ.ಕಾಂ
ಶಿವಮೊಗ್ಗ: ಸರ್ಕಾರ ಪ್ರತಿಯೊಬ್ಬರು ಕಡ್ಡಾಯವಾಗಿ ಲಸಿಕೆ ಹಾಕಿಸಿಕೊಳ್ಳುವಂತೆ ನಿರಂತರ ಜಾಗೃತಿ ಮೂಡಿಸುತ್ತಿದೆ. ಆದರೆ, ಇದೇ ಮೊದಲ ಸಲ ಜಿಲ್ಲೆಯಲ್ಲಿ ಲಸಿಕೆ ಕೊರತೆ ಎದುರಾಗಿದೆ. ಹೀಗಾಗಿ, ಆಯುರ್ವೇದ ಆಸ್ಪತ್ರೆಗೆ ಬಂದವರು ಲಸಿಕೆ ಇಲ್ಲದೇ ವಾಪಸ್ ಮರಳಿದ ಘಟನೆ ಗುರುವಾರ ನಡೆದಿದೆ.

READ | ರಂಜಾನ್ ಗೆ ಕೋವಿಡ್ ಟಫ್ ರೂಲ್ಸ್, ಕಂಟೈನ್ಮೆಂಟ್ ಜೋನ್ ನಲ್ಲಿರುವ ಮಸೀದಿ ತೆರೆಯುವಂತಿಲ್ಲ, ಇನ್ನ್ಯಾವುದಕ್ಕೆ ನಿರ್ಬಂಧ ಹೇರಲಾಗಿದೆ ಗೊತ್ತಾ?

ಪ್ರಸ್ತುತ ಕೋವಿಶೀಲ್ಡ್ ಲಸಿಕೆ ದಾಸ್ತಾನು ಮುಗಿದಿದೆ. ಇದರ ಎರಡನೇ ಡೋಸ್ ಪಡೆಯಲು ಬಂದಿದ್ದ ಹಿರಿಯ ವಯಸ್ಕರು ಬಂದ ದಾರಿ ಸುಂಕವಿಲ್ಲದೇ ವಾಪಸ್ ಆಗಿದ್ದಾರೆ.

ಕೊರತಗೇನು ಕಾರಣ | ಲಸಿಕೆ ಪಡೆಯುವವರ ಸಂಖ್ಯೆಯಲ್ಲಿ ದಿಢೀರ್ ಏರಿಕೆಯಾಗಿದೆ. ನಿತ್ಯ 7 ಸಾವಿರ ಜನರಿಗೆ ಲಸಿಕೆ ನೀಡುವ ಗುರಿ ಇದೆ. ಆದರೆ, ಪೂರೈಕೆಯೇ ಕಡಿಮೆ ಆಗಿರುವುದರಿಂದ ಬಂದಿದ್ದಷ್ಟು ಲಸಿಕೆ ಜನರಿಗೆ ನೀಡಿದ್ದು, ಸ್ಟಾಕ್ ಮುಗಿದಿದೆ.
ಕೋವ್ಯಾಕ್ಸಿನ್ ಗಿಲ್ಲ ಕೊರತೆ | ಕೋವ್ಯಾಕ್ಸಿನ್ ಗೆ ಯಾವುದೇ ಕೊರತೆ ಇಲ್ಲ. ಪ್ರಸ್ತುತ ಜಿಲ್ಲೆಯಲ್ಲಿ 6,500 ಲಸಿಕೆ ಲಭ್ಯವಿದ್ದು, ಇನ್ನಷ್ಟು ಬರುವ ನಿರೀಕ್ಷೆ ಇದೆ. ಇಲ್ಲಿಯವರೆಗೆ ಕೋವಿಶೀಲ್ಡ್ 1.66 ಲಕ್ಷ ಹಾಗೂ ಕೋವ್ಯಾಕ್ಸಿನ್ 16,900 ಜನರಿಗೆ ನೀಡಲಾಗಿದೆ.

https://www.suddikanaja.com/2021/04/09/penalty-for-not-wearing-mask/

error: Content is protected !!